ನಾನೊಬ್ಬ ಹಿಂದೂ, ಹಿಂಸಕನಲ್ಲ: ಮುತಾಲಿಕ್‌

| Published : Jul 03 2024, 12:18 AM IST

ಸಾರಾಂಶ

ಹಿಂದೂಗಳು ಸಹಿಷ್ಣುತೆ, ಸಮಾನತೆ ಬೋಧಿಸುತ್ತಾರೆ. ಹಿಂದೂ ಅತ್ಯಂತ ಶ್ರೇಷ್ಠವಾದ ವಿಚಾರವನ್ನು ಜಗತ್ತಿಗೆ ಪ್ರಸಾರ ಮಾಡುತ್ತದೆ. ಇವರು ರಾಜಕಾರಣ ಸಾವಿರ ಮಾತನಾಡಲಿ. ಹಿಂದೂ ಧರ್ಮ, ದೇವತೆಗಳ ಬಗ್ಗೆ ಈ ರೀತಿ ಅಪಮಾನ ಮಾಡುವುದು ಸರಿಯಲ್ಲ.

ಧಾರವಾಡ:

ನಾನು ಗರ್ವದಿಂದ ಹೇಳುತ್ತೇನೆ ನಾನೊಬ್ಬ ಹಿಂದೂ. ನಾನೊಬ್ಬನೇ ಅಲ್ಲ ದೇಶದಲ್ಲಿ ಕೋಟ್ಯಂತರ ಜನರಿಗೆ ಹಿಂದೂ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ. ಈ ಭೂಮಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ನಾನು ಇಂತಹ ಭೂಮಿಯಲ್ಲಿ ಹುಟ್ಟಿದ್ದೇನೆ ಎಂದು ಹೇಳಲು ಹೆಮ್ಮೆ ಇದೆ. ನಾನು ಹಿಂಸಕ ಅಲ್ಲ. ಅದ್ದರಿಂದಲೇ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ವಿರೋಧಿಸುತ್ತೇನೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಹೇಳಿದರು.

ಹಿಂದೂಗಳು ಹಿಂಸಕರು ಎಂಬ ರಾಹುಲ್ ಗಾಂಧಿ ಹೇಳಿಕೆ ವಿಚಾರವಾಗಿ ಧಾರವಾಡದಲ್ಲಿ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದು, ರಾಹುಲ್ ಗಾಂಧಿ ಈ ರೀತಿ ಹೇಳಿಕೆ ಕೊಡುವ ಮುಖಾಂತರ ಕೋಟ್ಯಂತರ ಹಿಂದೂಗಳಿಗೆ ಅವಮಾನ ಮಾಡಿದ್ದಾರೆ. ಹಿಂದೂ ಧರ್ಮ ಎಂದಿಗೂ ಹಿಂಸೆ ಬೋಧಿಸಿಲ್ಲ. ಮುಂದೆ ಬೋಧಿಸುವುದೂ ಇಲ್ಲ. ಹಿಂದೂ ಎಂದರೆ ಸರ್ವೇ ಜನ ಸುಖಿನೋ ಭವಂತು. ಎಲ್ಲರೂ ಸುಖವಾಗಿರಲಿ ಎಂದು ಹೇಳುವ ಏಕೈಕ ಧರ್ಮವಿದು ಎಂದು ಹೇಳಿದ್ದಾರೆ.

ಹಿಂದೂಗಳು ಸಹಿಷ್ಣುತೆ, ಸಮಾನತೆ ಬೋಧಿಸುತ್ತಾರೆ. ಹಿಂದೂ ಅತ್ಯಂತ ಶ್ರೇಷ್ಠವಾದ ವಿಚಾರವನ್ನು ಜಗತ್ತಿಗೆ ಪ್ರಸಾರ ಮಾಡುತ್ತದೆ. ಇವರು ರಾಜಕಾರಣ ಸಾವಿರ ಮಾತನಾಡಲಿ. ಹಿಂದೂ ಧರ್ಮ, ದೇವತೆಗಳ ಬಗ್ಗೆ ಈ ರೀತಿ ಅಪಮಾನ ಮಾಡುವುದು ಸರಿಯಲ್ಲ. ಮೊಘಲರು, ಮುಸ್ಲಿಂರು, ಪೋರ್ಚುಗೀಸರು ಈ ದೇಶದ ಮೇಲೆ ದಾಳಿ ಮಾಡಿದರು. ಹಿಂಸೆ ಬೋಧಿಸುವವರು ಯಾರು ಎಂಬುದನ್ನು ಯೋಚನೆ ಮಾಡಬೇಕು. ಹಿಂದೂ ಧರ್ಮ, ಹಿಂದುತ್ವದ ಬಗ್ಗೆ ಸಾಕಷ್ಟು ಅಧ್ಯಯನ ಮಾಡಬೇಕು. ಅದರ ಬಗ್ಗೆ ಅನುಭವ ಪಡೆಯಬೇಕು ಎಂದು ರಾಹುಲ್‌ ಗಾಂಧಿ ಅವರಿಗೆ ಸಲಹೆ ನೀಡಿದರು.