ಸಾರಾಂಶ
ಹಳೇ ಮೈಸೂರು ಭಾಗದಲ್ಲಿ ಪ್ರಭಾವಿ ನಾಯಕರಾಗಿದ್ದ ಮಾಜಿ ರಾಜ್ಯಪಾಲ ದಿ.ಬಿ.ರಾಚಯ್ಯ ಅವರು ನನ್ನ ರಾಜಕೀಯ ಏಳ್ಗೆಗೆ ಕಾರಣರಾಗಿದ್ದರು ಎಂದು ತಮಗೆ ಶಕ್ತಿ ತುಂಬಿದ ಗುರುವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಮಿಸಿದರು. ಆಲೂರಿನಲ್ಲಿ ಮಾಜಿ ರಾಜ್ಯಪಾಲ ಬಿ.ರಾಚಯ್ಯ ಸ್ಮಾರಕವನ್ನು ಶನಿವಾರ ಉದ್ಘಾಟನೆ ಮಾಡಿ ಮಾತನಾಡಿದರು.
ಚಾಮರಾಜನಗರ: ಹಳೇ ಮೈಸೂರು ಭಾಗದಲ್ಲಿ ಪ್ರಭಾವಿ ನಾಯಕರಾಗಿದ್ದ ಮಾಜಿ ರಾಜ್ಯಪಾಲ ದಿ.ಬಿ.ರಾಚಯ್ಯ ಅವರು ನನ್ನ ರಾಜಕೀಯ ಏಳ್ಗೆಗೆ ಕಾರಣರಾಗಿದ್ದರು ಎಂದು ತಮಗೆ ಶಕ್ತಿ ತುಂಬಿದ ಗುರುವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಮಿಸಿದರು.
ಆಲೂರಿನಲ್ಲಿ ನಿರ್ಮಿಸಲಾಗಿರುವ ಮಾಜಿ ರಾಜ್ಯಪಾಲ ಬಿ.ರಾಚಯ್ಯ ಸ್ಮಾರಕವನ್ನು ಶನಿವಾರ ಉದ್ಘಾಟನೆ ಮಾಡಿದ ಅವರು ನನ್ನ ರಾಜಕೀಯ ಗುರುವಿನ ಋುಣ ತೀರಿಸುವ ಸಲುವಾಗಿ ನಾನು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಸ್ಮಾರಕ ನಿರ್ಮಾಣಕ್ಕೆ ಚಾಲನೆ ನೀಡಿದ್ದೆ, ಇದೀಗ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಸ್ಮಾರಕ ಉದ್ಘಾಟನೆ ಮಾಡುವ ಭಾಗ್ಯ ನನಗೆ ಲಭಿಸಿದೆ ಎಂದು ಗುರುವಿನ ಸ್ಮರಣೆ ಮಾಡಿಕೊಂಡರು.ಸಿದ್ದರಾಮಯ್ಯರಿಂದ ಉಪಕಾರ ಸ್ಮರಿಸಿದ ಶಾಸಕ ಎಆರ್‌ಕೆಚಾಮರಾಜನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ತಂದೆ ಬಿ.ರಾಚಯ್ಯನವರು ಮಾಡಿದ ಉಪಕಾರ ನೆವೆದು ಅವರ ಸ್ಮಾರಕ ನಿರ್ಮಾಣಕ್ಕೆ ಅನುವು ಮಾಡಿ ಉಪಕಾರ ಸ್ಮರಣೆ ಮಾಡಿದ್ದಾರೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮಾಜಿ ರಾಜ್ಯಪಾಲ ದಿ.ಬಿ.ರಾಚಯ್ಯರವರ ಸ್ಮಾರಕ ಉದ್ಘಾಟನೆ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಭೇಟಿಯಾದಾಗೆಲ್ಲ ಅವರು ನನ್ನ ಈ ರಾಜಕೀಯ ಬೆಳವಣಿಗೆಗೆ ನಿಮ್ಮ ತಂದೆಯವರೇ ಕಾರಣ ಎಂದು ನೆನಪಿಸಿಕೊಳ್ಳುತ್ತಿದ್ದರು ಎಂದರು.೨೦೧೮ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿ ₹೧ ಕೋಟಿ ನೀಡಿದ್ದರು, ಆನಂತರ ಸಚಿವರಾಗಿದ್ದ ಶ್ರೀರಾಮುಲು ₹೫೫ ಲಕ್ಷ, ಬಸವರಾಜ ಬೊಮ್ಮಾಯಿ ಅವರು ₹೧.೨೫ ಕೋಟಿ ನೀದಿದ್ದರು. ಆನಂತರ ಸಿದ್ದರಾಮಯ್ಯನವರು ಮತ್ತೇ ಮುಖ್ಯಮಂತ್ರಿಯಾಗಿ ೨ ಕೋಟಿ ನೀಡಿ ಭವನವನ್ನು ಸಂಪೂರ್ಣ ಮಾಡಿ ಅವರೇ ಉದ್ಘಾಟನೆಗೆ ಬಂದಿರುವುದು ನಮ್ಮ ಪುಣ್ಯ ಎಂದರು.ಸ್ಟಡಿ ಸೆಂಟರ್‌ಗೆ ಮನವಿ:ಇದು ಸ್ಪರ್ಧಾತ್ಮಕ ಯುಗ ಗ್ರಾಮಾಂತರದ ಪ್ರತಿಭೆಗಳು, ಬಡವರು, ಶೋಷಿತರ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಈ ಸ್ಮಾರಕ ಭವನದಲ್ಲಿ ಸರ್ಕಾರದ ವತಿಯಿಂದಲೇ ಒಂದು ಉತ್ತಮ ತರಬೇತಿ ಕೇಂದ್ರ ತೆರೆಯುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.ರಾಜಕೀಯ ಪುನರ್ಜನ್ಮ:ಸಿದ್ದರಾಮಯ್ಯ ಅವರಿಗೆ ನಮ್ಮ ತಂದೆ ಬಿ.ರಾಚಯ್ಯನವರು ರಾಜಕೀಯವಾಗಿ ಪ್ರೋತ್ಸಾಹಿಸಿದಂತೆ ೧೯ ವರ್ಷಗಳ ರಾಜಕೀಯ ವನವಾಸಕ್ಕೆ ಅಂತ್ಯ ಹಾಡಿ ನನಗೆ ರಾಜಕೀಯ ಪುನರ್ ಜನ್ಮ ನೀಡಿದವರು ಸಿದ್ದರಾಮಯ್ಯನವರು ಎಂದರು.