ಹುಟ್ಟೂರಿನ ಋಣ ತೀರಿಸಲು ನಾನು ಸದಾ ಸಿದ್ಧ

| Published : Sep 17 2024, 12:47 AM IST

ಸಾರಾಂಶ

ತಾಯಿ-ತಂದೆ, ಬಂಧು-ಬಳಗ, ಕಲಿತ ಶಾಲೆ, ಗುರು-ಹಿರಿಯರ ಕೃಪೆ, ಹುಟ್ಟೂರಿನ ಋಣವನ್ನು ತೀರಿಸಲು ನಾನು ಸದಾ ಸಿದ್ಧನಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಇಲಾಖೆ ಸಚಿವ ಆರ್.ಬಿ.ತಿಮ್ಮಾಪೂರ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಮುಧೋಳ

ತಾಯಿ-ತಂದೆ, ಬಂಧು-ಬಳಗ, ಕಲಿತ ಶಾಲೆ, ಗುರು-ಹಿರಿಯರ ಕೃಪೆ, ಹುಟ್ಟೂರಿನ ಋಣವನ್ನು ತೀರಿಸಲು ನಾನು ಸದಾ ಸಿದ್ಧನಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಇಲಾಖೆ ಸಚಿವ ಆರ್.ಬಿ.ತಿಮ್ಮಾಪೂರ ಭರವಸೆ ನೀಡಿದರು.

ತಾಲೂಕಿನ ಸ್ವಗ್ರಾಮ ಉತ್ತೂರಿನ ಪ್ರಾಥಮಿಕ ಶಾಲಾ ಆವರಣದಲ್ಲಿ ಸೋಮವಾರ ನಡೆದ ತಮ್ಮ 62ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ನಾನು ಕಲಿತಿರುವ ಶಾಲೆ, ನನಗೆ ಶಿಕ್ಷಣ ನೀಡಿದ ಗುರುಗಳನ್ನು, ಆಶೀರ್ವಾದ ಮಾಡಿದ ಹಿರಿಯರನ್ನು, ಹೆಜ್ಜೆ ಹೆಜ್ಜೆಗೆ ಮಾರ್ಗದರ್ಶನ ನೀಡಿದ ಸ್ನೇಹಿತರನ್ನು, ನನಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ ನನ್ನನ್ನು ಶಾಸಕರನ್ನಾಗಿ, ಸಚಿವರನ್ನಾಗಿ ಮಾಡಿದ ಕ್ಷೇತ್ರದ ಮತದಾರ ಪ್ರಭುಗಳನ್ನು ನಾನೆಂದಿಗೂ ಮರೆಯುವುದಿಲ್ಲ. ಅವರ ಋಣಭಾರ ನನ್ನ ಮೇಲೆ ಅಪಾರ ಪ್ರಮಾಣದಲ್ಲಿದೆ ಎಂದರು.ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಕೆ.ಟಿ.ಪಾಟೀಲ ಮಾತನಾಡಿ, ಸಚಿವ ಆರ್.ಬಿ.ತಿಮ್ಮಾಪೂರ ಅವರಿಂದ ನಮ್ಮೂರಿನ ಹೆಸರು ರಾಜ್ಯಮಟ್ಟಕ್ಕೆ ತಂದಿದ್ದಾರೆ. ಅದಕ್ಕಾಗಿ ಅವರನ್ನು ಗ್ರಾಮಸ್ಥರ ವತಿಯಿಂದ ಅಭಿನಂದಿಸುವುದಾಗಿ ತಿಳಿಸಿದರು.ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮಾತನಾಡಿ, ಓರ್ವ ಗ್ರಾಮೀಣ ಭಾಗದ ಹುಡುಗ ಇಂದು ರಾಜ್ಯಮಟ್ಟಕ್ಕೆ ಬೆಳದಿದ್ದಾನೆ. ಸಚಿವ ಆರ್.ಬಿ.ತಿಮ್ಮಾಪೂರ ಅವರ ಹಾಗೆ ತಾವೂ ಬೆಳೆಯಬೇಕು ಎಂದು ಕಿವಿಮಾತು ಹೇಳಿದರು.ಬಬಲಾದಿ ಸಿದ್ದರಾಮಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನೂರಂದಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಸಚಿವ ತಿಮ್ಮಾಪೂರ ಅವರ ಪತ್ನಿ ಶಶಿಕಲಾ ತಿಮ್ಮಾಪೂರ, ಪುತ್ರ ವಿನಯ, ಸಹೋದರರಾದ ಹೆಬ್ಬಾಳಪ್ಪ, ಶಂಕರ, ಹಣಮಂತ ಹಾಗೂ ಕುಟುಂಬದ ಸರ್ವ ಸದಸ್ಯರು, ಗ್ರಾಮ ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷರು, ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು. ವಿಶೇಷ ಪೂಜೆ:

ಉತ್ತೂರಿನ ಬಸಯ್ಯ ಅಜ್ಜನವರ ಗದ್ದುಗೆಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಗ್ರಾಮದ ವಿವಿಧ ಶಾಲೆಗಳಿಗೆ 21 ವಾಟರ್ ಪಿಲ್ಟರ್, ಗ್ರಾಮದ ಅಂಗವಿಕಲರಿಗೆ ಲ್ಯಾಪ್‌ಟಾಪ್ ಹಾಗೂ ಹೊಲಿಗೆ ಯಂತ್ರ, ಗ್ರಾಮದ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್‌ಬುಕ್ಸ್ ಮತ್ತು ಪೆನ್ ವಿತರಣೆ ಮಾಡಿ ಅನಾಥ ಮಕ್ಕಳ ಹಾಗೂ ಅಂಗವಿಕಲರ ಜೊತೆ ಬೆಳಗಿನ ಉಪಹಾರ ಸೇವಿಸಿದರು.ಮುಧೋಳ ಶಿವಾಜಿ ಸರ್ಕಲ್ ಹತ್ತಿರದ ಹನುಮಾನ ಮತ್ತು ಗಣಪತಿ ಮಂದಿರ, ಸೈಯ್ಯದಸಾಬ್‌ ದರ್ಗಕ್ಕೆ ತೆರಳಿ ಅಭಿಷೇಕ ಮತ್ತು ಪೂಜೆ ಸಲ್ಲಿಸಿದರು. ಗೋಶಾಲೆಯ ಗೋವುಗಳಿಗೆ ಪೂಜೆ ಮಾಡಿದರು. ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಲು, ಹಣ್ಣು ವಿತರಿಸಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಗೋವಿಂದಪ್ಪ ಗುಜ್ಜನ್ನವರ, ಗಿರೀಶಗೌಡ ಪಾಟೀಲ, ಅಶೋಕ ಕಿವಡಿ, ದಾನೇಶ ತಡಸಲೂರ, ಎಚ್.ಎ.ಕಡಪಟ್ಟಿ, ಸಂಜಯ ನಾಯಕ, ಕಲ್ಮೇಶ ಸಾರವಾಡ, ವಿನಯ ತಿಮ್ಮಾಪೂರ, ಬಸವರಾಜ ಜಮಖಂಡಿ, ಎಸ್.ಪಿ.ದಾನಪ್ಪಗೋಳ, ವೆಂಕಣ್ಣ ಗಿಡಪ್ಪನವರ, ಡಾ.ತಿಮ್ಮಣ್ಣ ಅರಳಿಕಟ್ಟಿ, ಶಂಕರ ತಿಮ್ಮಾಪೂರ, ರಾಜೂಗೌಡ ಪಾಟೀಲ, ಭೀಮಶಿ ಸರಕಾರಕುರಿ, ರಾಜೂಗೌಡ ನ್ಯಾಮಗೌಡ, ರಾಜು ಬಾಗವಾನ, ಸದೂಗೌಡ ಪಾಟೀಲ, ಸುಧಾಕರ ಸಾರವಾಡ, ಗಿರೀಶ ಲಕ್ಷಾಣಿ, ಮಹಾಂತೇಶ ಮಾಚಕನೂರ, ಚಿನ್ನಪ್ಪ ಅಂಬಿ, ಪರಮಾನಂದ ಕುಟರಟ್ಟಿ, ನಾರಾಯಣ ಹವಾಲ್ದಾರ, ಮುದಕಣ್ಣ ಅಂಬಿಗೇರ, ರಾಘು ಮೋಕಾಸಿ, ಹಣಮಂತ ತಿಮ್ಮಾಪೂರ, ಹಣಮಂತ ಗುರವ, ವಿಠ್ಠಲ ಹವಡಿ, ಕಲ್ಮೇಶ ಪಂಚಗಾಂವಿ, ಪಾಂಡುಗೌಡ ಪಾಟೀಲ, ದಿನೇಶ ಕಕರಡ್ಡಿ, ಪಾಂಡು ಮುಳ್ಳೂರ, ಎಲ್.ಎನ್.ಸುಣಗದ, ಕರೆಪ್ಪ ಕಣಗಾರ, ರಂಗಪ್ಪ ಮಂಟೂರ, ಸುನಂದಾ ತೇಲಿ, ಮಂಜುನಾಥ ಮಂಟೂರ, ಮಹೀಬೂಬ್‌ ಬಾಗವಾನ, ಪರಸಪ್ಪ ಜನವಾಡ, ಸಂಜಯ ತಳೇವಾಡ, ಬಸವರಾಜ ಬಳಿಗಾರ, ವಸೀಮ್‌ ಬಿಸ್ತಿ ಸೇರಿದಂತೆ ನೂರಾರು ಸಂಖ್ಯೆಯ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ವಿವಿಧ ಇಲಾಖೆಗಳ ಅಧಿಕಾರಿಗಳು ಸಚಿವರಿಗೆ ಹೂಗುಚ್ಚ ನೀಡಿ, ಸಿಹಿ ತಿನಿಸಿ ಸಚಿವರ ಹುಟ್ಟು ಹಬ್ಬಕ್ಕೆ ಶುಭಾಶಯ ತಿಳಿಸಿದರು.ಸಿಎಸ್‌ಆರ್ ₹5 ಕೋಟಿ ಅನುದಾನದಲ್ಲಿ ತಾನು ಕಲಿತ ಉತ್ತೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದೇನೆ. ಉತ್ತೂರಿನ ಪ್ರಾಥಮಿಕ ಆಸ್ಪತ್ರೆಗೆ ₹2 ಕೋಟಿ ಅನುದಾನ ಮಂಜೂರು ಮಾಡಿಸಿದ್ದೇನೆ. ಮತಕ್ಷೇತ್ರ ವ್ಯಾಪ್ತಿಯ ಎಲ್ಲ ಗ್ರಾಮಗಳ ಅಭಿವೃದ್ಧಿ ತಾವು ಪ್ರಾಮಾಣಿಕ ಕೆಲಸ ಮಾಡುತ್ತಿವೆ. ಗ್ರಾಮಸ್ಥರು ನನ್ನನ್ನು ಅತೀ ಪ್ರೀತಿ ವಿಶ್ವಾಸ ಮತ್ತು ಮಮತೆಯಿಂದ ಬೆಳಸಿ, ಆಶೀರ್ವಾದ ಮಾಡಿ, ಸಕಲ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದಾರೆ. ಅಧಿಕಾರ ಶಾಶ್ವತವಲ್ಲ, ಅಧಿಕಾರ ಇರುವಾಗ ನನ್ನಿಂದ ಏನು ಸಾಧ್ಯವಾಗುತ್ತೆ. ಅದನ್ನು ಮಾಡಬೇಕೆಂಬ ಹಂಬಲ ನನ್ನಲ್ಲಿದೆ.

-ಆರ್.ಬಿ.ತಿಮ್ಮಾಪೂರ, ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಇಲಾಖೆ ಸಚಿವ.