ನನ್ನ ಅಭಿವೃದ್ಧಿ ಕಾರ್ಯಗಳ ಶ್ರೀರಕ್ಷೆಯಿಂದಲೇ ಗೆಲ್ಲಲಿದ್ದೇನೆ: ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ

| Published : Mar 18 2024, 01:49 AM IST

ನನ್ನ ಅಭಿವೃದ್ಧಿ ಕಾರ್ಯಗಳ ಶ್ರೀರಕ್ಷೆಯಿಂದಲೇ ಗೆಲ್ಲಲಿದ್ದೇನೆ: ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ನಾನು ವಯಕ್ತಿಕವಾಗಿ ವಿರೋಧ ಪಕ್ಷದ ಅಭ್ಯರ್ಥಿ ಪರ ಮಾತನಾಡುವುದಿಲ್ಲ. ನಾನು ಏನಿದ್ದರೂ ನನ್ನ ಕಾರ್ಯಕ್ರಮದ ಬಗ್ಗೆ, ನನ್ನ ಮುಂದಿನ ವಿಚಾರಧಾರೆಯ ಬಗ್ಗೆ ಹೇಳಿ ಮತ ಕೇಳುತ್ತೇನೆ ಹೊರತು ಇಡೀ ನನ್ನ ರಾಜಕೀಯ ಜೀವನದಲ್ಲಿ ವಿರೋಧ ಅಭ್ಯರ್ಥಿಗಳ ಬಗ್ಗೆ ಮಾತನಾಡಿಲ್ಲ, ಮುಂದೆಯೂ ಮಾತನಾಡುವುದಿಲ್ಲ

ಕನ್ನಡಪ್ರಭವಾರ್ತೆ ದಾಬಸ್‌ಪೇಟೆ

ತುಮಕೂರು ಲೋಕಸಭಾ ಚುನಾವಣೆಗೆ ಬಿಜೆಪಿ ಪಕ್ಷದಿಂದ ಹೊರಗಿನವರಿಗೆ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಆಂತರಿಕ ಜಗಳ ನಡೆಯುತ್ತಿರುವ ಬಗ್ಗೆ ನನಗೆ ಗೊತ್ತಿಲ್ಲ. ನಾನು ಈ ಹಿಂದೆ ಲೋಕಸಭಾ ಸದಸ್ಯನಾಗಿ ಕೆಲಸ ಮಾಡಿರುವ ಅಭಿವೃದ್ಧಿ ಕಾರ್ಯಗಳ ಶ್ರೀರಕ್ಷೆಯಿಂದಲೇ ಗೆಲುವು ಸಾಧಿಸಲಿದ್ದೇನೆ ಎಂದು ತುಮಕೂರು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

ವನಕಲ್ಲು ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಬೇರೆ ಪಕ್ಷದ ಬಗ್ಗೆ ಮಾತನಾಡುವುದಿಲ್ಲ. ಈ ಹಿಂದೆ ಕಾಂಗ್ರೆಸ್ ಜೆಡಿಎಸ್ ಮೈತ್ರಿಯಾಗಿದ್ದಲೂ ತುಮಕೂರಿನಲ್ಲಿ ಸೋಲಾಗಿತ್ತು. ಆದರೆ ಈ ಬಾರಿ ಆ ರೀತಿ ಆಗುವುದಿಲ್ಲ. ಕಳೆದ ಬಾರಿ ಟಿಕೆಟ್ ಮಿಸ್ ಆಗಿತ್ತು. ಆದರೆ ಈ ಬಾರಿ ನನಗೆ ಟಿಕೆಟ್ ನೀಡಿದ್ದು, ಗೆಲ್ಲುವುದೇ ನಮ್ಮ ಮುಂದಿನ ಗುರಿಯಾಗಿದೆ. ಈ ಹಿಂದೆ ಜನಪರ ಅಭಿವೃದ್ದಿ ಕೆಲಸ ಮಾಡಿ ಜನರ ಮನಸ್ಸಿನಲ್ಲಿದ್ದೇನೆ. ಈ ಬಾರಿಯ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದರು.

ಜನರ ತೀರ್ಮಾನವೇ ಅಂತಿಮ:

ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಪಕ್ಷ ಮೈತ್ರಿಯಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಾರಿ ಯಾರನ್ನು ಗೆಲ್ಲಿಸಬೇಕು ಎಂಬ ತೀರ್ಮಾನವನ್ನು ಜನರು ಮಾಡುತ್ತಾರೆ. ಜನರ ತೀರ್ಮಾನವೇ ಅಂತಿಮ. ಅಭಿವೃದ್ದಿಗೆ ಮತ ನೀಡುವ ವಿಶ್ವಾಸವಿದೆ ಎಂದರು.

ಜನರ ಜೊತೆ ಸದಾ ಇದ್ದೇನೆ:

ನಾನು ಈ ಹಿಂದೆ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸದಸ್ಯನಾಗಿದ್ದಾಗ ಕ್ರಿಯಾಶೀಲ ಅಭಿವೃದ್ದಿ ಕೆಲಸ ಮಾಡಿದ್ದೇನೆ. ನನಗೆ 2019 ರಲ್ಲಿ ಟಿಕೆಟ್ ಸಿಗಲಿಲ್ಲ. ಆದರೂ ಮಾಜಿ ಲೋಕಸಭಾ ಸದಸ್ಯನಾಗಿ ಕ್ಷೇತ್ರಕ್ಕೆ ಸಾಧ್ಯವಾದಷ್ಟು ಕೆಲಸ ಮಾಡಿಕೊಂಡು ನಿರಂತರ ಜನರ ಸಂಪರ್ಕದಲ್ಲಿದ್ದೇನೆ. ನನ್ನ ರಾಜಕೀಯ ಆರಂಭವಾದ ದಿನದಿಂದಲೂ ಜನರ ಜೊತೆಯಲ್ಲಿಯೇ ಇದ್ದೇನೆ. ನಾನು ವಯಕ್ತಿಕವಾಗಿ ವಿರೋಧ ಪಕ್ಷದ ಅಭ್ಯರ್ಥಿ ಪರ ಮಾತನಾಡುವುದಿಲ್ಲ. ನಾನು ಏನಿದ್ದರೂ ನನ್ನ ಕಾರ್ಯಕ್ರಮದ ಬಗ್ಗೆ, ನನ್ನ ಮುಂದಿನ ವಿಚಾರಧಾರೆಯ ಬಗ್ಗೆ ಹೇಳಿ ಮತ ಕೇಳುತ್ತೇನೆ ಹೊರತು ಇಡೀ ನನ್ನ ರಾಜಕೀಯ ಜೀವನದಲ್ಲಿ ವಿರೋಧ ಅಭ್ಯರ್ಥಿಗಳ ಬಗ್ಗೆ ಮಾತನಾಡಿಲ್ಲ, ಮುಂದೆಯೂ ಮಾತನಾಡುವುದಿಲ್ಲ ಎಂದರು.