ಅಪಪ್ರಚಾರ ಮಾಡುತ್ತಿಲ್ಲ, ಮುಖಕ್ಕೆ ಕನ್ನಡಿ ಹಿಡಿದಿರುವೆ

| Published : Apr 26 2024, 12:54 AM IST

ಅಪಪ್ರಚಾರ ಮಾಡುತ್ತಿಲ್ಲ, ಮುಖಕ್ಕೆ ಕನ್ನಡಿ ಹಿಡಿದಿರುವೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ: ನಾನೇನು ಅಪಪ್ರಚಾರ ಮಾಡುತ್ತಿಲ್ಲ. ನಾನು ಅವರ ಮುಖಕ್ಕೆ ಕನ್ನಡಿ ತೋರಿಸುತ್ತಿದ್ದೇನೆ ಅಷ್ಟೇ ಎಂದು ಜಗದೀಶ್ ಶೆಟ್ಟರ್ ಹೇಳಿಕೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ತಿರುಗೇಟು ನೀಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ನಾನೇನು ಅಪಪ್ರಚಾರ ಮಾಡುತ್ತಿಲ್ಲ. ನಾನು ಅವರ ಮುಖಕ್ಕೆ ಕನ್ನಡಿ ತೋರಿಸುತ್ತಿದ್ದೇನೆ ಅಷ್ಟೇ ಎಂದು ಜಗದೀಶ್ ಶೆಟ್ಟರ್ ಹೇಳಿಕೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ತಿರುಗೇಟು ನೀಡಿದರು.

ಕಾಂಗ್ರೆಸ್ ಪಕ್ಷದವರು ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳಕರ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆನ್ನುವ ಜಗದೀಶ್‌ ಶೆಟ್ಟರ್ ಹೇಳಿಕೆಗೆ ನಗರದಲ್ಲಿ ಗುರುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ನನ್ನ ಜೀವನದಲ್ಲಿ ಇಂತಹದನ್ನು ನೋಡಿಲ್ಲ ಎಂದು ಶೆಟ್ಟರ್ ಹೇಳಿದ್ದಾರಲ್ಲ ಎನ್ನುವ ಪ್ರಶ್ನೆಗೆ, ಅವರ ಜೀವನದಲ್ಲಿ ಈ ರೀತಿ ನೋಡಿಲ್ಲ ಎಂದರೆ ಅದಕ್ಕೆ ಉತ್ತರ ಕೊಡಲು ಆಗುವುದಿಲ್ಲ. ಅವರು ಜೀವನದಲ್ಲಿ ಏನು ಮಾಡಿದ್ದಾರೆಂದು ನಾನು ಕೇಳಲು ಬಯಸುತ್ತೇನೆ. ನಾವು ಬೆಳಗಾವಿಯವರು. ಬೆಳಗಾವಿಯ ಜನರು ಅವರನ್ನು ಹೊರಗೆ ಕಳಿಸಲು ಈಗಾಗಲೇ ನಿರ್ಧಾರ ಮಾಡಿಯಾಗಿದೆ ಎಂದು ಗುಡುಗಿದರು.

ಸೋಲಿನ ಹತಾಶೆಯಿಂದ ಈ ರೀತಿ ಸುಳ್ಳು ಹೇಳುತ್ತಿದ್ದಾರೆನ್ನುವ ಶೆಟ್ಟರ್ ಮಾತಿಗೆ, ಅದು ಜೂನ್‌ 4 ರಂದು ಗೊತ್ತಾಗುತ್ತದೆ ಎಂದಷ್ಟೇ ಹೇಳಿದರು.

ಎಐಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಭೇಟಿ ಕುರಿತು ಪ್ರಶ್ನಿಸಿದಾಗ, ಬೆಳಗಾವಿ ಲೋಕಸಭಾ ಕ್ಷೇತ್ರ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಯಾವ ರೀತಿಯ ವಾತಾವರಣವಿದೆ?, ಕೊನೆಯ ಕ್ಷಣದ ಮಾಹಿತಿ ಏನಿದೆ ಎಂದು ನೋಡಿಕೊಂಡು ಹೋಗಲು ಅವರು ಆಗಮಿಸಿದ್ದಾರೆ. ಅನೇಕ ವಿಷಯಗಳನ್ನು ಅವರೊಂದಿಗೆ ಚರ್ಚಿಸಲಾಗಿದೆ ಎಂದು ವಿವರಿಸಿದರು.