ಬಿಜೆಪಿ ನನ್ನನ್ನು ಹೊರ ಹಾಕಿದ್ದಕ್ಕೆ ಪಾಪ್ಯುಲರ್ ಆಗಿದ್ದೇನೆ: ಯತ್ನಾಳ್

| Published : Nov 21 2025, 01:30 AM IST

ಸಾರಾಂಶ

ಯತ್ನಾಳ್ ಬಿಜೆಪಿಯಲ್ಲಿ ಮುಂದುವರಿದರೆ ನನ್ನ ಮಗನಿಗೆ ಭವಿಷ್ಯವಿಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನನ್ನನ್ನು ಪಕ್ಷದಿಂದ ಹೊರಹಾಕಿಸಿದರು .

ನಾಗಮಂಗಲ: ಬಿಜೆಪಿಯಿಂದ ನನ್ನನ್ನು ಹೊರಹಾಕಿದ್ದಕ್ಕೆ ಇಷ್ಟೊಂದು ಪಾಪ್ಯುಲರ್ ಆಗಿದ್ದೇನೆ. ಅದಕ್ಕಾಗಿ ಬಿ.ಎಸ್.ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಪಟ್ಟಣದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಬಿಜೆಪಿಯಲ್ಲಿ ಮುಂದುವರಿದರೆ ನನ್ನ ಮಗನಿಗೆ ಭವಿಷ್ಯವಿಲ್ಲ. ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನನ್ನನ್ನು ಪಕ್ಷದಿಂದ ಹೊರಹಾಕಿಸಿದರು ಎಂದು ಆರೋಪಿಸಿದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರನ್ನು ಜೆಡಿಎಸ್‌ನಿಂದ ಹೊರ ಹಾಕಿದ್ದಕ್ಕೆ ಮತ್ತು ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿಯಿಂದ ಹೊರಹಾಕಿದ್ದಕ್ಕೆ ಈ ಮೂವರು ಮುಖ್ಯಮಂತ್ರಿಯಾದರು. ನನ್ನನ್ನೂ ಈಗ ಬಿಜೆಪಿಯಿಂದ ಹೊರಹಾಕಲಾಗಿದೆ. 2028ಕ್ಕೆ ನಾನೇ ರಾಜ್ಯದ ಮುಖ್ಯಮಂತ್ರಿಯಾಗುತ್ತೇನೆಂದು ಭವಿಷ್ಯ ನುಡಿದರು.