ಜನರೊಂದಿಗೆ ಇದ್ದು ಒಳ್ಳೆ ಕೆಲಸ ಮಾಡುತ್ತೇನೆ

| Published : Apr 08 2025, 12:33 AM IST

ಸಾರಾಂಶ

ದೇವೇಗೌಡರ ಕಾಲದಿಂದಲ್ಲೂ ಜನರು ಸಹಕಾರ ನೀಡಿದ್ದಾರೆ ಹಾಗೂ ಅವರು ನನಗಾಗಿ ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ, ನಾನು ಅವರೊಟ್ಟಿಗೆ ಇದ್ದು, ಒಳ್ಳೆಯ ಕೆಲಸ ಮಾಡ್ತೀನಿ ಮತ್ತು ಅವರಿಗೆ ಕೈಲಾದ ಸಹಾಯ ಮಾಡಿದ್ದೀನಿ ಹಾಗೂ ಅವರ ಜೊತೆ ಸದಾ ಕಾಲ ಇರ್ತಿನಿ ಮತ್ತು ನನ್ನ ಕೈಲಾದ ಸೇವೆ ಮಾಡ್ತೇನೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಭವಾನಿ ರೇವಣ್ಣ ತಿಳಿಸಿದರು. ನನಗೆ ಹಾಸನಕ್ಕೆ ಬರಲು ಅವಕಾಶ ಸಿಕ್ಕಿದೆ, ಹಾಗಾಗಿ ಜನರ ಜೊತೆ ಇರ್ತೇನೆ ಎಂದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ದೇವೇಗೌಡರ ಕಾಲದಿಂದಲ್ಲೂ ಜನರು ಸಹಕಾರ ನೀಡಿದ್ದಾರೆ ಹಾಗೂ ಅವರು ನನಗಾಗಿ ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ, ನಾನು ಅವರೊಟ್ಟಿಗೆ ಇದ್ದು, ಒಳ್ಳೆಯ ಕೆಲಸ ಮಾಡ್ತೀನಿ ಮತ್ತು ಅವರಿಗೆ ಕೈಲಾದ ಸಹಾಯ ಮಾಡಿದ್ದೀನಿ ಹಾಗೂ ಅವರ ಜೊತೆ ಸದಾ ಕಾಲ ಇರ್ತಿನಿ ಮತ್ತು ನನ್ನ ಕೈಲಾದ ಸೇವೆ ಮಾಡ್ತೇನೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಭವಾನಿ ರೇವಣ್ಣ ತಿಳಿಸಿದರು.

ಮಗನ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯ ಅಪಹರಣ ಕೇಸಿನಲ್ಲಿ ಜಾಮೀನು ಪಡೆದು ಹತ್ತು ತಿಂಗಳ ನಂತರ ಹಾಸನ ಮತ್ತು ಮೈಸೂರಿಗೆ ತೆರಳಲು ಕೋರ್ಟ್‌ ಅನುಮತಿ ನೀಡಿದ ನಂತರ ಸೋಮವಾರ ಪಟ್ಟಣದ ತಮ್ಮ ನಿವಾಸಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟಾಕಿ ಸಿಡಿಸಿ, ಹೂವಿನ ಮಳೆಗೆರೆದು, ಆರತಿ ಬೆಳಗಿ, ಬೂದುಗುಂಬಳ ನೀವಳಿಸಿ, ಅತ್ಮೀಯವಾಗಿ ಸ್ವಾಗತಿಸಿದ ನಂತರ ಮಾಧ್ಯಮದ ಜತೆ ಮಾತನಾಡಿದರು. ನಾನು ಬರುತ್ತಿರುವ ವಿಷಯ ಯಾರಿಗೂ ತಿಳಿಸಿರಲಿಲ್ಲ, ಆದರೂ ಹೇಗೋ ಮಾಹಿತಿ ಪಡೆದು ಹಿರಿಸಾವೆಯಿಂದ ನನ್ನೊಟ್ಟಿಗೆ ತುಂಬಾ ಜನ ಬಂದರು ಮತ್ತು ೨೦ಕ್ಕೂ ಹೆಚ್ಚು ಕಡೆ ಅತ್ಮೀಯವಾಗಿ ಸ್ವಾಗತಿಸಿದರು, ಇಷ್ಟೊಂದು ಜನ ನೋಡಿ ನನಗೆ ಮುಜುಗರ ಆಯಿತು ಹಾಗೂ ತುಂಬಾ ಸಂತೋಷ ಆಗಿದೆ, ಜನರಿಗೆ ಋಣಿಯಾಗಿ ಇರ್ತೇನೆ ಎಂದರು.

ನನಗೆ ಹಾಸನಕ್ಕೆ ಬರಲು ಅವಕಾಶ ಸಿಕ್ಕಿದೆ, ಹಾಗಾಗಿ ಜನರ ಜೊತೆ ಇರ್ತೇನೆ ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿ ಜನರೊಟ್ಟಿಗೆ ನಾನೇನು ಡಿಸ್ಕನೆಕ್ಟ್ ಆಗಿರಲಿಲ್ಲ, ಜನರ ಜೊತೆ ಇದ್ದೆ, ಮುಂದೆಯೂ ಇರ್ತೀನಿ, ಹಾಸನದಿಂದ ದೂರು ಉಳಿಯೊಲ್ಲ ಎಂದರು.