ಸಾರಾಂಶ
ಯಕ್ಷಗಾನದೊಳಗೆ ಸಲಿಂಗಕಾಮ ಬೆಳೆಯುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ನೀಡಿರುವ ಹೇಳಿಕೆಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ರಾಜ್ಯಾಧ್ಯಕ್ಷರು ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಪುರುಷೋತ್ತಮ ಬಿಳಿಮಲೆ ಅವರು ಎಲ್ಲ ಕಲಾವಿದರಿಗೆ ಹೀಗೆ ಹೇಳಿದ್ದು ಸರಿಯಲ್ಲ. ಪ್ರಪಂಚದಲ್ಲಿ ಸರಿ ತಪ್ಪು ಒಳ್ಳೆಯದು ಕೆಟ್ಟದು ಸಹಜ. ಯಕ್ಷಗಾನ ನಮ್ಮ ಮಣ್ಣಿನ ಶ್ರೀಮಂತ ಕಲೆ, ಯಕ್ಷಗಾನದ ಶ್ರೀಮಂತಿಕೆ ಹೆಚ್ಚಿಸುವ ಕಡೆಗೆ ಗಮನಹರಿಸೋಣ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ರಾಜ್ಯಾಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದ್ದಾರೆ.ಯಕ್ಷಗಾನದೊಳಗೆ ಸಲಿಂಗಕಾಮ ಬೆಳೆಯುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ನೀಡಿರುವ ಹೇಳಿಕೆಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ರಾಜ್ಯಾಧ್ಯಕ್ಷರು ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಪುರುಷೋತ್ತಮ ಬಿಳಿಮಲೆ ಯಾವ ಅರ್ಥದಲ್ಲಿ ಈ ಮಾತು ಹೇಳಿದ್ದಾರೋ ಗೊತ್ತಿಲ್ಲ. ನಾನು ಅವರನ್ನು ಸಂಪರ್ಕ ಮಾಡಲು ಪ್ರಯತ್ನ ಮಾಡಿರುವೆ. ಆದರೆ ಅವರ ಫೋನ್ ಸ್ವಿಚ್ ಆಫ್ ಇತ್ತು. ಪುರುಷೋತ್ತಮ ಬಿಳಿಮಲೆ ರಾಷ್ಟ್ರ ಮಟ್ಟದ ಮೇಧಾವಿ ಸಾಹಿತಿ. ಸಾಮಾನ್ಯ ವ್ಯಕ್ತಿಗಳು ಈ ಮಾತು ಹೇಳಿದರೆ ಖಂಡಿಸಬಹುದಿತ್ತು ಎಂದರು.ಈ ಸಮಸ್ಯೆ ಗೊಂದಲ ಆಗದಂತೆ ಬಗೆಹರಿಯಲಿ. ಕಲಾವಿದರು ಪ್ರತಿಭಟನೆಗೆ ಮುಂದಾಗಬಾರದು, ಚರ್ಚೆಯನ್ನು ಸೌಹಾರ್ದಯುತವಾಗಿ ಬಗೆಹರಿಸೋಣ ಎಂದು ಹೇಳಿದರು.;Resize=(128,128))
;Resize=(128,128))
;Resize=(128,128))
;Resize=(128,128))