ಸಾರಾಂಶ
ಶಿರಾ: ತಾಲೂಕು ಕುಡಿಯುವ ನೀರಿನ ಸಮಸ್ಯೆಯಿಂದ ತತ್ತರಿಸಿದ್ದು, ಪ್ರಸ್ತುತ ಹೇಮಾವತಿ, ಎತ್ತಿನ ಹೊಳೆ, ಭದ್ರಾ ಮೇಲ್ದಂಡೆ ಯೋಜನೆಯಡಿಯಲ್ಲಿ ಸುಮಾರು 4 ಟಿಎಂಸಿ ನೀರು ಹರಿಯುವುದರಿಂದ ಮುಂದಿನ ಪೀಳಿಗೆಗೆ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವುದಿಲ್ಲ ಎಂದು ಶಾಸಕ ಡಾ.ಟಿ.ಬಿ.ಜಯಚಂದ್ರ ಹೇಳಿದರು.
ಶಿರಾ: ತಾಲೂಕು ಕುಡಿಯುವ ನೀರಿನ ಸಮಸ್ಯೆಯಿಂದ ತತ್ತರಿಸಿದ್ದು, ಪ್ರಸ್ತುತ ಹೇಮಾವತಿ, ಎತ್ತಿನ ಹೊಳೆ, ಭದ್ರಾ ಮೇಲ್ದಂಡೆ ಯೋಜನೆಯಡಿಯಲ್ಲಿ ಸುಮಾರು 4 ಟಿಎಂಸಿ ನೀರು ಹರಿಯುವುದರಿಂದ ಮುಂದಿನ ಪೀಳಿಗೆಗೆ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವುದಿಲ್ಲ ಎಂದು ಶಾಸಕ ಡಾ.ಟಿ.ಬಿ.ಜಯಚಂದ್ರ ಹೇಳಿದರು.
ನಗರದ ಕುಡಿಯುವ ನೀರಿನ ಜಲಸಂಗ್ರಹಾಗಾರವಾದ ದೊಡ್ಡಕೆರೆ ಹೇಮಾವತಿ ನೀರಿನಿಂದ ತುಂಬಿ ಕೋಡಿ ಹರಿದಿದ್ದು, ಸೋಮವಾರ ದೊಡ್ಡ ಕೆರೆಗೆ ದಂಪತಿ ಸಮೇತ ಬಾಗಿನ ಅರ್ಪಿಸಿ ಮಾತನಾಡಿದರು. ಮುಂದಿನ ಪೀಳಿಗೆಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಬಾರದೆಂಬ ಉದ್ದೇಶದಿಂದ ಹೇಮಾವತಿ, ಎತ್ತಿನ ಹೊಳೆ ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ತರುವ ಕೆಲಸ ಮಾಡಿದ್ದೇನೆ ಶಿರಾ ತಾಲೂಕಿನಲ್ಲಿ ಈ ವರ್ಷ ಮಳೆ ಬಂದಿಲ್ಲ. ಆದರೂ ನಮ್ಮ ತಾಲೂಕಿನ ಕಳ್ಳಂಬೆಳ್ಳ, ಶಿರಾ ದೊಡ್ಡ ಕೆರೆ, ಯಲಿಯೂರು, ಚಿಕ್ಕಗೂಳ, ದೊಡ್ಡಗೂಳ ಕೆರೆಗಳು ತುಂಬಿವೆ. ಶೀಘ್ರದಲ್ಲಿಯೇ ಮದಲೂರು ಕೆರೆಗೂ ನೀರು ಹರಿಯಲಿದೆ. ಮದಲೂರು ಕೆರೆಯನ್ನೂ ತುಂಬಿಸುವ ಕಾರ್ಯ ಮಾಡುತ್ತೇನೆ ಎಂದರು. ಶಿರಾ ನಗರದ ಪ್ರತಿಯೊಂದು ಮನೆಗೂ ಕುಡಿಯುವ ನೀರು ನೀಡುವ ಉದ್ದೇಶದಿಂದ 85 ಕೋಟಿ ರು. ವೆಚ್ಚದಲ್ಲಿ ಮನೆ ಮನೆಗೂ ನೀರುವ ಒದಗಿಸುವ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಈ ಯೋಜನೆಗೆ ಇನ್ನೂ 25 ಕೋಟಿಗೆ ರು.ಗಳ ಅನುದಾನಕ್ಕೆ ಮನವಿ ಸಲ್ಲಿಸಿದ್ದೇನೆ. ಮುಂದಿನ ದಿನಗಳಲ್ಲಿ ಯಾರೂ ಸಹ ನೀರಿಗಾಗಿ ನಲ್ಲಿಗಳ ಬಳಿ ಹೋಗುವುದು ಬೇಡ ಎಲ್ಲರ ಮನೆಗೆ ನೀರು ತಲುಪತ್ತದೆ ಎಂದರು. ಹರಿದ್ವಾರದಲ್ಲಿ ಪ್ರತಿನಿತ್ಯ ಗಂಗೆಯನ್ನು ಪೂಜೆ ಮಾಡುತ್ತಾರೆ. ಅದೇ ರೀತಿಯಲ್ಲಿ ಶಿರಾದಲ್ಲೂ ಹೇಮಾವತಿ ನೀರನ್ನು ಪೂಜೆ ಮಾಡಬೇಕು. ಯಾವ ರೀತಿ ಹರಿದ್ವಾರದಲ್ಲಿ ಮಾಡಿದ್ದಾರೋ ಅದೇ ರೀತಿ ಶಿರಾದಲ್ಲಿ ಪ್ರತಿ ಹೆಣ್ಣು ಮಕ್ಕಳು ಗಂಗಾರತಿ ಪೂಜೆ ಮಾಡಬೇಕು. ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡುತ್ತೇನೆ. ನಗರಸಭೆ ಸದಸ್ಯರು ಈ ಬಗ್ಗೆ ಕಾರ್ಯಕ್ರಮ ರೂಪಿಸಿ ಎಂದರು. ಶಿರಾ ತಾಲೂಕಿಗೆ ಮೊದಲನೆ ದೇವರು. ಹೇಮಾವತಿ ನೀರು ನಗರಕ್ಕೆ ಹರಿದು ಬಂದಿದ್ದರಿಂದ ಶಿರಾ ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ. ನಮ್ಮ ನಿಜವಾದ ದೇವರು ನನ್ನ ಕಣ್ಣಿಗೆ ಕಂಡಿದ್ದು ಹೇಮಾವತಿ ನೀರು ಮಾತ್ರ. ಗಂಗೆಗೆ ಬಣ್ಣ ಇಲ್ಲ, ಆಕಾರ ಇಲ್ಲ. ಮುಂದೆ ಎತ್ತಿನಹೊಳೆ, ಭದ್ರಾ ನೀರು ಹರಿದಾಗ ನಗರದಲ್ಲಿ ಹೇಮಾವತಿ ಪ್ರತಿಮೆ ನಿರ್ಮಾಣ ಮಾಡಿ ದಿನ ನಿತ್ಯ ಪೂಜಿಸೋಣ ಎಂದರು.ಕರ್ನಾಟಕದಲ್ಲಿ ಪ್ರಪ್ರಥಮವಾಗಿ ನಗರಸಭೆ ನಗರಾಭಿವೃದ್ಧಿ ಪ್ರಾಧಿಕಾರ ಆಗಿರುವುದು ಶಿರಾ ನಗರಸಭೆ ಮಾತ್ರ. 1.23 ಲಕ್ಷ ಜನಸಂಖ್ಯೆ ಇರುವುದರಿಂದ ನಗರಾಭಿವೃದ್ಧಿ ಪ್ರಾಧಿಕಾರವಾಗಿದೆ. ಆದ್ದರಿಂದ ಮುಂದೆ ಕುಡಿಯುವ ನೀರಿನ ಕೊರತೆ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಎತ್ತಿನಹೊಳೆಯಿಂದ ನಿಗದಿಯಾಗಿದ್ದ 514 ಎಂಸಿಎಫ್‌ಟಿ ನೀರನ್ನು 105 ಎಂಸಿಎಫ್‌ಟಿ ನೀರನ್ನು ಹೆಚ್ಚಿಸಿ ಶಿರಾ ನಗರಕ್ಕೆ ಕೊರಬೇಕೆಂದು ತೀರ್ಮಾನ ಮಾಡಲಾಗಿದೆ. ಶಿರಾ ತಾಲೂಕಿಗೆ ಮುಂದಿನ 50 ವರ್ಷ ಕಳೆದರೂ ಯಾವುದೇ ಸಮಸ್ಯೆ ಬಾರದಂತೆ ಯೋಜನೆ ರೂಪಿಸಿದ್ದೇನೆ. ಉಳಿದ ಮೂರುವರೆ ವರ್ಷದಲ್ಲಿ ನಾನು ನುಡಿದಂತೆ ಅಭಿವೃದ್ಧಿ ಕಾರ್ಯ ಮಾಡುತ್ತೇನೆ. ಯಾವುದೇ ಸಮಯದಲ್ಲಿ ನೀರಿನ ವಿಚಾರದಲ್ಲಿ ರಾಜಿಯಾಗುವುದಿಲ್ಲ ಎಂದರು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಜೀಷಾದ್ ಮೊಹಮ್ಮದ್, ತಹಶೀಲ್ದಾರ್ ಸಚ್ಚಿದಾನಂದ ಕುಂಚನೂರು, ಪೌರಾಯುಕ್ತ ರುದ್ರೇಶ್, ತಾ.ಪಂ. ಇಓ ಹರೀಶ್, ನಿರ್ಮಲ ಟಿ.ಬಿ.ಜಯಚಂದ್ರ, ಶಿರಾ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪಿ.ಆರ್.ಮಂಜುನಾಥ್, ನಗರಸಭೆ ಉಪಾಧ್ಯಕ್ಷ ಲಕ್ಷ್ಮೀಕಾಂತ, ಸದಸ್ಯರಾದ ಎಸ್.ಎಲ್.ರಂಗನಾಥ್, ಅಜಯ್‌ಕುಮಾರ್, ಬುರಾನ್ ಮೊಹಮದ್, ತೇಜು ಭಾನುಪ್ರಕಾಶ್, ಕೃಷ್ಣಪ್ಪ, ಸಾನಿಯಾ ಖಾದರ್, ಮಹಮದ್ ಜಾಫರ್, ಬಿ.ಎಂ.ರಾಧಾಕೃಷ್ಣ, ಸುಶೀಲಾ ವಿರೂಪಾಕ್ಷ, ದೃವಕುಮಾರ್, ಆಶ್ರಯ ಸಮಿತಿ ಸದಸ್ಯರಾದ ವಾಜರಹಳ್ಳಿ ರಮೇಶ್, ಜಯಲಲಕ್ಷ್ಮೀ, ನೂರುದ್ದೀನ್, ಮುಖಂಡರಾದ ಗುಳಿಗೇನಹಳ್ಳಿ ನಾಗರಾಜು, ಡಿ.ಸಿ.ಅಶೋಕ್, ಮಜರ್ ಸಾಬ್ ಸೇರಿದಂತೆ ಹಲವರು ಹಾಜರಿದ್ದರು.