ನನಗೆ ಎಲ್ಲ ಪಕ್ಷದ ಅದೃಶ್ಯ ಮತದಾರರ ಬೆಂಬಲವಿದೆ: ಕೆ.ಎಸ್.ಈಶ್ವರಪ್ಪ

| Published : Apr 18 2024, 02:18 AM IST

ನನಗೆ ಎಲ್ಲ ಪಕ್ಷದ ಅದೃಶ್ಯ ಮತದಾರರ ಬೆಂಬಲವಿದೆ: ಕೆ.ಎಸ್.ಈಶ್ವರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ನಾನು 5 ಬಾರಿ ಶಾಸಕರಾಗಿದ್ದಾಗಲೂ ಇಷ್ಟು ಜನ ಬೆಂಬಲ ಸಿಕ್ಕಿರಲಿಲ್ಲ. ಶಿವಮೊಗ್ಗದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಜನ ಬರುತ್ತಿದ್ದಾರೆ. ಈ ಬಾರಿ ಅದೃಶ್ಯ ಮತದಾರರು ನನ್ನ ಕೈ ಹಿಡಿಯುತ್ತಾರೆ ಎಂದು ಸ್ವತಂತ್ರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಸಾಗರನಾನು ಸಾಮಾನ್ಯ ಜನರ ಮಧ್ಯೆಯಿದ್ದು, ಅವರಿಗೆ ಅಗತ್ಯ ಇರುವ ಕೆಲಸ ಮಾಡಿಕೊಂಡು ಬಂದವನು. ಬೊಗಳೆ ಭರವಸೆ ನಾನು ಕೊಡುವುದಿಲ್ಲ ಎಂದು ಲೋಕಸಭಾ ಚುನಾವಣೆ ಸ್ವತಂತ್ರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದರು.ಪಟ್ಟಣದ ರಾಷ್ಟ್ರ ಭಕ್ತರ ಬಳಗದ ಕಚೇರಿಯಲ್ಲಿ ಬುಧವಾರ ನಡೆದ ನಗರ ಹಾಗೂ ಗ್ರಾಮಾಂತರ ಭಾಗದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಐದು ಬಾರಿ ಗೆದ್ದು ಬಂದಾಗಲೂ ನಾನು ಕೇವಲ ಭರವಸೆ ನೀಡಿಲ್ಲ. ಸಮಾಜದ ಪ್ರತಿ ವರ್ಗವರ ಅವಶ್ಯಕತೆಗಳನ್ನು ಅರಿತು, ಅವರಿಗೆ ಬೇಕಿರುವ ಎಲ್ಲ ಕೆಲಸಗಳನ್ನೂ ಮಾಡಿ ತೋರಿಸಿದ್ದೇನೆ. ಜನರಿಗೆ ಅಗತ್ಯವಿರುವ ಅಭಿವೃದ್ಧಿ ವಿಚಾರಗಳಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಕ್ಕೆ ಹಿಂದೇಟು ಹಾಕುವುದಿಲ್ಲ. ಹೀಗಾಗಿ ನಾನು ಬಿಜೆಪಿಯವರಂತೆ ಸುಳ್ಳು ಹೇಳಿಕೊಂಡು ಜನರ ಬಳಿ ಮತ ಕೇಳುತ್ತಿಲ್ಲ ಎಂದರು.ನಾನು 5 ಬಾರಿ ಶಾಸಕರಾಗಿದ್ದಾಗಲೂ ಇಷ್ಟು ಜನ ಬೆಂಬಲ ಸಿಕ್ಕಿರಲಿಲ್ಲ. ಶಿವಮೊಗ್ಗದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಜನ ಬರುತ್ತಿದ್ದಾರೆ. ಸಾಗರ ತಾಲೂಕಿನ ಹತ್ತಾರು ಕಾಂಗ್ರೆಸ್ ಪ್ರಮುಖರು ಕರೆ ಮಾಡಿ ಮಾತನಾಡಿದ್ದಾರೆ. ಕಾಂಗ್ರೆಸ್ ಪಕ್ಷ ದುರ್ಬಲ ಅಭ್ಯರ್ಥಿ ಹಾಕಿಸಿಕೊಂಡು ಬಂದಿದ್ದಾರೆ ಎಂದು ಹೇಳುತ್ತಿದ್ದಾರೆ. ಮುಖ್ಯವಾಗಿ ಕ್ಷೇತ್ರದ ಸಾಮಾನ್ಯ ಜನ ಈಶ್ವರಪ್ಪರನ್ನು ಬೆಂಬಲಿಸುವ ಮಾತನಾಡಿದ್ದಾರೆ. ಅವರು ಯಾವ ಕಾರಣಕ್ಕೆ ಚುನಾವಣೆಗೆ ಇಳಿದಿದ್ದಾರೆನ್ನುವುದನ್ನು ಗುರುತಿಸಿದ್ದಾರೆ. ಜೆಡಿಎಸ್, ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷದವರು, ಸಮಾಜದ ನೂರಾರು ಗಣ್ಯ ವಕ್ತಿಗಳು ವಕೀಲರು, ವೈದ್ಯರು, ವ್ಯಾಪಾರಿಗಳು, ಜನ ಸಾಮಾನ್ಯರು ಬೆಂಬಲ ನೀಡುತ್ತಿದ್ದಾರೆ. ಪ್ರಮುಖವಾಗಿ ಅದೃಶ್ಯ ಮತದಾರರು ನನ್ನ ಕೈ ಹಿಡಿಯುತ್ತಾರೆ ಎನ್ನುವುದು ಗೊತ್ತಾಗಿದೆ ಎಂದು ಹೇಳಿದರು.ಕೃಷ್ಣಮೂರ್ತಿ, ಅಣ್ಣಪ್ಪ ಪೂಜಾರಿ, ರೇಣುಕಾ ಮೂರ್ತಿ, ಸತೀಶ್ ಅದರಂತೆ, ಗೌರೀಶ್, ಮೊದಲಾದವರು ಹಾಜರಿದ್ದರು. ಇದೇ ವೇಳೆ ಹಲವು ಕಾರ್ಯಕರ್ತರು ಬಳಗಕ್ಕೆ ಸೇರ್ಪಡೆಯಾದರು.ಪಕ್ಷೇತರರಿಗೆ ಚಿತ್ರವಿಚಿತ್ರ ಚಿನ್ಹೆ: ಈಶ್ವರಪ್ಪ ಪತ್ರಶಿವಮೊಗ್ಗ: ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳಿಗೆ ಚಿತ್ರವಿಚಿತ್ರ ಚಿನ್ಹೆಗಳನ್ನು ನೀಡುತ್ತಿದ್ದು, ಈ ಸಂಬಂಧ ಚುನಾವಣಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಸ್ವತಂತ್ರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗವು ಪಕ್ಷೇತರ ಅಭ್ಯರ್ಥಿಗಳಿಗೆ ಚಿನ್ಹೆಗಳನ್ನು ನೀಡವಾಗ ಅದು ದೇಶ ಭಕ್ತಿ, ಸ್ಫೂರ್ತಿದಾಯಕ ವಾಗುವಂತೆ ಇರಬೇಕು. ಆದರೆ ಆಯೋಗವು ಈಗ ನೀಡಿರುವ ಪಟ್ಟಿ ನೋಡಿದರೆ ಬೇಸರವಾಗುತ್ತದೆ. ಚಿತ್ರ ವಿಚಿತ್ರ ಚಿನ್ಹೆಗಳಿವೆ. ಅದರಲ್ಲಿಯೇ ಒಂದನ್ನು ಆಯ್ಕೆ ಮಾಡಿಕೊಳ್ಳುವ ಪರಿಸ್ಥಿತಿ ಇದೆ. ಈ ಬಾರಿ ಆಗಿ ಹೋಯಿತು. ಮುಂದಿನ ದಿನಗಳಲ್ಲಾದರೂ ಪಕ್ಷೇತರರಿಗೆ ಚಿನ್ಹೆ ನೀಡುವಾಗ ಯುವ ಸಮೂಹ ಗೌರವಿಸುವಂತಹ, ಅವರಿಗೆ ಸ್ಫೂರ್ತಿದಾಯಕವಾಗುವಂತೆ ಚಿನ್ಹೆ ನೀಡುವಂತೆ ಚುನಾವಣಾಧಿ ಕಾರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದರು.