ನನಗೆ ಹೇಮಾವತಿ ವಿಚಾರದಲ್ಲಿ ತಾಲೂಕಿನ ಜನರ ಜೊತೆಗೆ ನಿಲ್ಲುತ್ತೇನೆ. ರಾಜಕೀಯವಾಗಿ ದಿಲೀಪ್‌ಕುಮಾರ್ ಏನೇನೋ ಹೇಳುತ್ತಾರೆ ಅದಕ್ಕೆ ಅರ್ಥವಿಲ್ಲ ಎಂದು ಶಾಸಕ ಎಸ್‌. ಆರ್‌. ಶ್ರೀನಿವಾಸ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ನನಗೆ ಹೇಮಾವತಿ ವಿಚಾರದಲ್ಲಿ ತಾಲೂಕಿನ ಜನರ ಜೊತೆಗೆ ನಿಲ್ಲುತ್ತೇನೆ. ರಾಜಕೀಯವಾಗಿ ದಿಲೀಪ್‌ಕುಮಾರ್ ಏನೇನೋ ಹೇಳುತ್ತಾರೆ ಅದಕ್ಕೆ ಅರ್ಥವಿಲ್ಲ ಎಂದು ಶಾಸಕ ಎಸ್‌. ಆರ್‌. ಶ್ರೀನಿವಾಸ್‌ ಹೇಳಿದರು.

ಗುಬ್ಬಿ ತಾಲೂಕಿನ ಮಲಾಮಚಕುಂಟಿ, ಸಣಬನಹಳ್ಳಿ , ಈರಪ್ಪನ ಹಟ್ಟಿ ಹಾಗೂ ಹೂವಿನಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಸುಮಾರು 4 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕುಣಿಗಲ್ ಉತ್ಸವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಮಾವತಿ ವಿಚಾರದ ಬಗ್ಗೆ ಮಾತನಾಡಿರುವುದು ನಿಜ. ಅವರು ಈ ವಿಚಾರ ಯಾಕೆ ಹೇಳಿದರು ನನಗಂತೂ ಗೊತ್ತಿಲ್ಲ. ಆದರೆ ನನ್ನ ತಾಲೂಕಿನ ರೈತರ ಹಿತ ಕಾಪಾಡುವ ಉದ್ಧೇಶದಿಂದ ನಾನು ಕೂಡ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಗೆ ವಿರೋಧವನ್ನು ಮಾಡೇ ಮಾಡುತ್ತೀನಿ ಎಂದರು.

ಕೆನಾಲ್ ಲಿಂಕ್ ಕಾಮಗಾರಿಗೆ ಮೊದಲಿಂದಲೂ ನಾನು ವಿರೋಧವನ್ನು ಮಾಡುತ್ತಿದ್ದೇನೆ. ಆದರೆ ಆಡಳಿತ ಪಕ್ಷ ಇರುವುದರಿಂದ ನಾನು ಯಾವುದೇ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿಲ್ಲ. ನನಗೆ ನನ್ನ ತಾಲೂಕಿನ ಜನ ಮುಖ್ಯ ಹೇಮಾವತಿ ನೀರಿನ ವಿಚಾರದಲ್ಲಿ ನನಗೆ ವಿರೋಧವಿದೆ. ನಾನು ಇದುವರೆಗೂ ಯಾವ ರೈತನ ಮೇಲೂ ಕೂಡ ಒಂದು ಕೇಸ್ ಹಾಕಿಸಿಲ್ಲ ಹಾಕಿಸಿದ್ರೆ ತೋರಿಸಲಿ ಎಂದು ಸವಾಲು ಹಾಕಿದರು. ಈ ವೇಳೆ ನಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರೇಣುಕಯ್ಯ , ಜಯಮ್ಮ ಗ್ರಾಮ ಪಂಚಾಯಿತಿ ಸದಸ್ಯರಾದ ದಯಾನಂದ್ , ಐಯಾಣ್ಣ , ಸುನೀತಾ ಗೀರಿಶ್ , ಸಿದ್ದರಾಮಯ್ಯ ಸಾತೇನಹಳ್ಳಿ ರಾಜಣ್ಣ ವತ್ಸಲ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.