ಸಾರಾಂಶ
‘ಗಿಟ್ ಹಬ್ ಮತ್ತು ಫುಲ್ ಸ್ಟೇಕ್ ಡೆವಲಪ್ ಮೆಂಟ್’ ಎಂಬ ವಿಷಯದ ಕುರಿತು ಕಾರ್ಯಾಗಾರ ನಡೆಯಿತು.
ಕನ್ನಡಪ್ರಭ ವಾರ್ತೆ ಕುಂದಾಪುರಇಲ್ಲಿನ ಮೂಡ್ಲಕಟ್ಟೆಯ ಐ. ಎಂ. ಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್ ಕಾಮರ್ಸ್ ಕಾಲೇಜಿನ ಬಿ. ಸಿ. ಎ. ಪದವಿ ವಿದ್ಯಾರ್ಥಿಗಳಿಗೆ ಐಟಿ ಫೋರಮ್ ಮತ್ತು ಕೋಡಿಂಗ್ ಕ್ಲಬ್ ವತಿಯಿಂದ ‘ಗಿಟ್ ಹಬ್ ಮತ್ತು ಫುಲ್ ಸ್ಟೇಕ್ ಡೆವಲಪ್ ಮೆಂಟ್’ ಎಂಬ ವಿಷಯದ ಕುರಿತು ಕಾರ್ಯಾಗಾರ ನಡೆಯಿತು.ಸಂಪನ್ಮೂಲ ವ್ಯಕ್ತಿಯಾಗಿ ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಓಫ್ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ನ ಅಸಿಸ್ಟೆಂಟ್ ಪ್ರೊಫೆಸರ್ ವನ್ನೂರ್ ಸ್ವಾಮಿ ಅವರು ಉಪನ್ಯಾಸ ನೀಡಿದರು.
ಅವರು ಬೇಸಿಕ್ಸ್ ಓಫ್ ಗಿಟ್ ಹಬ್, ಕ್ರಿಯೇಟಿಂಗ್ ಅಕೌಂಟ್ ಇನ್ ಗಿಟ್ ಹಬ್, ಲಾಗಿನ್ ಟು ಗಿಟ್ ಹಬ್, ಫುಲ್ ಸ್ಟೇಕ್ ಡೆವಲಪ್ ಮೆಂಟ್ ಪ್ರೊಗ್ರಮ್ಸ್ ಇನ್ ದ ವೆಬ್ ಬ್ರೌಸರ್ ಡಿಸೈನ್ ಅಂಡ್ ಮೇಂಟೈನಸ್ ಒಫ್ ವೆಬ್ಸೈಟ್ ಎನ್ನುವುದರ ಕುರಿತು ಸವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆಯವರಾದ ಡಾ. ಪ್ರತಿಭಾ ಎಂ. ಪಟೇಲ್, ಉಪ ಪ್ರಾಂಶುಪಾಲರಾದ ಪ್ರೊ. ಜಯಶೀಲ್ ಕುಮಾರ್, ಬಿ.ಸಿ.ಎ. ವಿಭಾಗದ ಮುಖ್ಯಸ್ಥೆಯವರಾದ ಪ್ರೊ. ಸ್ವರ್ಣ ರಾಣಿ ಹಾಗೂ ಸಹಾಯಕ ಪ್ರಾಧ್ಯಪಕರಾದ ಪ್ರೊ.ಜಿತೇಶ್ ಕುಮಾರ್ ಉಪಸ್ಥಿತರಿದ್ದರು. ಪ್ರಥಮ ಬಿ.ಸಿ.ಎ. ವಿದ್ಯಾರ್ಥಿನಿ ಸಿಂಚನ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ಔದ್ಯಮಿಕ ಪ್ರವಾಸ: ಇದೇ ಕಾಲೇಜಿನ ಕಾಮರ್ಸ್ ಅಸೋಸಿಯೇಷನ್ ವೇದಿಕೆಯ ವತಿಯಿಂದ ಇಂಡಸ್ಟ್ರಿಯಲ್ ವಿಸಿಟ್ (ಔದ್ಯಮಿಕ ಪ್ರವಾಸ) ವನ್ನು ಹಮ್ಮಿಕೊಳ್ಳಲಾಯಿತು. ಸಂಸ್ಥೆಯ ಬಿ.ಕಾಂ. ಹಾಗೂ ಬಿ.ಬಿ. ಎ. ವಿದ್ಯಾರ್ಥಿಗಳು ಆನೆಗುಡ್ಡೆ ಉಪಾಧ್ಯಯ ಇಂಡಸ್ಟ್ರೀಸ್ ಭೇಟಿ ನೀಡಿ, ಅಲ್ಲಿ ಪ್ರಾಯೋಗಿಕವಾಗಿ ಆಹಾರ ಸಂಸ್ಕರಣಾ ಉದ್ಯಮದ ವಿವಿಧ ಆಯಾಮಗಳ ಬಗ್ಗೆ ತಿಳಿದುಕೊಂಡರು. ವಿದ್ಯಾರ್ಥಿಗಳೊಂದಿಗೆ ವಾಣಿಜ್ಯ ಉಪನ್ಯಾಸಕಿಯಾದ ಭಾಗ್ಯಶ್ರೀ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.