೨೦೦೪ರಲ್ಲಿ ಕೂಟ್ಗಲ್ಲು ಹೊಸೂರು ಎನ್ನುವ ಗ್ರಾಮದಲ್ಲಿ ಕಾಂಗ್ರೆಸ್‌ನವರು ನಾನು ದೇವಾಲಯಕ್ಕೆ ಬರುವಾಗ ದಬ್ಬಾಳಿಕೆ ಮಾಡಿ ಬೀಗ ಹಾಕಿದ್ದರು. ನಂತರ ನಡೆದ ಚುನಾವಣೆಯಲ್ಲಿ ಜನರು ನನ್ನನ್ನು ೨೫ ಸಾವಿರಕ್ಕೂ ಹೆಚ್ಚು ಬಹುಮತದಿಂದ ಗೆಲ್ಲಿಸಿದರು. ಈಗ ರಾಮನಗರ ಜಿಲ್ಲೆಯ ದೊಡ್ಡಕುರುಬನಹಳ್ಳಿಯಲ್ಲಿ ಮಾರಮ್ಮ ದೇವಾಲಯಕ್ಕೆ ನಿಖಿಲ್ ಕುಮಾರಸ್ವಾಮಿ ಪ್ರವೇಶಕ್ಕೆ ಅಡ್ಡಿ ಮಾಡಿದ್ದಾರೆ. ಈಗ ಬದಲಾವಣೆ ಪರ್ವಕ್ಕೆ ಕಾಂಗ್ರೆಸ್‌ನವರು ನಾಂದಿ ಹಾಡಿದ್ದಾರೆ. ಜತೆಗೆ ನನಗೆ ದೊಡ್ಡಮಟ್ಟದಲ್ಲಿ ಬಹುಮತ ಕೊಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

೨೦೦೪ರಲ್ಲಿ ಕೂಟ್ಗಲ್ಲು ಹೊಸೂರು ಎನ್ನುವ ಗ್ರಾಮದಲ್ಲಿ ಕಾಂಗ್ರೆಸ್‌ನವರು ನಾನು ದೇವಾಲಯಕ್ಕೆ ಬರುವಾಗ ದಬ್ಬಾಳಿಕೆ ಮಾಡಿ ಬೀಗ ಹಾಕಿದ್ದರು. ನಂತರ ನಡೆದ ಚುನಾವಣೆಯಲ್ಲಿ ಜನರು ನನ್ನನ್ನು ೨೫ ಸಾವಿರಕ್ಕೂ ಹೆಚ್ಚು ಬಹುಮತದಿಂದ ಗೆಲ್ಲಿಸಿದರು. ಈಗ ರಾಮನಗರ ಜಿಲ್ಲೆಯ ದೊಡ್ಡಕುರುಬನಹಳ್ಳಿಯಲ್ಲಿ ಮಾರಮ್ಮ ದೇವಾಲಯಕ್ಕೆ ನಿಖಿಲ್ ಕುಮಾರಸ್ವಾಮಿ ಪ್ರವೇಶಕ್ಕೆ ಅಡ್ಡಿ ಮಾಡಿದ್ದಾರೆ. ಈಗ ಬದಲಾವಣೆ ಪರ್ವಕ್ಕೆ ಕಾಂಗ್ರೆಸ್‌ನವರು ನಾಂದಿ ಹಾಡಿದ್ದಾರೆ. ಜತೆಗೆ ನನಗೆ ದೊಡ್ಡಮಟ್ಟದಲ್ಲಿ ಬಹುಮತ ಕೊಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ತಿಳಿಸಿದರು.

ತಾಲೂಕಿನ ಮಾವಿನಕೆರೆಯಲ್ಲಿ ದಿ. ಚೆನ್ನಮ್ಮ ಅವರ ನಾಲ್ಕನೇ ತಿಂಗಳ ತಿಥಿ ಕಾರ್ಯಕ್ಕೆ ತೆರಳುವ ಮುನ್ನ ಬೆಟ್ಟದ ಶ್ರೀ ರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ನಂತರ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ನಮ್ಮ ಕಾರ್ಯಕರ್ತರ ಮೇಲೆ ದಬ್ಬಾಳಿಕೆ, ಭಯಭೀತರನ್ನಾಗಿಸುವ ಕೆಲಸ ಮಾಡುತ್ತಿದ್ದಾರೆ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ನಡವಳಿಕೆ, ರೌಡಿಸಂ, ದೌರ್ಜನ್ಯದ ಬಗ್ಗೆ ನಾನು ಹೇಳಲು ಹೋಗಲ್ಲ. ಕಾರಣ ಅಲ್ಲಿಯ ಜನ ಬುದ್ಧಿ ಕಲಿಸುವ ದಿನ ದೂರವಿಲ್ಲ ಎಂದು ಘಟನೆ ಕುರಿತು ಕಟುವಾಗಿ ಕಾಂಗ್ರೆಸ್ ಕಾರ್ಯಕರ್ತರ ವರ್ತನೆಯನ್ನು ಕಟುವಾಗಿ ಟೀಕಿಸಿ, ಈಗಾಗಲೇ ಜೆಡಿಎಸ್ ಕಾರ್ಯಕರ್ತರು ಹೋರಾಟ ಆರಂಭಿಸಿದ್ದಾರೆ ಎಂದರು.

"ಮೈಸೂರಿನಲ್ಲಿ ನಿನ್ನೆ ಮುಖ್ಯಮಂತ್ರಿಗಳು ಮಾತನಾಡಿರುವುದನ್ನು ಗಮನಿಸಿದ್ದೇನೆ, ಅವರ ಮಾತಿಗೂ ಕೃತಿಗೂ ನಡವಳಿಕೆ ಹೇಗಿರುತ್ತೆ ನೋಡೋಣ " ಎಂದು ಮಾರ್ಮಿಕವಾಗಿ ನುಡಿದು, ಮುಖ್ಯಮಂತ್ರಿಗಳು ಭಾಷಣ ಕುರಿತು ಸಂಶಯ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಅಧಿಕಾರಿಯ ಅಕ್ಕಪಕ್ಕ ಕುಳಿತುಕೊಂಡು ಏನು ನಡೆದಿದೆ, ನಾನು ನೋಡಿದೆ, ಅವರಿಗೆ ಕ್ಲೀನ್ ಚಿಟ್ ಕೊಟ್ಟಿದ್ದಾರಲ್ಲಾ ಎಂದು ತಿಳಿಸಿ, ಅಧಿಕಾರಿಗಳು ಯಾವ ರೀತಿ ನಡೆದುಕೊಳ್ಳಬೇಕು, ಅದಕ್ಕೆ ನಿಯಮಗಳು ಏನಿವೆ, ಅದನ್ನೆಲ್ಲಾ ಮೀರಿ ಹೋಗಲು ಈ ಸರ್ಕಾರ ಪ್ರೋತ್ಸಾಹ ಕೊಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ಆಡಳಿತ ವೈಖರಿಯನ್ನು ಟೀಕಿಸಿದರು.

ಇವತ್ತು ರಂಗನಾಥಸ್ವಾಮಿ ಸನ್ನಿಧಾನದಲ್ಲಿ ಕುಳಿತು ಹೇಳುತ್ತಿದ್ದೇನೆ, ಆ ಕಾಲ ಬಂದಾಗ ಆ ದೇವರು ಈ ರೀತಿ ನಡವಳಿಕೆ ಇರುವಂತಹವರಿಗೆ, ಅವರ ನಡವಳಿಕೆಗೆ ಫಲ ದೊರಕಬೇಕು, ಅ ಫಲ ದೇವರು ಕೊಡ್ತಾನೆ ಎಂಬ ನಂವಿಕೆ ನನಗಿದೆ ಎಂದರು. ಸುವರ್ಣಸೌಧದ ವಿದ್ಯುತ್ ಬಿಲ್ ಬಾಕಿ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಸುವರ್ಣ ಸೌಧ ಒಂದೇ ಅಲ್ಲ, ರಾಜ್ಯದ ಹಲವಾರು ಇಲಾಖೆಗಳಲ್ಲಿ ಹಣದ ಕೊರತೆಯಿಂದ ಹಲವಾರು ಸರ್ಕಾರದ ಕಾರ್ಯಕ್ರಮಗಳಿಗೆ ಹಣ ಬಿಡುಗಡೆ ಆಗಿರುವುದು ಕಾಣ್ತಾ ಇಲ್ಲ ಎಂದು ತಿಳಿಸಿ, ಯಾವುದಕ್ಕೆ ಹಣ ಬಿಡುಗಡೆ ಮಾಡ್ತಾರೆ ಅಂದರೆ ಯಾವುದು ಕೆಲಸ ಆಗಿರಲ್ಲ, ಕೆಲಸ ಆಗಿರದೆ ಇರುವುದಕ್ಕೆ ಲೂಟಿ ಹೊಡೆಯಲು ಹಣ ಬಿಡುಗಡೆ ಮಾಡುವುದು ಈ ಸರ್ಕಾರದ ಸಂಸ್ಕೃತಿಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ ಎಂದು ಟೀಕಿಸಿದರು.

ಶಾಸಕ ಜೆ.ಟಿ.ದೇವೇಗೌಡರ ಬಗ್ಗೆ ಅಸಮಾಧಾನ

ಸಿಎಂ ನನಗೆ, ಜಿ.ಟಿ.ದೇವೇಗೌಡರಿಗೆ ಆಫರ್ ನೀಡಿದ್ದರು ಎಂಬ ಶಾಸಕ ಕೃಷ್ಣಪ್ಪ ಹೇಳಿಕೆ ಸಂಬಂಧ ಮಾತನಾಡಿ, ಜೆಡಿಎಸ್‌ನಿಂದ ಸಂಪೂರ್ಣವಾಗಿ ಹೋಲ್‌ಸೇಲ್ ಆಗಿ ಎಲ್ಲರನ್ನೂ ಕಾಂಗ್ರೆಸ್‌ಗೆ ತೆಗೆದುಕೊಳ್ಳುತ್ತೇನೆ ಹಾಗೂ ಜನತಾದಳವನ್ನು ಸರ್ವನಾಶ ಮಾಡುವುದನ್ನೇ ಧ್ಯೇಯದ ಮಾಡಿಕೊಂಡ ಕುರಿತು ಮುಖ್ಯಮಂತ್ರಿಗಳೇ ಹಲವಾರು ಬಾರಿ ಹೇಳಿದ್ದಾರೆ. ಆದರೆ ಇನ್ನೂ ಜನತಾದಳದಲ್ಲಿ ನಿಷ್ಠೆಯಿಂದ ಇರುವ ಕಾರ್ಯಕರ್ತರು ಇದ್ದಾರೆ ಜತೆಗೆ ಕೆಲವರು ದಾರಿ ತಪ್ಪಿರುವವರು ಇದ್ದಾರೆ. ಆದರೆ ಶಾಸಕ ಜೆ.ಟಿ.ದೇವೇಗೌಡರು ಜೆಡಿಎಸ್ ಕಾರ್ಯಕರ್ತರಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮೂರು ಬಾರಿ ಆಯ್ಕೆಯಾಗಿದ್ದಾರೆ ಮತ್ತು ಆ ಆಯ್ಕೆಯಾಗಲು ನನ್ನ ಒಂದು ದೇಣಿಗೆ ಏನಿದೆ ಎಂಬುದರ ಬಗ್ಗೆ ಈಗ ನಾನು ಚರ್ಚೆ ಮಾಡಲ್ಲ, ಈ ಕುರಿತು ಎಲ್ಲಾ ವಿಷಯಗಳಿಗೆ ಮುಂದಿನ ಚುನಾವಣೆಗಳಲ್ಲಿ ಆ ಕ್ಷೇತ್ರದ ಜನ, ಕಾರ್ಯಕರ್ತರು ತೀರ್ಮಾನ ತಗೋತಾರೆ ಎಂದು ಶಾಸಕ ಜೆ.ಟಿ.ದೇವೇಗೌಡರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.ಶ್ರೀ ರಂಗನಾಥಸ್ವಾಮಿ ಸ್ವಾಮಿ ಸನ್ನಿಧಿಗೆ ತಿಂಗಳಿನಲ್ಲಿ 2 ದಿನ ಭೇಟಿ : ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದು ನಾಡಿಗೆ ಒಳಿತನ್ನು ಉಂಟು ಮಾಡಲು ಎಲ್ಲಾ ರೀತಿಯ ದೇವರ ಅನುಗ್ರಹ ಬೇಡುತ್ತೇನೆ. ಜತೆಗೆ ನಾಡಿಗೆ ಒಳ್ಳೆಯದು ಮಾಡು ಎಂದು ಪ್ರಾರ್ಥನೆ ಸಲ್ಲಿಸುತ್ತೇನೆ. ತಿಂಗಳಿನಲ್ಲಿ ಎರಡು ದಿನವಾದರು ಹುಟ್ಟೂರು ಹರದನಹಳ್ಳಿಯ ಶಿವನ ದೇವಸ್ಥಾನದಲ್ಲಿ ಪೂಜೆ ಮಾಡಿಸುತ್ತೇನೆ, ವಿಶೇಷವಾಗಿ ರಂಗನಾಥಸ್ವಾಮಿ ದರ್ಶನ ಪಡೆಯುತ್ತೇನೆ. ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಅತ್ಯಂತ ಶ್ರದ್ಧೆಯಿಂದ ನಡೆಯುತ್ತವೆ. ಆದ್ದರಿಂದ ಮುಂದಿನ ದಿನಗಳಲ್ಲಿ ಅತ್ಯಂತ ದೊಡ್ಡಮಟ್ಟದ ಯಾತ್ರಾ ಸ್ಥಳವಾಗಿ ಪರಿವರ್ತನೆ ಹೊಂದುತ್ತದೆ. ಅದರ ಜೊತೆಗೆ ಇಲ್ಲಿ ಹಲವಾರು ಚಟುವಟಿಕೆಗಳನ್ನು ನಡೆಯಬೇಕು ಎಂದು ನಮ್ಮ ಕುಟುಂಬದಲ್ಲಿ ನಾವು ತೀರ್ಮಾನ ಮಾಡಿದ್ದೇವೆ ಜತೆಗೆ ಆ ನಿಟ್ಟಿನಲ್ಲಿ ಸದ್ಯದಲ್ಲೇ ಆ ಯೋಜನೆಗಳನ್ನು ಅನು?ನಕ್ಕೆ ತರಲು ಪ್ರಯತ್ನ ಪಡುತ್ತೇನೆ ಎಂದರು.

ಮಕ್ಕಳ ದಿನಾಚರಣೆ ಅಂಗವಾಗಿ ಶ್ರೀ ರಂಗನಾಥಸ್ವಾಮಿ ಹಾಗೂ ಹರದನಹಳ್ಳಿಯ ದೈವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಜ್ಞಾನ ಗುರುಕುಲ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು, ಎಚ್. ಡಿ. ಕುಮಾರಸ್ವಾಮಿ ದೇವಾಲಯಕ್ಕೆ ಬರುತ್ತಿದ್ದಂತೆ ಜೈಕಾರ ಹಾಕಿದ ನೂರಾರು ವಿದ್ಯಾರ್ಥಿಗಳ ಜತೆಗೆ ಕುಳಿದು ಶೈಕ್ಷಣಿಕ ಪ್ರಗತಿ ಬಗ್ಗೆ ಮಾತನಾಡಿ, ಸಿಹಿ, ಜ್ಯೂಸ್ ಹಂಚುವ ಮೂಲಕ ಮಕ್ಕಳೊಂದಿಗೆ ಮಕ್ಕಳ ದಿನಾಚರಣೆ ಆಚರಿಸಿದರು. ಹಾಸನ ಡಿಸಿ ಕೆ.ಎಸ್.ಲತಾಕುಮಾರಿ ಪಿಎ ಶಶಿಕಿರಣ್ ಚಾಟ್ ಪ್ರಕರಣದ ತನಿಖೆ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿ, ಆ ದೇವರ ಮೇಲೆ ಆಣೆ ಮಾಡಿರೋದು, ಚರ್ಚೆ ಮಾಡೋದೂ ಏಕೆ ? ನಾನು ಎಲ್ಲಾದರೂ ಅವರು ದುಡ್ಡು ತಗೊಂಡಿದ್ದಾರೆ ಎಂದು ಹೇಳಿದ್ದೀನಾ ? ಯಾರ ಮೇಲಾದರು ಬೊಟ್ಟು ತೋರಿಸಿದ್ದೀನಾ? ನನ್ನ ಮುಂದೆ ಆ ವಿಷಯಗಳು ಬಂದಾಗ ತನಿಖೆ ಮಾಡಿ ಅಂಥ ಹೇಳುವುದು ತಪ್ಪಾ ಎಂದು ಪ್ರಶ್ನಿಸಿ, ಅಲ್ಲಿ ಚಾಟ್‌ನಲ್ಲಿ ಇರುವ ಸತ್ಯಾಸತ್ಯತೆಯನ್ನ ತನಿಖೆ ಮಾಡಿ ಅಂಥ ಹೇಳಿದ್ದೀನಿ ಜತೆಗೆ ನಾನು ಹಲವಾರು ವಿಷಯಗಳ ಬಗ್ಗೆ ತನಿಖೆ ಮಾಡಲು ಆಗ್ರಹ ಮಾಡಿದ್ದೇನೆ ಎಂದು ತಿಳಿಸಿ, ಆ ಪ್ರಕರಣದಲ್ಲಿ ಅವರು ಪಾಲುದಾರರು ಇಲ್ಲದಿದ್ದ ಮೇಲೆ ಏತಕ್ಕೆ ಭಯ ಎಂದು ಪ್ರಶ್ನಿಸಿ, ನಾನೇನು ಯಾರ ಹೆಸರನ್ನು ಹೇಳಿಲ್ಲ ಮತ್ತು ಅಲ್ಲಿ ಬಂದಿರುವ ಹೆಸರುಗಳನ್ನು ನಾನು ಹೇಳಿಲ್ಲ ಹಾಗೂ ಅದರಲ್ಲಿ ಯಾರು ಭಾಗಿಯಾಗಿದ್ದಾರೆ ಅವರ ಹೆಸರು ಇದೆ ಎಂದರು.