ಸ್ವಇಚ್ಛೆಯಿಂದ ಅಕ್ರಂ ಜೊತೆ ಹೋಗಿದ್ದೇನೆ: ಹೈಕೋರ್ಟ್ ಎದುರು ಹಾಜರಾದ ಜೀನ ಮೆರಿಲ್‌ ಹೇಳಿಕೆ

| N/A | Published : Apr 05 2025, 12:47 AM IST / Updated: Apr 05 2025, 12:40 PM IST

ಸ್ವಇಚ್ಛೆಯಿಂದ ಅಕ್ರಂ ಜೊತೆ ಹೋಗಿದ್ದೇನೆ: ಹೈಕೋರ್ಟ್ ಎದುರು ಹಾಜರಾದ ಜೀನ ಮೆರಿಲ್‌ ಹೇಳಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಇದೀಗ ಜೀನ ಮೆರಿಲ್ ಮತ್ತು ಅಕ್ರಮ್ ತಮ್ಮ ವಕೀಲರ ಮೂಲಕ ಉಚ್ಚ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ತನ್ನನ್ನು ಯಾರೂ ಅಪಹರಿಸಿರುವುದಿಲ್ಲ, ನಾನು ಸ್ವಇಚ್ಛೆಯಿಂದ ಅಕ್ರಮ್ ಜೊತೆ ತೆರಳಿರುವುದಾಗಿ ವಿಚಾರಣೆಯಲ್ಲಿ ನ್ಯಾಯಾಧೀಶರ ಮುಂದೆ ತಿಳಿಸಿದ್ದಾಳೆ.

 ಉಡುಪಿ : ತನ್ನ ಮಗಳನ್ನು ಮುಸ್ಲಿಂ ಯುವಕನೊಬ್ಬ ಅಪಹರಿಸಿದ್ದಾನೆ ಎಂದು ಆಕೆಯ ತಾಯಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಸಲ್ಲಿಸಿದ್ದ ಪ್ರಕರಣದಲ್ಲಿ ಹುಡುಗಿ ತನ್ನ ಪ್ರಿಯಕರನೊಂದಿಗೆ ಶುಕ್ರವಾರ ಹೈಕೋರ್ಟ್ ಮುಂದೆ ಹಾಜರಾಗಿದ್ದಾಳೆ.

ತಮ್ಮ ಮಗಳು ಜೀನ ಮೆರಿಲ್‌ಳನ್ನು ಅಕ್ರಮ್ ಎಂಬಾತ ಬಲವಂತವಾಗಿ ಅಪಹರಿಸಿದ್ದು, ಆಕೆಯನ್ನು ರಕ್ಷಿಸಿ, ಹುಡುಕಿ ಕೊಡಿ ಎಂದು ತಾಯಿ ಹೈಕೋರ್ಟ್ ಮೊರೆ ಹೋಗಿದ್ದರು.

ಇದೀಗ ಜೀನ ಮೆರಿಲ್ ಮತ್ತು ಅಕ್ರಮ್ ತಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ತನ್ನನ್ನು ಯಾರೂ ಅಪಹರಿಸಿರುವುದಿಲ್ಲ, ನಾನು ಸ್ವಇಚ್ಛೆಯಿಂದ ಅಕ್ರಮ್ ಜೊತೆ ತೆರಳಿರುವುದಾಗಿ ವಿಚಾರಣೆಯಲ್ಲಿ ನ್ಯಾಯಾಧೀಶರ ಮುಂದೆ ತಿಳಿಸಿದ್ದಾಳೆ.

ಆಕೆಯ ತಾಯಿ ಮಗಳ ಜೊತೆ ಮಾತನಾಡಬೇಕು ಎಂದು ವಿನಂತಿಸಿದಾಗ, ನ್ಯಾಯಾಧೀಶರು ತಮ್ಮ ಕೊಠಡಿಯಲ್ಲಿಯೇ ಹುಡುಗಿಯೊಂದಿಗೆ ಮಾತನಾಡಲು ತಾಯಿಗೆ ಅವಕಾಶ ಮಾಡಿಕೊಟ್ಟರು.

ನಂತರ ತಾಯಿ ಮಗಳನ್ನು ತನ್ನ ಜೊತೆ ಕಳಿಸುವಂತೆ ನ್ಯಾಯಾಧೀಶರಲ್ಲಿ ಕೇಳಿಕೊಂಡಿದ್ದು, ಇದಕ್ಕೆ ಹುಡುಗಿಯು ಒಪ್ಪಲಿಲ್ಲ. ತಾನು ಅಕ್ರಮ್ ಜೊತೆ ದಿನಾಂಕ ಏ.19ರಂದು ರಿಜಿಸ್ಟರ್ಡ್‌ ಮದುವೆ ಮಾಡಿಕೊಳ್ಳುತ್ತಿದ್ದೇನೆ. ಮದುವೆ ನಂತರ ತಾಯಿಯನ್ನು ಭೇಟಿಯಾಗುವುದಾಗಿಯೂ, ಮುಂದೆಯೂ ತಾಯಿಯೊಂದಿಗೆ ಕೂಡ ಉತ್ತಮ ಬಾಂಧವ್ಯದೊಂದಿಗೆ ಇರುವುದಾಗಿ ತಿಳಿಸಿದಳು.

ನ್ಯಾಯಾಧೀಶರು ಮುಂದಿನ ವಿಚಾರಣೆಯನ್ನು ಏ.22 ರಂದು ನಿಗದಿಪಡಿಸಿದ್ದು, ಅಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಹುಡುಗಿಗೆ ನಿರ್ದೇಶಿಸಿದ್ದಾರೆ ಎಂದು ಉಡುಪಿ ಎಸ್ಪಿ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.