ದೇಣಿಗೆ ಮೂಲಕ ಹಣ ಹೊಂದಿಸಿ ರಸ್ತೆ ನಿರ್ಮಿಸುತ್ತೇನೆ: ರಿಪ್ಪನ್‌ಪೇಟೆ ಕೃಷ್ಣಪ್ಪ

| Published : Oct 10 2025, 01:00 AM IST

ದೇಣಿಗೆ ಮೂಲಕ ಹಣ ಹೊಂದಿಸಿ ರಸ್ತೆ ನಿರ್ಮಿಸುತ್ತೇನೆ: ರಿಪ್ಪನ್‌ಪೇಟೆ ಕೃಷ್ಣಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ರಿಪ್ಪನ್‌ಪೇಟೆಯ ಪೊಲೀಸ್ ಕ್ವಾಟ್ರಸ್‌ಗೆ ಹೋಗಲು ಅಗತ್ಯವಿರುವ ರಸ್ತೆ ನಿರ್ಮಿಸಲು 10 ಲಕ್ಷ ರು.ಗಳು ಖರ್ಚಾಗಲಿದ್ದು, ಸ್ಥಳೀಯ ಆಡಳಿತ ಈ ಬಗ್ಗೆ ಯಾವುದೇ ರೀತಿ ಸ್ಪಂದಿಸುತ್ತಿಲ್ಲ. ಹೀಗಾಗಿ ನಾನು 1 ಲಕ್ಷ ರು.ಗಳನ್ನು ನೀಡಿ ಇನ್ನೊಂದು ವಾರದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ಕೊಡಿಸುತ್ತೇನೆ. ಉಳಿದ ಹಣವನ್ನು ದೇಣಿಗೆ ಮೂಲಕ ಹಣ ಹೊಂದಿಸಿ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸುತ್ತೇನೆ ಎಂದು ಸಾಮಾಜಿಕ ಹೋರಾಟಗಾರ ರಿಪ್ಪನ್‌ಪೇಟೆ ಕೃಷ್ಣಪ್ಪ ಹೇಳಿದರು.

ಶಿವಮೊಗ್ಗ: ರಿಪ್ಪನ್‌ಪೇಟೆಯ ಪೊಲೀಸ್ ಕ್ವಾಟ್ರಸ್‌ಗೆ ಹೋಗಲು ಅಗತ್ಯವಿರುವ ರಸ್ತೆ ನಿರ್ಮಿಸಲು 10 ಲಕ್ಷ ರು.ಗಳು ಖರ್ಚಾಗಲಿದ್ದು, ಸ್ಥಳೀಯ ಆಡಳಿತ ಈ ಬಗ್ಗೆ ಯಾವುದೇ ರೀತಿ ಸ್ಪಂದಿಸುತ್ತಿಲ್ಲ. ಹೀಗಾಗಿ ನಾನು 1 ಲಕ್ಷ ರು.ಗಳನ್ನು ನೀಡಿ ಇನ್ನೊಂದು ವಾರದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ಕೊಡಿಸುತ್ತೇನೆ. ಉಳಿದ ಹಣವನ್ನು ದೇಣಿಗೆ ಮೂಲಕ ಹಣ ಹೊಂದಿಸಿ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸುತ್ತೇನೆ ಎಂದು ಸಾಮಾಜಿಕ ಹೋರಾಟಗಾರ ರಿಪ್ಪನ್‌ಪೇಟೆ ಕೃಷ್ಣಪ್ಪ ಹೇಳಿದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಿಪ್ಪನ್‌ಪೇಟೆಯಲ್ಲಿ ಪೊಲೀಸ್ ಕ್ವಾಟ್ರಸ್‌ಗೆ ಹೋಗುವ ಜಾಗಕ್ಕೆ ಒಂದು ರಸ್ತೆಯ ಅವಶ್ಯಕತೆ ಇದೆ. ಈಗಿರುವ ರಸ್ತೆ ಗುಂಡಿಗಳಿಂದ ತುಂಬಿದ್ದು, ವಾಹನ ಸವಾರರು ಬಿದ್ದು ಗಾಯಮಾಡಿರುವ ಘಟನೆಗಳು ನಡೆದಿವೆ. ಇದೇ ರಸ್ತೆಯಲ್ಲಿ ಮೂರು ಜನ ಪೊಲೀಸರೂ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಚಿಕ್ಕಪುಟ್ಟ ಅಪಘಾತಗಳು ಇಲ್ಲಿ ಆಗುತ್ತಲೇ ಇರುತ್ತವೆ ಎಂದು ದೂರಿದರು.

ಸುಮಾರು ಅರ್ಧ ಕಿ.ಮೀ. ದೂರವಿರುವ ಈ ರಸ್ತೆಯನ್ನು ದುರಸ್ತಿಗೊಳಿಸಲು ನಾನು ಹೋರಾಟವನ್ನೇ ಕೈಗೊಂಡಿದ್ದೆ, ವಿಧಾನಸೌಧದ ಮೆಟ್ಟಿಲನ್ನೇ ಹತ್ತಿದ್ದೇನೆ. ಈ ರಸ್ತೆ ನಿರ್ಮಾಣಕ್ಕೆ ಸ್ಥಳೀಯ ಆಡಳಿತಗಳು ಕೈ ಚೆಲ್ಲಿ ಕುಳಿತ್ತಿವೆ. ಈ ರಸ್ತೆ ನಿರ್ಮಾಣಕ್ಕೆ ಸುಮಾರು 10 ಲಕ್ಷ ರು. ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಹಾಗಾಗಿ 1 ಲಕ್ಷ ರು. ಹಣವನ್ನು ನನ್ನ ಕೈಯಿಂದ ಹಾಕುತ್ತೇನೆ. ಉಳಿದ ಹಣವನ್ನು ದೇಣಿಗೆ ಎತ್ತುತ್ತೇನೆ. ಸರ್ಕಾರದ ಜೊತೆಗೆ ಹಣ ಬಿಡುಗಡೆಗೆ ಹೋರಾಟವನ್ನು ಮಾಡುತ್ತೇನೆ. ಒಟ್ಟಿನಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವ ಒಳ್ಳೆಯ ಕೆಲಸವಿದು. ಹಾಗಾಗಿ ರಸ್ತೆಯನ್ನು ಪೂರ್ಣಗೊಳಿಸಲೇಬೇಕಾಗಿದೆ ಎಂದರು.

ರಿಪ್ಪನಪೇಟೆ ಅಭಿವೃದ್ಧಿಗಾಗಿ ನಾನು ಈ ಹಿಂದೆ ಹಲವು ಹೋರಾಟಗಳಲ್ಲಿ ಭಾಗಿಯಾಗಿದ್ದೇನೆ. ಅನೇಕ ಹೋರಾಟಗಳಲ್ಲಿ ಯಶಸ್ಸನ್ನು ಪಡೆದಿದ್ದೇನೆ. ಪ್ರಮುಖವಾಗಿ ಡಿಗ್ರಿ ಕಾಲೇಜನ್ನು ರಿಪ್ಪನ್‌ಪೇಟೆಗೆ ಮಂಜೂರು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ. ಪೊಲೀಸ್ ಠಾಣೆಯನ್ನು ಇಲ್ಲಿನ ಗ್ರಾ.ಪಂ. ವಶಪಡಿಸಿಕೊಂಡಿತ್ತು ಅದನ್ನು ಪುನಃ ಪೊಲೀಸ್ ಠಾಣೆಯನ್ನಾಗಿಯೇ ಉಳಿಸಿಕೊಂಡಿದ್ದೇನೆ. ನನ್ನ ಎಲ್ಲ ಹೋರಾಟಗಳಲ್ಲಿ ಜಿಲ್ಲಾಧಿಕಾರಿ, ಹಲವು ಅಧಿಕಾರಿಗಳು, ರಾಜಕಾರಣಿಗಳು ಬೆಂಬಲ ನೀಡಿ ಪ್ರೋತ್ಸಾಹಿಸಿದ್ದಾರೆ ಎಂದು ತಿಳಿಸಿದರು.