ಮುಂದಿನ ವರ್ಷ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿ ಮಾಡುತ್ತಾರೆಂಬ ವಿಶ್ವಾಸವಿದೆ ಎಂದು ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್ ಹೇಳಿದರು.
ಮಾಗಡಿ: ಮುಂದಿನ ವರ್ಷ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿ ಮಾಡುತ್ತಾರೆಂಬ ವಿಶ್ವಾಸವಿದೆ ಎಂದು ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಎರಡು ಬಾರಿ ಚುನಾವಣೆ ನಡೆಯಲು ಕಾರಣರಾದ ಪಕ್ಷಾಂತರ ಎಂಎಲ್‌ಸಿ ಪುಟ್ಟಣ್ಣ ಅವರಿಂದ ಸಾರ್ವಜನಿಕರ ತೆರಿಗೆ ಹಣ ವ್ಯರ್ಥವಾಗಿದೆ. ಮುಂದಿನ ಚುನಾವಣೆಗೆ ರಾಜಾಜಿನಗರ ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧಿಸಲು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದಾರೆ. ಅವರಿಗೆ ಎಂಎಲ್‌ಸಿ ಆದರೆ ಸಚಿವ ಸ್ಥಾನ ಸಿಗುವುದಿಲ್ಲ ಎಂದು ಎಂಎಲ್‌ಎ ಆಗಲು ಹೊರಟಿದ್ದಾರೆ. ಐದು ಬಾರಿ ಗೆದ್ದಿದ್ದರೂ ಶಿಕ್ಷಕರಿಗೆ ಯಾವುದೇ ರೀತಿ ಅನುಕೂಲತೆ ಮಾಡಿಕೊಟ್ಟಿಲ್ಲ. ಮುಂಬರುವ ಚುನಾವಣೆಯಲ್ಲಿ ನಾನು 4ನೇ ಬಾರಿಗೆ ಸ್ಪರ್ಧಿಸುತ್ತಿದ್ದು ಶಿಕ್ಷಕರ ಧ್ವನಿಯಾಗಿ ಕೆಲಸ ಮಾಡಲು ನನಗೊಂದು ಅವಕಾಶ ಕೊಡುವಂತೆ ಮನವಿ ಮಾಡಿದರು.
ಶಿಕ್ಷಕರ ನೋಂದಣಿ ಆರಂಭ:
ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಒಟ್ಟು 36 ವಿಧಾನಸಭಾ ಕ್ಷೇತ್ರ ಬರಲಿದ್ದು ಮೂರು ಜಿಲ್ಲೆಗಳನ್ನು ಒಳಗೊಂಡಿದೆ. ಮೊದಲ ಹಂತವಾಗಿ 24 ಸಾವಿರ ಶಿಕ್ಷಕರು ದಾಖಲೆ ಪ್ರಮಾಣದಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. 2019ರಲ್ಲಿ 5 ಸಾವಿರ ನಕಲಿ ಶಿಕ್ಷಕರು ನೋಂದಣಿ ಮಾಡಿಕೊಂಡಿದ್ದು ಈಗ ಚುನಾವಣಾ ಆಯೋಗವೇ ನೋಂದಣಿ ಮಾಡುತ್ತಿರುವುದರಿಂದ ಅರ್ಹ ಶಿಕ್ಷಕರು ನೋಂದಣಿ ಆಗುತ್ತಿದ್ದಾರೆ.
ಕಳೆದ ಬಾರಿ 21 ಸಾವಿರ ಶಿಕ್ಷಕರು ಮತದಾನದ ಹಕ್ಕನ್ನು ಪಡೆದಿದ್ದರು
ಕಳೆದ ಬಾರಿ 21 ಸಾವಿರ ಶಿಕ್ಷಕರು ಮತದಾನದ ಹಕ್ಕನ್ನು ಪಡೆದಿದ್ದರು. ನಾನು ಮಾಜಿ ಪ್ರಧಾನಿ ದೇವೇಗೌಡ, ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರಿಗೆ ಮನವಿ ಮಾಡಿದ್ದು ಎನ್‌ಡಿಎ ಅಭ್ಯರ್ಥಿಯಾಗಿ ನನಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಮತ್ತೊಮ್ಮೆ ಅವಕಾಶ ಕೊಡುತ್ತಾರೆಂಬ ವಿಶ್ವಾಸವಿದೆ. ಮೂರು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಜಿತಗೊಂಡಿದ್ದೇನೆ. ಶಿಕ್ಷಕರ ಸಮಸ್ಯೆ ಶಿಕ್ಷಕರ ಪರ ಸಾಕಷ್ಟು ಹೋರಾಟ ಮಾಡಿದ್ದು ನನಗೆ ಅವಕಾಶ ಕೊಡುತ್ತಾರೆಂಬ ವಿಶ್ವಾಸವಿದೆ. ಮಾಗಡಿಯ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಶಿಕ್ಷಕರ ಮನವೊಲಿಸುತ್ತಿದ್ದೇನೆ ಎಂದು ವಿವರಿಸಿದರು.
ಈ ವೇಳೆ ಜೆಡಿಎಸ್ ಮುಖಂಡರಾದ ವಿಜಯಕುಮಾರ್, ಪಂಚೆ ರಾಮಣ್ಣ, ಕೆಂಪೇಗೌಡ, ಹೊಸಹಳ್ಳಿ ರಂಗಣಿ, ಉಮೇಶ್, ರಮೇಶ್, ಶ್ರೀನಾಗ ಇತರರಿದ್ದರು.
