ತೊಂಡೇಬಾವಿ ಹೋಬಳಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎಷ್ಟರ ಮಟ್ಟಿಗೆ ಬೆಂಬಲವಿದೆ ಎಂಬುದಕ್ಕೆ ಈ ಸಭೆಯೇ ಸಾಕ್ಷಿಯಾಗಿದೆ, ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಶ್ರೀಮಂತರ ಬಳಿ ಇಲ್ಲ ಅದು ಬಡವರಲ್ಲಿ ಮಾತ್ರ ಇದೆ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಜನರು ಮತ ನೀಡಿದ ಮೇಲೆ ನಾವು ಅವರ ಕೆಲಸ ಮಾಡಬೇಕು. ನಾನು ಪ್ರತಿಯೊಬ್ಬರೂ ಕಷ್ಟ ಸುಖದಲ್ಲಿ ಭಾಗಿಯಾಗುತ್ತಾನೆ. ಚಿಮುಲ್ ಚುನಾವಣೆಮ ಗೌರಿಬಿದನೂರು ಕ್ಷೇತ್ರಕ್ಕೆ ವೆಂಕಟರೆಡ್ಡಿ ಎನ್ನುವ ಅಯೋಗ್ಯನನ್ನು ನಾನು ಅಭ್ಯರ್ಥಿ ಮಾಡಲು ಸಿದ್ದಗೊಳಿಸಿದ್ದರೆ ಅವನು ಆಕಡೆ ಹೋಗಿಬಿಟ್ಟ. ಅವನನ್ನು ಮತ್ತು ಕಾಂತರಾಜನನ್ನು ಸೋಲಿಸುತ್ತೇನೆ. ಯಾವುದೇ ಕಾರಣಕ್ಕೂ ಗೆಲ್ಲಲು ಬಿಡುವುದಿಲ್ಲ ಎಂದು ಡಾ.ಎಚ್.ಎನ್. ಪ್ರಾಧಿಕಾರದ ಅಧ್ಯಕ್ಷ ಹಾಗೂ ಮಾಜಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ ಹೇಳಿದರು.ತಾಲೂಕಿನ ತೊಂಡೇಬಾವಿ ರೈಲ್ವೆ ನಿಲ್ದಾಣದ ಬಳಿ ಆಯೋಜಿಸಲಾಗಿದ್ದ ಹೋಬಳಿ ಮಟ್ಟದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ತೊಂಡೇಬಾವಿ ಹೋಬಳಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎಷ್ಟರ ಮಟ್ಟಿಗೆ ಬೆಂಬಲವಿದೆ ಎಂಬುದಕ್ಕೆ ಈ ಸಭೆಯೇ ಸಾಕ್ಷಿಯಾಗಿದೆ, ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಶ್ರೀಮಂತರ ಬಳಿ ಇಲ್ಲ ಅದು ಬಡವರಲ್ಲಿ ಮಾತ್ರ ಇದೆ, ಎಲ್ಲೋ ಕೊಳ್ಳೆ ಹೊಡೆದಿರುವ ದುಡ್ಡು ತಂದು ರಾಜಕೀಯ ಮಾಡುತ್ತಿದ್ದಾರೆ ಅದನ್ನು ತೆಗೆದುಕೊಳ್ಳಿ ಮತ ಮಾತ್ರ ನನಗೆ ಕೊಡಿ ಎಂದರು.ಪ್ರಸ್ತುತ ಗೆದ್ದಿರುವ ಪ್ರತಿನಿಧಿ ಹಳ್ಳಿಗಳಿಗೆ ಬರುವುದೇ ಇಲ್ಲ, ಸರ್ಕಾರಿ ಕಚೇರಿಗಳಲ್ಲಿ ಜನಸಾಮಾನ್ಯರಿಗೆ ಸ್ಪಂದನೆ ಇಲ್ಲವಾಗಿದೆ, ಬೇರೆ ಊರಿನವರ ಆದಾಯಕ್ಕಿಂತ ಸ್ವಂತ ಊರಿನ ನಷ್ಟವೇ ಮೇಲೆ, ನನ್ನನ್ನು ಬಿಟ್ಟು ಹೋಗಿರುವವರು ಈಗ ಕೂಲಿ ಆಳುಗಳು , ಮೇಸ್ತ್ರಿಗಳಾಗಿದ್ದಾರೆ. ಅಲ್ಲಿ ಶಾಸಕರ ಪಿಎ ಸುತ್ತಲೂ ಬ್ರೋಕರ್ಗಳು, ಗುತ್ತಿಗೆದಾರರು ಇರುತ್ತಾರೆ ಇನ್ನು ಸಾಮಾನ್ಯರಿಗೆ ಎಲ್ಲಿ ಅವಕಾಶ, ನನ್ನ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಾನು ಹೇಳಲು ಸಿದ್ದ, ಅವರು ನನ್ನ ಸವಾಲನ್ನು ಸ್ವೀಕರಿಸಲು ಸಿದ್ದಾರಿದ್ದಾರೆಯೇ ಎಂದರು. ಕಳ್ಳರೆಲ್ಲಾ ಒಂದೇ ಕಡೆ ಸೇರಿ ಲೂಟಿ ಹೊಡೆಯಲು ಹೋಗಿದ್ದಾರೆ.ಈಗ ಇರುವ ಜನ ಪ್ರತಿನಿಧಿಗಳು ಅಧಿಕಾರಕ್ಕೆ ಬಂದು 3ವರ್ಷ ಕಳೆಯಿತು, ಡಿಸಿಸಿ ಬ್ಯಾಂಕಿನಲ್ಲಿ ಒಂದು ಮಹಿಳಾ ಸಂಘಕ್ಕೆ ಹಾಗೂ ಒಬ್ಬ ರೈತನಿಗೆ ಅವರು ಸಾಲ ನೀಡಲು ಆಗಲಿಲ್ಲ, ತಾಲ್ಲೂಕಿನ ಇತಿಹಾಸದಲ್ಲಿ ಇಂತಹ ದುಸ್ಥಿತಿ ಯಾವತ್ತೂ ಬಂದಿರಲಿಲ್ಲ ಎಂದರು.ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಮಾತನಾಡಿ, ನಿಸ್ವಾರ್ಥಯಾಗಿ, ನಿಷ್ಪಕ್ಷಪಾತವಾಗಿ, ಬಡವರು ಹಾಗೂ ಶೋಷಿತರ ಪರವಾಗಿ ಸತತವಾಗಿ 25ವರ್ಷಗಳ ಕಾಲ ಸೇವೆಸಲ್ಲಿಸಿರುವ ನಮ್ಮ ನಾಯಕ ಎನ್.ಎಚ್.ಶಿವಶಂಕರರೆಡ್ಡಿ ಬೆನ್ನೆಲುಬಾಗಿ ನಿಲ್ಲಬೇಕಾಗಿದೆ. ಪಕ್ಷವನ್ನು ಸದೃಢವಾಗಿ ಕಟ್ಟಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಧಿಕಾರ ಕೊಡಿಸುವ ಉದ್ದೇಶದಿಂದ ಹಳ್ಳಿಗಳಲ್ಲಿ ಪ್ರಚಾರ ಮಾಡುವುದಲ್ಲದೇ ಕಾರ್ಯಕರ್ತರ ಸಭೆಯನ್ನು ಆಯೋಜಿಸಲಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ಥನಾರಾಯಣಗೌಡ, ಮುಖಂಡರಾದ ಹನುಮಂತರೆಡ್ಡಿ, ಪ್ರಕಾಶರೆಡ್ಡಿ, ಭಾರ್ಗವರೆಡ್ಡಿ, ಅರುಂಧತಿ ಅಶ್ವತ್ಥಪ್ಪ, ಎಂ.ಸಿ.ಗಂಗಾಧರಪ್ಪ, ಜೀಲಾಕುಂಟೆ ಗಂಗಾಧರಪ್ಪ, ಇಬ್ನಿಹುಸೇನ್, ರಮೇಶನಾಯಕ, ನಾಗೇಶ್, ವೆಂಕಟಾದ್ರಿ, ಬಂದರಹಳ್ಳಿ ಮಂಜುನಾಥ, ಶಾಹಿದ್, ಶ್ರೀನಿವಾಸ, ಗಿರೀಶ್ ರೆಡ್ಡಿ, ಖಾದರ್ ಸುಬಾನ್ ಖಾನ್, ಕಲ್ಪನಾ ರಮೇಶ್, ಕಂಬಕ್ಕ ವೆಂಕಟೇಶ್, ನಾನಾ, ಅಬುಲ್, ದೀಪಂಶು, ಅರ್ಮಾನ್, ರಮೇಶ್, ರಫೀಕ್, ಗಾಯಿತ್ರಿ ಬಸವರಾಜು, ನಾಗರಾಜು, ಮೈಲಾರಿ, ರಾಜಗೋಪಾಲ್ ಇನ್ನಿತರರು ಭಾಗವಹಿಸಿದ್ದರು.