ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ತಾಲೂಕಿನ ಮಂಚಪುರ ಗ್ರಾಮದ ಜಮೀನಿನಲ್ಲಿ ಬೆಳೆದಿದ್ದ ಬೆಳೆ ಕಾಡುಹಂದಿಗಳಿಂದ ನಾಶವಾದ ಹಿನ್ನೆಲೆ ಪರಿಹಾರ ನೀಡದಿದ್ದರೆ ವಿಷ ಕುಡಿಯುವುದಾಗಿ ರೈತ ಆಕ್ರೋಶಭರಿತವಾಗಿ ಹೇಳಿಕೆ ನೀಡಿದ್ದಾನೆ.ಗ್ರಾಮದ ರೈತ ಪೆರಮಳ್ ತಮ್ಮ 4 ಎಕರೆ ಜಮೀನಿನಲ್ಲಿ ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದವು. ಮುಸುಕಿನ ಜೋಳದ ಬಿತ್ತನೆ ಮಾಡಿದ್ದರು. ತೆನೆ ಕಟ್ಟುವ ಹಂತದಲ್ಲಿರುವಾಗಲೇ ಕಾಡು ಹಂದಿಗಳ ಇಂಡು ಜಮೀನಿಗೆ ನುಗ್ಗಿ ಅಪಾರ ಪ್ರಮಾಣವಾದ ಬೆಳೆ ಸಂಪೂರ್ಣವಾಗಿ ತಿಂದು ತುಳಿದು ನಾಶಗೊಳಿಸಿದ್ದು ಲಕ್ಷಾಂತರ ರು. ನಷ್ಟ ಉಂಟಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಮಲೆ ಮಹದೇಶ್ವರ ಬೆಟ್ಟದಲ್ಲಿ ಇದ್ದಂತ ಹಂದಿಗಳನ್ನು ಹಿಡಿದು ತಂದು ದಟ್ಟ ಅರಣ್ಯದಲ್ಲಿ ಬಿಡುವ ಬದಲು ಮಂಚಾಪುರ ಸುತ್ತಮುತ್ತಲಿನ ರೈತರ ಜಮೀನುಗಳ ಬಳಿ ಬಿಟ್ಟಿರುವುದರಿಂದ ರಾತ್ರಿ ಹಗಲು ಎನ್ನದೆ ಹಂದಿಗಳು ರೈತರ ಜಮೀನಿನಲ್ಲಿರುವ ಫಸಲನ್ನು ತಿಂದು ಹಾಳು ಮಾಡುತ್ತಿವೆ.ಕಷ್ಟಪಟ್ಟು ಬೆಳೆದಿರುವ ಫಸಲು ಕೈಗೆ ಬರುವ ಮುನ್ನವೇ ಪ್ರಾಣಿಗಳ ಪಾಲಾಗುತ್ತಿದೆ. ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ ತನಗೆ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾನೆ.
ರೈತ ಪೆರಮಳ್ ಜಮೀನಿನಲ್ಲಿ ಬೆಳೆದಿರುವ ಮುಸುಕಿನ ಜೋಳದ ಫಸಲನ್ನು ಕಾಡು ಹಂದಿಗಳು ನಾಶಪಡಿಸುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಪರಿಹಾರ ನೀಡದಿದ್ದಲ್ಲಿ ಕಳೆ ನಾಶಕ ವಿಷ ಕುಡಿದು ಸಾಯುವುದಾಗಿ ಹೇಳಿದ್ದಾನೆ.ರೈತರಿಗಾಗುತ್ತಿರುವ ಅನ್ಯಾಯದ ಬಗ್ಗೆ ಮತ್ತು ಅರಣ್ಯಾಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತನ ಜಮೀನಿನ ಫಸಲು ಹಾಳಾಗುತ್ತಿದೆ. ಜೊತೆಗೆ ನಷ್ಟ ಪರಿಹಾರ ಸಿಗುತ್ತಿಲ್ಲ ಕೂಡಲೇ ಅಧಿಕಾರಿಗಳು ಗಮನ ಹರಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಅರಣ್ಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ:ರೈತರ ಜಮೀನುಗಳ ಬಳಿಯೇ ಅರಣ್ಯ ಅಧಿಕಾರಿಗಳ ಕಾರ್ಯ ವೈಖರಿಯ ಬಗ್ಗೆ ರೈತರು ಆಕ್ರೋಶ ಭರಿತರಾಗಿ ಪ್ರತಿಭಟನೆಯನ್ನು ನಡೆಸಿದರು. ಕಾಡುಪ್ರಾಣಿಗಳ ಹಾವಳಿಯನ್ನು ತಡೆಗಟ್ಟಲು ವಿಫಲರಾಗಿರುವ ಅರಣ್ಯ ಅಧಿಕಾರಿಗಳು ಕೂಡಲೇ ಬೆಳೆನಾಶ ಆಗಿರುವ ರೈತನ ಜಮೀನಿಗೆ ಬಂದು ನಷ್ಟದ ಅಂದಾಜು ಪಟ್ಟಿ ತಯಾರಿಸಿ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಇಲ್ಲದಿದ್ದರೆ ಸಂಬಂಧಪಟ್ಟ ಅರಣ್ಯ ಇಲಾಖೆ ಕಚೇರಿ ಮುಂಭಾಗ ಉಗ್ರವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳುವದಾಗಿ ಎಚ್ಚರಿಕೆ ನೀಡಿದ್ದಾರೆ.