ಆರೋಪ ರುಜುವಾತು ಮಾಡಿದ್ರೆ ಅರಸೀಕೆರೆಯನ್ನೇ ಬಿಡುವೆ

| Published : Sep 04 2024, 01:48 AM IST

ಸಾರಾಂಶ

ಕಳೆದ ಚುನಾವಣೆಯಲ್ಲಿ ನಾನು ಆರು ಸಾವಿರ ಮತಗಳನ್ನು ಪಡೆದಿರುವುದನ್ನು ಪ್ರಸ್ತಾಪಿಸಿ, ಇತರೆ ಪಕ್ಷದೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವ ನಗರಸಭಾ ಅಧ್ಯಕ್ಷ ಸಮೀವುಲ್ಲಾ, ಶ್ರೀ ಜೇನುಕಲ್ ಬೆಟ್ಟವೇಕೆ ಅವರ ಮಸೀದಿಗೆ ಹೋಗಿ ಪ್ರಮಾಣ ಮಾಡೋಣ ರುಜುವಾತು ಮಾಡಿದರೆ ಅರಸೀಕೆರೆಯನ್ನೇ ಬಿಡುವೆ, ಒಪ್ಪಂದ ಮಾಡಿಕೊಂಡಿದ್ದೇನೆ ಎಂದು ಶಾಸಕರನ್ನೇ ಕೇಳಲಿ ಎಂದು ಕರ್ನಾಟಕ ಹೆದ್ದಾರಿ ನಿಗಮದ ಮಾಜಿ ಅಧ್ಯಕ್ಷ ಜಿವಿಟಿ ಬಸವರಾಜ್ ಸವಾಲು ಹಾಕಿದರು. ಗಂಜಿಗೆರೆಯಿಂದ ಅರಸೀಕೆರೆಯವರೆಗೆ ನನ್ನ ಬಗ್ಗೆ ಒಂದೇ ಒಂದು ನಿರ್ದಿಷ್ಟ ಆರೋಪವನ್ನು ಇವರು ರುಜುವಾತು ಪಡಿಸಿದರೆ ನಾನು ಅರಸೀಕೆರೆಯನ್ನೇ ಬಿಡುತ್ತೇನೆ ಎಂದು ಪುನರುಚ್ಛರಿಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಕಳೆದ ಚುನಾವಣೆಯಲ್ಲಿ ನಾನು ಆರು ಸಾವಿರ ಮತಗಳನ್ನು ಪಡೆದಿರುವುದನ್ನು ಪ್ರಸ್ತಾಪಿಸಿ, ಇತರೆ ಪಕ್ಷದೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವ ನಗರಸಭಾ ಅಧ್ಯಕ್ಷ ಸಮೀವುಲ್ಲಾ, ಶ್ರೀ ಜೇನುಕಲ್ ಬೆಟ್ಟವೇಕೆ ಅವರ ಮಸೀದಿಗೆ ಹೋಗಿ ಪ್ರಮಾಣ ಮಾಡೋಣ ರುಜುವಾತು ಮಾಡಿದರೆ ಅರಸೀಕೆರೆಯನ್ನೇ ಬಿಡುವೆ, ಒಪ್ಪಂದ ಮಾಡಿಕೊಂಡಿದ್ದೇನೆ ಎಂದು ಶಾಸಕರನ್ನೇ ಕೇಳಲಿ ಎಂದು ಕರ್ನಾಟಕ ಹೆದ್ದಾರಿ ನಿಗಮದ ಮಾಜಿ ಅಧ್ಯಕ್ಷ ಜಿವಿಟಿ ಬಸವರಾಜ್ ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಟಿಕೆಟ್ ಅನ್ನೂ ಸಹ ಚುನಾವಣೆ ಸಮೀಪಿಸಿದಾಗ ಘೋಷಣೆ ಮಾಡಲಾಯಿತು. ಸಮಯದ ಕೊರತೆ ಮತ್ತು ಬೇರೊಬ್ಬ ವ್ಯಕ್ತಿ ಬಂದಿದ್ದರಿಂದ ಗೊಂದಲಮಯ ವಾತಾವರಣ ಸೃಷ್ಟಿಯಾಗಿತ್ತು. ನಾನು 6 ಸಾವಿರ ಮತ ಗಳಿಸಿದ್ದನ್ನ ಸಮೀವುಲ್ಲಾ ಪ್ರಸ್ತಾಪಿಸಿದ್ದಾರೆ. ಅವರು ಒಂದೇ ಸಮುದಾಯದ 700 ಮತ ಇರುವ ವಾರ್ಡಿನಿಂದ ಗೆದ್ದು ಬರುತ್ತಿದ್ದಾರೆ ಎಂದು ಛೇಡಿಸಿದರು.

ಅವರು ಇಂತಹ ಚುನಾವಣೆಯಲ್ಲಿ ಸ್ಪರ್ಧಿಸಿ ಎಷ್ಟು ಮತ ಪಡೆಯುತ್ತಾರೆ ಎಂಬುದನ್ನು ತೋರಿಸಲಿ ಎಂದ ಬಸವರಾಜ್, ಅವರ ವಾರ್ಡಿನಲ್ಲಿ 700 ಮತಕ್ಕೆ ಒಂದು ವಾರ್ಡ್ ನಮ್ಮಲ್ಲಿ 1,500 ಮತಕ್ಕೆ ಒಂದು ವಾರ್ಡ್. ಈ ತಾರತಮ್ಯವೇಕೆ ಎಂದು ಸಹ ಅವರು ಪ್ರಶ್ನಿಸಿದರು. ನಾನು ಯಾವುದೇ ಆಮಿಷಕ್ಕೆ ಒಳಗಾಗುವ ವ್ಯಕ್ತಿಯಲ್ಲ ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಚುನಾವಣೆಗಳನ್ನ ಎದುರಿಸಿದ್ದೇನೆ. ಗಂಜಿಗೆರೆಯಿಂದ ಅರಸೀಕೆರೆಯವರೆಗೆ ನನ್ನ ಬಗ್ಗೆ ಒಂದೇ ಒಂದು ನಿರ್ದಿಷ್ಟ ಆರೋಪವನ್ನು ಇವರು ರುಜುವಾತು ಪಡಿಸಿದರೆ ನಾನು ಅರಸೀಕೆರೆಯನ್ನೇ ಬಿಡುತ್ತೇನೆ. ಅಧಿಕಾರ ಸಿಕ್ಕ ಮೂರು ವರ್ಷಗಳ ಅವಧಿಯಲ್ಲಿ 762 ಕೋಟಿ ರು. ಗಳ ರಸ್ತೆ ಅಭಿವೃದ್ಧಿ ಮಾಡಿಸಿದ್ದೇನೆ. ತಾಲೂಕಿಗೆ 400 ಮನೆಗಳನ್ನು ಸಹ ತಂದಿದ್ದೆ. ಶಾಸಕರಿಂದಾಗಿ ಅದನ್ನು ಈವರೆಗೂ ವಿತರಿಸಲಾಗಿಲ್ಲ, ಸಂದಿಗ್ಧ ಪರಿಸ್ಥಿತಿಯಲ್ಲಿ ಹೆಚ್ಚು ಚಟುವಟಿಕೆ ಬೇಡ ಎಂಬ ಸಂದೇಶ ನನಗೆ ಬಂದಿತ್ತು. ಹಾಗಾಗಿ ನಾನು ತಟಸ್ಥನಾಗಬೇಕಾಯಿತು. ನನ್ನ ಇತಿಮಿತಿಯಲ್ಲಿ ಕಾರ್ಯಕರ್ತರಿಗೆ ಮತ್ತು ಸಾರ್ವಜನಿಕರಿಗೆ ಕೆಲಸ ಮಾಡಿಕೊಟ್ಟಿದ್ದೇನೆ ಎಂದು ತೀಳಿಸಿದರು.

ಮೂರನೇ ವ್ಯಕ್ತಿಯಿಂದ ರಿಯಲ್ ಎಸ್ಟೇಟ್ ವ್ಯಾಪಾರ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಗಾಜಿನ ಮನೆಯಲ್ಲಿ ಇದ್ದೀರಿ ಎಚ್ಚರಿಕೆಯಿಂದ ಮಾತನಾಡಿ, ಒಂದೇ ಸಮುದಾಯದ ಮತ ಇರುವುದರಿಂದ ಗೆದ್ದು ಬರುತ್ತಿದ್ದೀರಿ ಬೊಗಳೆ ಹೊಡೆಯಬೇಡಿ. ನಿಮ್ಮ ನಡವಳಿಕೆ ಎಲ್ಲರಿಗೂ ತಿಳಿದಿದೆ. ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದೆ. ರಾಜ ಕಾಲುವೆ ಚರಂಡಿಗಳನ್ನ ನುಂಗಿದ್ದೀರಿ. ನನ್ನ ಬಗ್ಗೆ ಒಂದೇ ಒಂದು ಭ್ರಷ್ಟಾಚಾರ ತಿಳಿಸಿ ಕೊಡಿ.

24 ಗಂಟೆಯಲ್ಲಿ ಈ ಖಾತೆ ಮಾಡಿಕೊಡಲಾಗುವುದು ಎಂದು ಹೇಳಿದ್ದೀರಿ, ಇದು ನಿಮ್ಮ ಬಿಸಿನೆಸ್‌ಗೆ ಇರಬೇಕು. ಈವರೆಗೆ ಏಕೆ ಮಾಡಿಕೊಡಲಿಲ್ಲ ನಾನು ನಿಮ್ಮ ಹಾಗೆ ಕುಟುಂಬಗಳನ್ನು ಹಾಳು ಮಾಡುವುದಿಲ್ಲ, ನೀವು ಅಕ್ರಮಗಳ ಸರದಾರರು, ನಿಮ್ಮ ಅಕ್ರಮವನ್ನು ಜನ ಈಗ ತಿಳಿಸುತ್ತಿದ್ದಾರೆ. ಜೇನುಕಲ್ ಬೆಟ್ಟಕ್ಕೆ ಏಕೆ ನಿಮ್ಮ ಮಸೀದಿಗೆ ಹೋಗೋಣ ನಿಮ್ಮ ಮಕ್ಕಳ ಮೇಲೆ ಪ್ರಮಾಣ ಮಾಡಿ ಎಂದು ಬಸವರಾಜ್ ಪುನರುಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿಬಿಜೆಪಿ ನಗರ ನೂತನ ಅಧ್ಯಕ್ಷ ಅವಿನಾಶ್ ನಾಯ್ಡು ಮತ್ತು ಗ್ರಾಮಾಂತರ ನೂತನ ಅಧ್ಯಕ್ಷ ವಕೀಲ ಸತೀಶ್ ಅವರು ತಮ್ಮ ಅವಧಿಯಲ್ಲಿ ಪಕ್ಷದ ಸಂಘಟನೆ ಹಾಗೂ ಸಾರ್ವಜನಿಕ ಕುಂದುಕೊರತೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು. ನ್ಯಾಯವಾದಿ ವಿರುಪಾಕ್ಷಪ್ಪ ಅಣ್ಣಾಯಕನಹಳ್ಳಿ ವಿಜಯ್ ಕುಮಾರ್‌ ಸರ್ವೆ ಚಂದ್ರು ಉಪಸ್ಥಿತರಿದ್ದರು.