ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿಗ್ರಾಮೀಣ ಕ್ಷೇತ್ರಾದ್ಯಂತ ನೂರಾರು ದೇವಸ್ಥಾನಗಳನ್ನು ಕಳೆದ 5 ವರ್ಷದಲ್ಲಿ ನಿರ್ಮಾಣ ಮಾಡಲಾಗಿದೆ. ದೇವರ ಹೆಸರಿನಲ್ಲಿ ನಾನೆಂದೂ ರಾಜಕಾರಣ ಮಾಡುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.ಬೆಳಗಾವಿ ಗ್ರಾಮೀಣ ಕ್ಷೇತ್ರದ ತುಮ್ಮರಗುದ್ದಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಹನುಮಾನ ಮಂದಿರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ದೇವರು, ಭಕ್ತಿ ಇವೆಲ್ಲ ನಮ್ಮ ಮನಸಿನಲ್ಲಿದೆ. ಜನರು ನನ್ನ ಜತೆಗಿದ್ದಾರೆ. ದೇವರ ಆಶೀರ್ವಾದವಿದೆ. ಹಾಗಾಗಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಮಾಡಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಮಾಡುವ ಶಕ್ತಿ ಕೊಡು ಎಂದು ಪ್ರಾರ್ಥಿಸೋಣ ಎಂದು ಮನವಿ ಮಾಡಿದರು.ಗ್ರಾಮಸ್ಥರೆಲ್ಲ ಮುಂದಾಗಿ ಹನುಮಾನ್ ದೇವಸ್ಥಾನ ಕಟ್ಟಬೇಕೆಂದು ನಿರ್ಧರಿಸಿದಾಗ ನನ್ನಿಂದ ಸಾಧ್ಯವಾದ ನೆರವು ನೀಡಿದೆ. ಅದಕ್ಕಿಂತ ಹೆಚ್ಚಾಗಿ ನೀವೆಲ್ಲ ಬಹಳಷ್ಟು ಶ್ರಮಪಟ್ಟು ಭಕ್ತಿಯಿಂದ ಈ ಮಂದಿರವನ್ನು ಸುಂದರವಾಗಿ ನಿರ್ಮಾಣ ಮಾಡಿದ್ದೀರಿ. ಗ್ರಾಮದಲ್ಲಿ ಅದ್ಧೂರಿಯಿಂದ ನಡೆಯುತ್ತಿರುವ ಮಂದಿರದ ಉದ್ಘಾಟನೆಯ ಕಾರ್ಯಕ್ರಮ ಮನಸಿಗೆ ಖುಷಿ ತಂದಿದೆ. ದೇವರ ಆಶೀರ್ವಾದ ನನಗೆ, ನಿಮಗೆ ಎಲ್ಲರಿಗೂ ಸಿಕ್ಕಿದೆ. ನಾನು ರಾಜ್ಯದಲ್ಲಿ ಮಂತ್ರಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಗ್ರಾಮಕ್ಕೆ ಇನ್ನಷ್ಟು ಒಳ್ಳೆಯದಾಗಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಶೇಖರ್ ಹೊಸೂರಿ, ಕಲ್ಮೇಶ್ ಹೊಸೂರಿ, ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್, ಬಸನಗೌಡ ಪಾಟೀಲ, ಲಕ್ಷ್ಮಣ ತಳವಾರ, ಸತ್ಯಪ್ಪ ನಂದ್ಯಾಗೋಳ, ಕಲ್ಲಪ್ಪ ಸುತಗಟ್ಟಿ, ಮಲ್ಲಪ್ಪ ಗೊಸಾವಿ, ವಿಲ್ಸನ್ ಮಹಾರ್, ಶಿವಾಜಿ ಮೊಕಾಶಿ, ಶಿವಾ ಪಾಟೀಲ, ಕಲ್ಲಪ್ಪ ಶಿನಗಿ, ಕಲ್ಮೇಶ್ ಮಳಗಳಿ, ಶ್ರೀಕಾಂತ ಶಿನಗಿ ಹಾಗೂ ಗ್ರಾಮಸ್ಥರು, ದೇವಸ್ಥಾನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))