ಕುದೂರು: ನನ್ನ ರಾಜಕೀಯ ಹಣೆ ಬರಹ ಬರೆದದ್ದು ಕುದೂರು ಜಿಲ್ಲಾ ಪಂಚಾಯ್ತಿ ಕ್ಷೇತ್ರ. ಅದರ ಋಣ ನನ್ನ ಜೀವನ ಪರ್ಯಂತ ಇರುತ್ತದೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ಹೇಳಿದರು
ಕುದೂರು: ನನ್ನ ರಾಜಕೀಯ ಹಣೆ ಬರಹ ಬರೆದದ್ದು ಕುದೂರು ಜಿಲ್ಲಾ ಪಂಚಾಯ್ತಿ ಕ್ಷೇತ್ರ. ಅದರ ಋಣ ನನ್ನ ಜೀವನ ಪರ್ಯಂತ ಇರುತ್ತದೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ಹೇಳಿದರು.
ಬಸವನಹಗುಡಿಪಾಳ್ಯದಲ್ಲಿ ಕುದೂರು ಜಿಪಂ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕುದೂರು ಜಿಪಂ ಕ್ಷೇತ್ರ ಚುನಾವಣೆಗೆ ನನ್ನ ಮಡದಿಯನ್ನು ನಿಲ್ಲಿಸುತ್ತೇನೆ ಎಂದು ವದಂತಿ ಹರಡಲಾಗುತ್ತಿದೆ. ಖಂಡಿತವಾಗಿಯೂ ನನ್ನನ್ನು ಹೊರತುಪಡಿಸಿ ನನ್ನ ಕುಟುಂಬದಲ್ಲಿ ಯಾರೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದರು.ಈ ಬಾರಿ ಕುದೂರು ಜಿಪಂ ಕ್ಷೇತ್ರಕ್ಕೆ ಸ್ಥಳೀಯರಿಗೆ ಅವಕಾಶ ನೀಡಲಾಗುತ್ತದೆ. ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ದರಾಗಿರಬೇಕು. ಅದಕ್ಕೂ ಮುನ್ನ ಬಿಜೆಪಿಯವರ ಜೊತೆ ಮಾತನಾಡಿ ಅವರಲ್ಲಿ ಯಾರಾದರೂ ಆಸಕ್ತರಿದ್ದಾರಾ ಎಂದು ಚರ್ಚಿಸುತ್ತೇವೆ. ನಂತರ ಎರಡೂ ಪಕ್ಷದವರು ಒಟ್ಟಾಗಿ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಚುನಾವಣೆ ಎದುರಿಸುತ್ತೇವೆ ಎಂದು ತಿಳಿಸಿದರು.
ನಮ್ಮ ಕೆಲಸಗಳು ಬಾಲಕೃಷ್ಣರಿಂದ ಮುಂದುವರಿಕೆ:ಎಲ್ಲಾ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಮಾಗಡಿ ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ನಮ್ಮ ಅವಧಿಯಲ್ಲಿ ಹೇಮಾವತಿ ನದಿ ನೀರು ಯೋಜನೆಗೆ ಹಣ ಮಂಜೂರು ಮಾಡಿಸಿ ಪೈಪುಗಳನ್ನು ತಂದಿಡಲಾಗಿ ಕೆಲಸ ಆರಂಭವಾಗಿತ್ತು. ನಮ್ಮ ಕೆಲಸವನ್ನು ಬಾಲಕೃಷ್ಣ ಮುಂದುವರೆಸುತ್ತಿದ್ದಾರೆ. ಕುಮಾರಸ್ವಾಮಿಯವರಿಗೆ 150 ಎಕರೆ ಜಮೀನು ಕೈಗಾರಿಕೆಗೆ ಕೊಡುತ್ತೇವೆ ಎಂದು ಹೊಸ ಕಥೆ ಬಿಡುತ್ತಿದ್ದಾರೆ. ಆದರೆ ನಾನು ಕೈಗಾರಿಕೆ ಆರಂಭಿಸುತ್ತೇವೆ ಎಂದು ವಿರೋಧ ವ್ಯಕ್ತಪಡಿಸಿ ಅದಕ್ಕೆ ತಡೆಯೊಡ್ಡಿದರು. ಈಗ ಜಾಗ ಕೊಡುತ್ತೇನೆ ಎಂದು ಚುನಾವಣೆ ಮಾತುಗಳನ್ನು ಆಡುತ್ತಿದ್ದಾರೆ ಎಂದು ಟೀಕಿಸಿದರು.
ಎದುರಾಳಿಗಳು ಬ್ರಹ್ಮ ರಾಕ್ಷಸರಂತಹವರು ಎಷ್ಟು ತೊಂದರೆ ಕೊಟ್ಟಿದ್ದಾರೆ ಎಂದರೆ 2013ರಲ್ಲಿ ನಾನು ಮಾಗಡಿಗೆ ಬಂದಾಗ ಬಾಡಿಗೆ ಮನೆ ಸಿಗಲಿಲ್ಲ. ಇಂದು ಮನೆಗೆ ಅಡ್ವಾನ್ಸ್ ತಗೊಂಡರೆ ಬೆಳಗ್ಗೆ ವಾಪಸ್ ಕೊಟ್ಟು ಬಿಡ್ತಿದ್ದರು. ಮನೆಯ ಮಾಲೀಕರನ್ನು ಪರೋಕ್ಷವಾಗಿ ಹೆದರಿಸುತ್ತಿದ್ದರು. ಅಂತಹುದರಲ್ಲಿ ಧೈರ್ಯದಿಂದ ನಿಂತು ಸ್ವಂತ ಜಾಗ ತೆಗೆದುಕೊಂಡು ಕಚೇರಿ ಕಟ್ಟಿ ರಾಜಕಾರಣ ಮಾಡಿದೆ ಎಂದು ಹೇಳಿದರು.ಕುದೂರು ಬಿಡಿಸಿಸಿ ಬ್ಯಾಂಕಿನಲ್ಲಿ19 ಕೋಟಿ ರು.ನಕಲಿ ಚಿನ್ನ ಇಟ್ಟು ದುಡ್ಡು ಮಾಡಿದ ಪ್ರಕರಣ ಬೆಳಕಿಗೆ ತರಲು ನೇರಾ ನೇರಾ ಜನರಿಗೆ ತಿಳಿಸಲು ಹೋದರೆ 144 ಸೆಕ್ಷನ್ ಜಾರಿ ಮಾಡಿ ನನ್ನ ಮೇಲೆ ಎಪ್ಐಆರ್ ಹಾಕಿಸಿದರು. ಈ ಘಟನೆಯನ್ನು ಜನರು ಮರೆತಿಲ್ಲ ಎಂದು ಸಚಿವ ಬಾಲಕೃಷ್ಣರ ಮೇಲೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಬಿ.ಆರ್.ಮಂಜುನಾಥ್, ಮರೂರು ಸಾಗರ್, ನರಸಿಂಹಮೂತರ್ಿ, ಹೊನ್ನರಾಜ್, ಬಾಲಕೃಷ್ಣ, ಮತ್ತು ಕುದೂರು ಹೋಬಳಿ ಜೆಡಿಎಸ್ ಕಾರ್ಯಕರ್ತರು ಬಾಗವಹಿಸಿದ್ದರು.ಬಾಕ್ಸ್ ...
ಕುದೂರು ಜಿಪಂ ಆಕಾಂಕ್ಷಿಗಳುಕುದೂರು ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಹಿರಿಯ ಜೆಡಿಎಸ್ ಮುಖಂಡ ಬಿ.ಜಿ.ರಾಮಯ್ಯನವರ ಸೊಸೆ ರಾಧಿಕಾ ಮಂಜುನಾಥ್ ಮತ್ತು ತಾವರೆಕರೆ ಬಸವಲಿಂಗಪ್ಪ ಸೊಸೆ ಶೋಭಜಗದೀಶ್ ಹೆಸರು ಮುನ್ನಡೆಯಲ್ಲಿದೆ.
26ಕೆಆರ್ ಎಂಎನ್ 7.ಜೆಪಿಜಿಕುದೂರು ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಕುರಿತು ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕ ಎ.ಮಂಜುನಾಥ್ ಭಾಗವಹಿಸಿದ್ದರು.