ನಿಮ್ಮ ಧ್ವನಿಯಾಗಿ ವಿಧಾನಸೌಧದಲ್ಲಿ ಮಾತನಾಡುವೆ: ಸಚಿವ ಎಚ್.ಕೆ. ಪಾಟೀಲ

| Published : Nov 24 2024, 01:46 AM IST

ನಿಮ್ಮ ಧ್ವನಿಯಾಗಿ ವಿಧಾನಸೌಧದಲ್ಲಿ ಮಾತನಾಡುವೆ: ಸಚಿವ ಎಚ್.ಕೆ. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಒಂದು ಗ್ರಾಮದಲ್ಲಿ ಕನಿಷ್ಠ 1000 ಜನ ಅಂದುಕೊಂಡರೆ ನಮ್ಮ ಜನಸಂಖ್ಯೆ 33 ಲಕ್ಷಕ್ಕೂ ಆಧಿಕ. 2011ರ ಜನಗಣತಿ ಅಸಮರ್ಪಕವಾಗಿದೆ, ಹೊಸದಾಗಿ ಜನಗಣತಿ ನಡೆಸಿ ನಿಖರ ದತ್ತಾಂಶ ಪಡೆದು ಮೀಸಲಾತಿ ನಿರಂತರವಾಗಿರುವಂತೆ ಸರ್ಕಾರ ಕ್ರಮ ವಹಿಸಬೇಕು

ಗದಗ: ಒಳಮೀಸಲಾತಿ ವಿರೋಧಿಸುವ ಪರಿಶಿಷ್ಟ ಜಾತಿ ಸಮುದಾಯಗಳ ಧ್ವನಿಯಾಗಿ ವಿಧಾನಸೌಧದಲ್ಲಿ ಮಾತನಾಡುವೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ನಗರದಲ್ಲಿ ಒಳಮೀಸಲಾತಿ ವಿರೋಧಿಸಿ ಪರಿಶಿಷ್ಟ ಜಾತಿಯ ಹಲವು ಸಮುದಾಯಗಳು ಧರ್ಮಗುರುಗಳ ನೇತೃತ್ವದಲ್ಲಿ ಒಳಮೀಸಲಾತಿ ವಿರೋಧಿಸುವ ಪರಿಶಿಷ್ಟ ಜಾತಿ ಸಮುದಾಯಗಳ ರಾಜ್ಯ ಸಮಿತಿ ನಡೆಸಿದ ಪ್ರತಿಭಟನಾ ಸ್ಥಳಕ್ಕೆ ಶುಕ್ರವಾರ ಸಂಜೆ ಆಗಮಿಸಿ ಮನವಿ ಸ್ವೀಕರಿಸಿ ಅವರು ಮಾತನಾಡಿದರು. ಯಾವುದೇ ಕಾರಣಕ್ಕೂ ನಿಮಗೆ ಮೀಸಲಾತಿ ತಪ್ಪಬಾರದು. ಅಂಬೇಡ್ಕರ್ ಬರೆದ ಸಂವಿಧಾನವನ್ನು ತಿದ್ದುವುದು, ತೆಗೆದು ಹಾಕಲು ನಮ್ಮ ದೇಶದಲ್ಲಿ ಯಾರಿಗೂ ಹಾಗೂ ಯಾವುದೇ ಸರ್ಕಾರಕ್ಕೂ ನಾವು ಬಿಡುವುದಿಲ್ಲ. ನಾನು ನಿಮ್ಮವನಾಗಿ ನಿಮ್ಮ ವಾದವನ್ನು ಕ್ಯಾಬಿನೆಟ್‌ನಲ್ಲಿ ಇಡುತ್ತೇನೆ. ನಿವೃತ್ತ ನ್ಯಾ. ನಾಗಮೋಹನದಾಸ ಅವರೊಂದಿಗೆ ಚರ್ಚಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಪಾದಯಾತ್ರೆಯ ವೇಳೆ ಧರ್ಮಗುರುಗಳಾದ ಲಿಂಗಸುಗೂರು ಶ್ರೀಸಿದ್ಧಲಿಂಗ ಸ್ವಾಮಿಗಳು, ಬಾಗಲಕೋಟೆ ಕುಮಾರ ಮಹಾರಾಜರು, ಚಿತ್ರದುರ್ಗ ಸರ್ದಾರ ಸೇವಾಲಾಲ ಮಹಾರಾಜ, ಕಲಬುರಗಿಯ ಮುರಾಹರಿ ಮಹಾರಾಜ ಹಾಗೂ ಶಿರಹಟ್ಟಿ ಶಾಸಕ ಚಂದ್ರು ಲಮಾಣಿ, ಸಮಾಜದ ಮುಖಂಡ ರಾಘವೇಂದ್ರ ನಾಯಕ ಅವರು, ಒಳಮೀಸಲಾತಿಯ ಕುರಿತು ಹಕ್ಕೊತ್ತಾಯ ಮಾಡಿದರು.

ಪ್ರತಿಭಟನೆಯಲ್ಲಿ ಧರ್ಮಗುರುಗಳಾದ ಶಿವಪ್ರಕಾಶ ಮಹಾರಾಜರು ಕೊಟ್ಟೂರು, ಮಹಾದೇವ ಮಹಾರಾಜ್ ಮಿಂಚನಾಳ, ಭೀಮಸಿಂಗ್‌ ಮಹಾರಾಜ್ ಇಂಟಗಿಯಾಳ, ತಿಪ್ಪೇಸ್ವಾಮಿ ಸುರಪುರ, ಶಿವಾನಂದ ಮಹಾರಾಜ್ ನಿಲಾನಗರ, ಗೋಸಾವಿ ಮಹಾರಾಜ ಕೊಪ್ಪಳ, ನೀಲು ರಾಠೋಡ, ಪಾಂಡು ಚವ್ಹಾಣ, ಚಂದ್ರಕಾಂತ ಚವ್ಹಾಣ, ಪರಮೇಶ ನಾಯಕ, ಅನಿಲ ಕಾರಭಾರಿ, ಭರತ ನಾಯಕ, ಹನುಮಂತ ನಾಯಕ, ಆಂಜನೇಯ ಕಟಗಿ, ನಾಗರೆಡ್ಡಿ ನಿಡಗುಂದಿ, ಉದಯಕುಮಾರ, ಪ್ರಶಾಂತ ರಾಠೋಡ, ಉಮೇಶ ರಾಠೋಡ, ವಿಠ್ಠಲ ತೋಟದ, ಸುಭಾಷ ಗುಡಿಮನಿ, ಶ್ರೀನಿವಾಸ್ ಬೇವಿನಕಟ್ಟಿ, ಚಂದ್ರಾ ನಾಯಕ, ಅನಿಲ ಕಾರಭಾರಿ, ಐ.ಎಸ್. ಪೂಜಾರ, ದಯಾನಂದ ಪವಾರ್, ಪುಂಡಲೀಕ ಲಮಾಣಿ, ಶಿವಣ್ಣ ಲಮಾಣಿ, ಧನುರಾಮ ತಂಬೂರಿ, ತುಕಾರಾಮ ಲಮಾಣಿ, ಜಾನು ಲಮಾಣಿ, ಈರಣ್ಣ ಲಮಾಣಿ, ಭೀಮಸಿಂಗ್‌ ರಾಠೋಡ, ಆಂಜನೇಯ ಕಟಗಿ, ಮೋಹನ ಭಜಂತ್ರಿ, ಸೋಮು ಲಮಾಣಿ, ರಾಘವೇಂದ್ರ, ದೇವಪ್ಪ ಲಮಾಣಿ, ತಾವರೆಪ್ಪ ಲಮಾಣಿ, ಕುಬೇರಪ್ಪ ರಾಠೋಡ, ಸೋಮರೆಡ್ಡಿ, ಧನಸಿಂಗ್‌ ಲಮಾಣಿ, ಗೋಪಾಲ ಪೂಜಾರ, ಪರಶುರಾಮ ರಾಠೋಡ, ಪುರಪ್ಪ ನಾಯಕ, ನುರಪ್ಪ ನಾಯಕ, ಚಂದ್ರಾ ನಾಯಕ, ಟಿ.ಡಿ. ಪೂಜಾರ, ಸುರೇಶ್ ಮಹಾರಾಜ್, ಎಲ್.ಆರ್. ಚವ್ಹಾಣ, ಖಿಮಪ್ಪ ನಾಯಕ ಹಾಗೂ ಅನೇಕರು ಇದ್ದರು.

ರಾಜ್ಯದಲ್ಲಿ ಬಂಜಾರಾ, ಭೋವಿ, ಕೋರಚ, ಕೋರಮ ಹಾಗೂ ಇತರ ಸಮುದಾಯಗಳು 3300ಕ್ಕಿಂತ ಅಧಿಕ ತಾಂಡಾ, ಗ್ರಾಮಗಳಿವೆ. ಒಂದು ಗ್ರಾಮದಲ್ಲಿ ಕನಿಷ್ಠ 1000 ಜನ ಅಂದುಕೊಂಡರೆ ನಮ್ಮ ಜನಸಂಖ್ಯೆ 33 ಲಕ್ಷಕ್ಕೂ ಆಧಿಕ. 2011ರ ಜನಗಣತಿ ಅಸಮರ್ಪಕವಾಗಿದೆ, ಹೊಸದಾಗಿ ಜನಗಣತಿ ನಡೆಸಿ ನಿಖರ ದತ್ತಾಂಶ ಪಡೆದು ಮೀಸಲಾತಿ ನಿರಂತರವಾಗಿರುವಂತೆ ಸರ್ಕಾರ ಕ್ರಮ ವಹಿಸಬೇಕು ಎಂದು ಒಳಮೀಸಲಾತಿ ವಿರೋಧಿಸುವ ಪರಿಶಿಷ್ಟ ಜಾತಿ ಸಮುದಾಯಗಳ ರಾಜ್ಯ ಸಮಿತಿ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ ಹೇಳಿದರು.

ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಪ. ಜಾತಿ ನೇಮಕಾತಿ ಪ್ರಕ್ರಿಯೆಯನ್ನು ಮೂರು ತಿಂಗಳ ವರೆಗೆ ತಡೆ ಹಿಡಿದಿರುವುದನ್ನು ಮರು ಚಾಲನೆಗೊಳಿಸಬೇಕು ಹಾಗೂ ನಮ್ಮ ಜಾತಿ ಪ್ರಮಾಣ ಹೆಚ್ಚಾಗಿದ್ದು, ನಮಗೆ ಹೆಚ್ಚಿನ ಮೀಸಲಾತಿ ಪ್ರಮಾಣ ನೀಡಬೇಕು. ಹಿಂದಿನ ಸರ್ಕಾರ ಸದಾಶಿವ ಆಯೋಗ ವರದಿಯನ್ನು ತಿರಸ್ಕರಿಸಿದೆ. ಅದರಲ್ಲಿನ ಯಾವುದೇ ಅಂಶವನ್ನು ಈಗಿನ ಸರ್ಕಾರ ಮೀಸಲಾತಿಯಲ್ಲಿ ಪರಿಗಣಿಸಬಾರದು ಎಂದು ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ತಿಳಿಸಿದ್ದಾರೆ.