ಇಂತಹ ಸಾವಿರಾರು ತೊಂದರೆಗಳು ನನಗೆ ಎದುರಾಗಲಿ ನಾನು ಯಾವುದಕ್ಕೂ ಹೆದರುವ ಮಗನಲ್ಲ. ನಿಮ್ಮ ಜೊತೆ ಸದಾ ನಿಲ್ಲುತ್ತೇನೆ. ಗ್ರಾಪಂಗಳ ಅಧಿಕಾರ ಅವಧಿ ಮುಗಿದಿದೆ.
ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ
ನನ್ನ ಉಸಿರು ಇರುವ ತನಕ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ರಕ್ಷಣೆಗೆ ಸದಾ ನಿಲ್ಲುತ್ತೇನೆ. ವಿರೋಧಿಗಳು ಎಷ್ಟೇ ನನಗೆ ಕಿರುಕುಳ ಕೊಡಲಿ. ಎಲ್ಲವನ್ನು ಮೆಟ್ಟಿನಿಲ್ಲುವ ಶಕ್ತಿ ನನಗಿದೆ. ಕಾರ್ಯಕರ್ತರ ರಕ್ಷಣೆಗೆ ನನ್ನ ಪ್ರಾಣ ತ್ಯಾಗಕ್ಕೂ ಸಿದ್ದನಿದ್ದೇನೆಂದು ಎಬಿಡಿ ಟ್ರಸ್ಟ್ ಅಧ್ಯಕ್ಷ ರಾಜೀವ್ ಗೌಡ ಹೇಳಿದರು.ತಾಲೂಕಿನ ಸಾದಲಿ ಗ್ರಾಮದಲ್ಲಿ ಶುಕ್ರವಾರ ಸಾದಲಮ್ಮ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಪೂಜಾ ಕಾರ್ಯಕ್ರಮದ ಬಳಿಕ ನೆರೆದಿದ್ದ ಸಹಸ್ರಾರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಹಿಳಾ ಅಧಿಕಾರಿ ಪ್ರಕರಣದ ವಿಚಾರದಲ್ಲಿ ನನ್ನನ್ನು ಜೈಲಿಗೆ ಕಳುಹಿಸಲು ಕೆಲವರು ರಾಜಕೀಯ ಪಿತೂರಿ ನಡೆಸಿದರು. ಅವರಿಗೆ ಭಗವಂತ ಒಳ್ಳೆಯದು ಮಾಡಲಿ ಎಂದರು.ಇಂತಹ ಸಾವಿರಾರು ತೊಂದರೆಗಳು ನನಗೆ ಎದುರಾಗಲಿ ನಾನು ಯಾವುದಕ್ಕೂ ಹೆದರುವ ಮಗನಲ್ಲ. ನಿಮ್ಮ ಜೊತೆ ಸದಾ ನಿಲ್ಲುತ್ತೇನೆ. ಗ್ರಾಪಂಗಳ ಅಧಿಕಾರ ಅವಧಿ ಮುಗಿದಿದೆ. ಸದ್ಯದಲ್ಲೇ ಗ್ರಾಪಂಗಳಿಗೆ ಚುನಾವಣೆ ನಡೆಯಲಿದ್ದು ನಾವೆಲ್ಲಾ ಸೇರಿ ನಮ್ಮ ಎದುರಾಳಿಗಳನ್ನು ಎದುರಿಸುವ ಕಾರ್ಯ ಮಾಡೋಣ ಎಂದು ತಮ್ಮ ಬೆಂಬಲಿಗರಿಗೆ ಧೈರ್ಯ ತುಂಬಿದರು. ನಾವು ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಹಿಡಿಯದೆ ಹೋದರೆ ಅಧಿಕಾರಿಗಳು ಸರ್ವಾಧಿಕಾರಿ ಧೋರಣೆ ಅನುರಿಸುತ್ತಾರೆ. ಇದು ನಮಗೆ ಈಗ ಅನುಭವ ಆಗಿದೆ. ನಮ್ಮ ಕಾರ್ಯಕರ್ತರಿಗೆ ಅಧಿಕಾರ ಸಿಗದೇ ಹೋದರೆ ನಮ್ಮನ್ನು ನಂಬಿದವರ ಕೆಲಸ ಕಾರ್ಯಗಳು ಆಗಲ್ಲ.
ಈ ವಿಚಾರದಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಬಹಳಷ್ಟು ನೋವು ಪಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಾವು ಜಿಪಂ, ತಾಪಂ ಹಾಗೂ ಗ್ರಾಪಂ ಚುನಾವಣೆಗಳನ್ನು ಒಟ್ಟಾಗಿ ಎದುರಿಸೋಣ. ಗ್ರಾಪಂಗಳಲ್ಲಿ ಉತ್ತಮರನ್ನು ಆರಿಸಿ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸುತೇನೆ. ಎಲ್ಲಾ ಮನೆಗಳಿಗೆ ಬಂದು ನಮ್ಮ ಬೆಂಬಲಿಗರ ಪರವಾಗಿ ಮತ ಯಾಚಿಸುತ್ತೇನೆಂದು ರಾಜೀವ್ಗೌಡ ಹೇಳಿದರು.ಈ ಸಂದರ್ಭದಲ್ಲಿ ಶಿಡ್ಲಘಟ್ಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನಾ ರಾಜೀವ್ ಗೌಡ, ಚಿಲಕಲನೇರ್ಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನುಪಲ್ಲಿ ಕೃಷ್ಣಾರೆಡ್ಡಿ, ಜಿಲ್ಲಾ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ವಕೀಲ ನಾರಾಯಣಸ್ವಾಮಿ, ಗುಡಿಬಂಡೆ ತಾಪಂ ಮಾಜಿ ಅಧ್ಯಕ್ಷ ಕೃಷ್ಣೇಗೌಡ, ಕೋಚಿಮುಲ್ ಮಾಜಿ ಅಧ್ಯಕ್ಷ ಕೆ ಗುಡಿಯಪ್ಪ, ಗೋವಿಂದ್ ರಾಜ್, ಮುತ್ತೂರು ವೆಂಕಟೇಶ್, ನಾಗನರಸಿಂಹ, ಕಂಪನಿ ದೇವರಾಜ್, ಮಧು, ಬಾಲಕೃಷ್ಣ, ಮಂಜುನಾಥ್, ವಕೀಲ ನರೇಂದ್ರ, ದೇವರ ಮಳ್ಳೂರು ರವಿ, ಚಲಪತಿ, ಗಿರೀಶ್, ಮನು, ಇನ್ನಿತರರು ಇದ್ದರು.ಕೋಟ್ನನ್ನ ವಿರುದ್ದ ರಾಜಕೀಯ ಷಡ್ಯಂತ್ರ ರೂಪಿಸಿ ನನ್ನನ್ನು ಜೈಲಿಗೆ ಕಳಿಸಿದವರಿಗೆ ಮುಂದಿನ ದಿನಗಳಲ್ಲಿ ರಾಜಕೀಯವಾಗಿಯೇ ತಕ್ಕಪಾಠ ಕಲಿಸುವ ದಿನಗಳು ದೂರವಿಲ್ಲ. ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಒಟ್ಟಾಗಿ ಎದುರಿಸಿ ನಮ್ಮ ಎದುರಾಳಿಗಳನ್ನು ಮಣ್ಣು ಮುಕ್ಕಿಸುವ ಕೆಲಸ ಮಾಡೋಣ.ರಾಜೀವ್ಗೌಡ, ಎಬಿಡಿ ಟ್ರಸ್ಟ್ ಅಧ್ಯಕ್ಷ.ಬಾಕ್ಸ್ಕಾರ್ಯಕರ್ತರಿಗೆ ಭರ್ಜರಿ ಬಾಡೂಟಜೈಲಿನಿಂದ ಹೊರ ಬಂದ ಬಳಿಕ ರಾಜೀವ್ಗೌಡ ತಮ್ಮ ಪತ್ನಿ ಸಹನಾ ರಾಜೀವ್ಗೌಡ ಅವರ ಹರಿಕೆಯಂತೆ ಇಂದು ಸಾದಲಿಯ ಪ್ರಸಿದ್ಧ ಸಾದಲಮ್ಮ ದೇವಿಗೆ ಇಡೀ ಕುಟುಂಬ ವರ್ಗದಿಂದ ಸಹಸ್ರಾರು ಕಾರ್ಯಕರ್ತರ ಸಮ್ಮುಖದಲ್ಲಿ ವಿಶೇಷ ಪೂಜೆ ಸಲಿಸಿದರು. ನಂತರ ಪಾಲ್ಗೊಂಡಿದ್ದ ಕಾರ್ಯಕರ್ತರಿಗೆ ಭರ್ಜರಿ ಬಾಡೂಟ ಹಾಕಿಸಿದರು. ರಾಜ್ಯದ ಬೀಜ ನಿಗಮದ ಅಧ್ಯಕ್ಷರಾದ ನಂದಿ ಅಂಜಿನಪ್ಪ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.ಸುದ್ದಿ ಚಿತ್ರ ೧ ತಾಲೂಕಿನ ಸಾದಲಿ ಗ್ರಾಮದಲ್ಲಿ ಶುಕ್ರವಾರ ಸಾದಲಮ್ಮ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಪೂಜಾ ಕಾರ್ಯಕ್ರಮದ ಬಳಿಕ ನೆರೆದಿದ್ದ ಸಹಸ್ರಾರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಎಬಿಡಿ ಟ್ರಸ್ಟ್ ಅಧ್ಯಕ್ಷ ರಾಜೀವ್ಗೌಡ