ಒಂದು ವಾರದಲ್ಲಿ ನನ್ನ ನಿರ್ಧಾರ ತಿಳಿಸುವೆ

| Published : Apr 04 2024, 01:00 AM IST

ಸಾರಾಂಶ

ಬಿಜೆಪಿ ಸಂಸದ ಪಿ.ಸಿ ಗದ್ದಿಗೌಡರ, ಸಚಿವ ಶಿವಾನಂದ ಪಾಟೀಲರು ಕರೆ ಮಾಡಿ ಪಕ್ಷಕ್ಕೆ ಬರುವಂತೆ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಇಳಕಲ್ಲಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಯಾರಿಗೆ ಬೆಂಬಲ ನೀಡಬೇಕು ಎಂಬುದನ್ನು ಒಂದು ವಾರದಲ್ಲಿ ನಿರ್ಧರಿಸಿ, ತಿಳಿಸುತ್ತೇನೆ ಎಂದು ಎಸ್.ಆರ್.ಎನ್. ಫೌಂಡೇಶನ್‌ ಅಧ್ಯಕ್ಷ ಎಸ್.ಆರ್‌.ನವಲಿಹಿರೇಮಠ ತಿಳಿಸಿದರು.

ಬುಧವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರು ತಮ್ಮ ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಈಚೆಗೆ ಬಿಜೆಪಿ ಸೇರಿದ ಶಾಸಕ ಗಾಲಿ ಜನಾರ್ದನ್‌ ರೆಡ್ಡಿ ಅವರೂ ಆಹ್ವಾನ ನೀಡಿದ್ದರು. ಆದರೆ, ಸ್ಥಳೀಯರ ವಿರೋಧದ ಹಿನ್ನೆಲೆ ನಾನು ತಟಸ್ಥನಾಗಿ ಉಳಿದಿದ್ದೇನೆ. ಬಿಜೆಪಿ ಸಂಸದ ಪಿ.ಸಿ ಗದ್ದಿಗೌಡರ, ಸಚಿವ ಶಿವಾನಂದ ಪಾಟೀಲರು ಕರೆ ಮಾಡಿ ಪಕ್ಷಕ್ಕೆ ಬರುವಂತೆ ಮನವಿ ಮಾಡಿದ್ದಾರೆ. ನಮ್ಮ ಪಕ್ಷದ ಪದಾಧಿಕಾರಿಗಳ, ಕಾರ್ಯಕರ್ತರ, ನಮ್ಮ ಅಭಿಮಾನಿ ದೇವರುಗಳ ಅಭಿಪ್ರಾಯ ಪಡೆದು ಒಂದು ವಾರದಲ್ಲಿ ತಮ್ಮ ನಿರ್ಧಾರ ತಿಳಿಸುತ್ತೇನೆ ಎಂದು ಹೇಳಿದರು.

ಈ ವೇಳೆ ಬಸವರಾಜ ತಾಳಿಕೋಟಿ, ವಕೀಲ ಜಿ.ಎಂ.ತೆಗ್ಗಿನಮಠ, ಆರ್‌.ಆರ್‌.ಪಾಟೀಲ, ಜಾಕೀರ ತಾಳಿಕೋಟಿ, ಬಸವರಾಜ ಹೆಸರೂರ, ಅಶೋಕ ತೆಳಗಡೆ, ಯಲ್ಲಪ್ಪ ಪೂಜಾರ ಹಾಗು ಇತರರು ಇದ್ದರು.