ಸಾರಾಂಶ
ಕೂಡ್ಲಿಗಿ: ನನ್ನದು ಹಿತ್ತಾಳೆ ಕಿವಿಯಲ್ಲ, ಸಾರ್ವಜನಿಕರು ಸಹಕರಿಸಿದರೆ ಅವರ ಸಮಸ್ಯೆಗಳಿಗೆ ಮತ್ತು ಸರ್ಕಾರದ ನಡುವೆ ಸೇತುವೆಯಾಗಿ, ಧ್ವನಿಯಾಗಿ ಸ್ಪಂದಿಸಿ ಗ್ರಾಮಗಳಿಗೆ ಮೂಲಸೌಕರ್ಯಗಳನ್ನು ನೀಡಲು ಪ್ರಾಮಾಣಿಕವಾಗಿ ಕೆಲಸ ಮಾಡುವೆ ಎಂದು ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ತಿಳಿಸಿದರು.
ಅವರು ತಾೂಲಕಿನ ಕಾನಹೊಸಹಳ್ಳಿ ಸಮೀಪದ ಸೂಲದಹಳ್ಳಿಯಲ್ಲಿ ಮನೆ ಮನೆಗೆ ಶಾಸಕರು, ಮನೆ ಬಾಗಿಲಿಗೆ ನಮ್ಮ ಸರ್ಕಾರ ಮತ್ತು ಅಂಗನವಾಡಿ ಶಾಲೆಗಳಿಗೆ ಇ ಸ್ವತ್ತು ವಿತರಣಾ ಸಮಾರಂಭ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಗ್ಯಾರಂಟಿ ಯೋಜನೆ ಸೇರಿದಂತೆ ಸರ್ಕಾರದ ಸವಲತ್ತುಗಳು ಜನತೆಗೆ ತಲುಪಿಸುವ ಉದ್ದೇಶವಿದೆ, ಕ್ಷೇತ್ರದಲ್ಲಿ ನಿರುದ್ಯೋಗ, ವಸತಿ ಸೌಕರ್ಯಗಳನ್ನು ಹಂತ ಹಂತವಾಗಿ ಬಗೆಹರಿಸಲು ಸೂಕ್ತ ಕ್ರಮಕೈಗೊಳಲಾಗುವುದು ಜತೆಗೆ ರಸ್ತೆ, ಚರಂಡಿ ಮೂಲಭೂತ ಸೌಕರ್ಯಗಳಿಗೆ ಈಗಾಗಲೇ ಸಾಕಷ್ಟು ಅನುದಾನ ತಂದು ಕೆಲಸ ಮಾಡಿರುವೆ. ಈಗಾಗಲೇ ಕಾಮಗಾರಿಗಳು ತ್ವರಿತವಾಗಿ ನಡೆಯಲಿದ್ದು ಇನ್ನು ಹೆಚ್ಚಿನ ಕಾಳಜಿವಹಿಸಿ ಕೆಲಸ ಮಾಡುವೆ ಎಂದರು.ಇ ಸ್ವತ್ತು ಹಸ್ತಾಂತರ:
ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಮತ್ತು ಶಾಲೆಗಳ ಜಾಗವನ್ನು ಕಂದಾಯ ಇಲಾಖೆ ಅಧಿಕಾರಿಗಳ ಪರಿಶ್ರಮದಿಂದ ಇ ಸ್ವತ್ತು ದಾಖಲೀಕರಣ ಮಾಡಿದ್ದು, ಇನ್ನು ಮುಂದೆ ಶಿಕ್ಷಣ ಇಲಾಖೆಗೆ ಹತ್ತಾಂತರ ಮಾಡಲಾಗುವುದು. ಮೊದಲ ಹಂತವಾಗಿ ಸೂಲದಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಶಾಲೆಗಳ ಇಸ್ವತ್ತು ಹಂಸ್ತಾಂತರ ಮಾಡಿದ್ದು ಮುಂದಿನ ದಿನಗಳಲ್ಲಿ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಶಾಲೆಗಳ ಇ ಸ್ವತ್ತು ದಾಖಲೀಕರಣ ಮಾಡಲಾಗುವುದು ಎಂದು ತಿಳಿಸಿದರು.ಗ್ರಾಮಸ್ಥರೊಂದಿಗೆ ಶ್ರಮದಾನ:
ಸೂಲದಹಳ್ಳಿ ಗ್ರಾಮಕ್ಕೆ ಬೆಳಿಗ್ಗೆ ಅಗಮಿಸಿದ ಶಾಸಕರು ಗ್ರಾಮಸ್ಥರು, ಗ್ರಾಪಂ ಸಿಬ್ಬಂದಿ, ತಾಲೂಕು ಅಧಿಕಾರಿಗಳ ಸಹಕಾರದೊಂದಿಗೆ ಇಡೀ ಗ್ರಾಮ ಪರಿಸರದಲ್ಲಿ ಮಾಲಿನ್ಯ ಪ್ರದೇಶವನ್ನು ತಾವೇ ಮುಂದೆ ನಿಂತು ಸ್ವಚ್ಛತೆ ಕೆಲಸ ಮಾಡಿದರು. ತ್ಯಾಜ್ಯವನ್ನು ಟ್ರ್ಯಾಕ್ಟರ್ ಮೂಲಕ ವಿಲೇವಾರಿ ಮಾಡಿದರು. ನಂತರ ಗ್ರಾಮದ ರೈತನ ಮನೆಗೆ ತೆರಳಿ ಸ್ನಾನ ಮಾಡಿಕೊಂಡು ಬಂದು ತಹಸೀಲ್ದಾರ್ ವಿ.ಕೆ.ನೇತ್ರಾವತಿಯೊಂದಿಗೆ ಮನೆ ಮನೆಗೆ ತೆರಳಿ ಅವರ ಸಮಸ್ಯೆಗಳ ಮಾಹಿತಿ ಪಡೆದು ಪರಿಹಾರಿಸುವುದಾಗಿ ಭರವಸೆ ನೀಡಿದರು.ಸಿಎಂ ರಿಂದ ಯೋಜನೆ ಉದ್ಘಾಟನೆ:
ಕ್ಷೇತ್ರದ ದಶಕಗಳ ಬೇಡಿಕೆಯಾದ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ಪೂರ್ಣಗೊಳ್ಳವ ಹಂತದಲ್ಲಿದೆ. ಮುಂದಿನ ತಿಂಗಳು ನವೆಂಬರ್ರಂ 9 ರಂದು ಉದ್ಘಾಟನೆ ಕಾರ್ಯಕ್ರಮಕ್ಕೆ ನಿಗದಿಯಾಗಿದ್ದು, ಅಂದಿನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಸ್ತುವಾರಿ ಸಚಿವರು ಮುಂತಾದವರು ಆಗಮಿಸಲಿದ್ದಾರೆ ಎಂದರು.ಈ ಸಂದರ್ಭದಲ್ಲಿ ತಾಪಂ ಇಒ ನರಸಪ್ಪ, ತಹಶೀಲ್ದಾರ್ ವಿ.ಕೆ.ನೇತ್ರಾವತಿ, ಗ್ರಾಪಂ ಅಧ್ಯಕ್ಷೆ ಬೋವಿ ರತ್ನಮ್ಮ, ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿ ಶಾಮಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶ್ರೀಕಂಠಾಪುರ ವೆಂಕಟೇಶ್, ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಗುರುಸಿದ್ದನಗೌಡ, ಮಾಜಿ ಜಿಪಂ ಸದಸ್ಯ ಕೆ.ಎಂ. ಶಶಿಧರ, ಬಿಇಒ ಮೈಲೇಶ ಬೇವೂರ, ಸೂಲದಹಳ್ಳಿ ಮಾರೇಶ, ಕೆ.ಸಿದ್ದಪ್ಪ, ನಾಗರಕಟ್ಟೆ ರಾಜೇಂದ್ರ ಪ್ರಸಾದ್, ಅಜ್ಜನಗೌಡ್ರು, ಎಚ್.ರಾಜಪ್ಪ, ಅಗ್ರಹಾರ ದಾರುಕಪ್ಪ, ಖಾಲಿ ಸಿದ್ದಪ್ಪ, ಹುಲಿರಾಜ್, ಸಿದ್ದಬಸಪ್ಪ, ಜಿಪಂ ಎಇಇ ಮಲ್ಲಿಕಾರ್ಜುನ, ಪಿಡಬ್ಲ್ಯುಡಿ ಎಇಇ ಕೆ.ನಾಗನಗೌಡ, ಟಿಎಚ್‌ಒ ಡಾ.ಪ್ರದೀಪ, ಪಿಡಿಒ ಭರತಕುಮಾರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.