ಮತ ಪಡೆದು ಗೆದ್ದಿದ್ದೇನೆ, ಲಾಟರಿ ಶಾಸಕನಲ್ಲ: ದೇವೇಂದ್ರಪ್ಪ

| Published : Aug 18 2025, 12:00 AM IST

ಮತ ಪಡೆದು ಗೆದ್ದಿದ್ದೇನೆ, ಲಾಟರಿ ಶಾಸಕನಲ್ಲ: ದೇವೇಂದ್ರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಜಾಪ್ರಭುತ್ವ ವ್ಯವಸ್ಥೆ ಚುನಾವಣೆಯಲ್ಲಿ ಜಗಳೂರು ಕ್ಷೇತ್ರದ ಮತದಾರರು ಪ್ರತಿ ಸ್ಪರ್ಧಿಗಳಿಗಿಂತ 857 ಹೆಚ್ಚು ಮತ ನೀಡಿದ್ದರಿಂದ ಜಗಳೂರು ಕ್ಷೇತ್ರ ಶಾಸಕನಾಗಿ ಆಯ್ಕೆ ಆಗಿದ್ದೇನೆ. ನಾನು ಲಾಟರಿ ಶಾಸಕನಲ್ಲ. ವಿಧಾನಸೌಧದಲ್ಲಿ 112 ಸೀಟ್ ರಿಸರ್ವ್ ಆಗಿ ಇಟ್ಟಿದ್ದಾರೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದ್ದಾರೆ.

- ರಾಮಚಂದ್ರ, ಗುರುಸಿದ್ದನಗೌಡ ತುಂಬಿದ ಕೊಡ, ಅವರ ನೋಡಿ ರಾಜೇಶ್‌ ಕಲಿಯಲೆಂದು ಸಲಹೆ- - -

ಕನ್ನಡಪ್ರಭ ವಾರ್ತೆ ಜಗಳೂರು

ಪ್ರಜಾಪ್ರಭುತ್ವ ವ್ಯವಸ್ಥೆ ಚುನಾವಣೆಯಲ್ಲಿ ಜಗಳೂರು ಕ್ಷೇತ್ರದ ಮತದಾರರು ಪ್ರತಿ ಸ್ಪರ್ಧಿಗಳಿಗಿಂತ 857 ಹೆಚ್ಚು ಮತ ನೀಡಿದ್ದರಿಂದ ಜಗಳೂರು ಕ್ಷೇತ್ರ ಶಾಸಕನಾಗಿ ಆಯ್ಕೆ ಆಗಿದ್ದೇನೆ. ನಾನು ಲಾಟರಿ ಶಾಸಕನಲ್ಲ. ವಿಧಾನಸೌಧದಲ್ಲಿ 112 ಸೀಟ್ ರಿಸರ್ವ್ ಆಗಿ ಇಟ್ಟಿದ್ದಾರೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಪಟ್ಟಣದ ಶಾಸಕರ ಭವನ ಜನಸಂಪರ್ಕ ಕಚೇರಿಯಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಶಾಸಕನಾಗಿ ನನ್ನ ಪರಿಮಿತಿ ಒಳಗೆ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇನೆ. ಆಡಳಿತ ನಡೆಸುವ ಸರ್ಕಾರ ಶಾಸಕರನ್ನು ಪ್ರಶ್ನಿಸುವುದು ಎಚ್ಚರಿಸುವುದು ಸ್ವಾಗತ. ಆದರೆ ನನ್ನ ಕೌಟುಂಬಿಕ, ವೈಯಕ್ತಿಕವಾಗಿ ಮಾತನಾಡಿದ್ದಕ್ಕೆ ಮಾಜಿ ಶಾಸಕ ರಾಜೇಶಣ್ಣನ ವಿರುದ್ಧ ಮಾತನಾಡಿದ್ದೇನೆ. ಮಾಜಿ ಶಾಸಕ ಎಸ್.ವಿ. ರಾಮಚಂದ್ರ, ಟಿ. ಗುರುಸಿದ್ದನಗೌಡ ಅವರು ತುಂಬಿದ ಕೊಡ. ಅವರನ್ನು ನೋಡಿ ರಾಜೇಶ್‌ ಕಲಿತುಕೊಳ್ಳಬೇಕು ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್‌ ವಿರುದ್ಧ ವಾಗ್ದಾಳಿ ಮಾಡಿದರು.

5 ಬಾರಿ ಚುನಾವಣೆಯಲ್ಲಿ ನಿಂತಿರುವ ನಿಮಗೆ 4 ಬಾರಿ ಜನರು ತಿರಸ್ಕರಿಸಿದ್ದಾರೆ. 1 ಬಾರಿ ಅಧಿಕ ಮತ ಪಡೆದು ಗೆದ್ದಿದ್ದೀರಿ. ಚುನಾವಣೆಯಲ್ಲಿ ಅಧಿಕ ಮತಗಳಿಂದ ಸೋತಿರುವ ನೀವು ನಮ್ಮ ಬಗ್ಗೆ ಮಾತನಾಡುವುದು ಸರಿಯಲ್ಲ. ಎಲ್ಲ ಮಾನದಂಡಗಳನ್ನು ಅನುಸರಿಸಿ, ಕಾಂಗ್ರೆಸ್ ಪಕ್ಷ ನನಗೆ ಬಿ ಫಾರಂ ಕೊಟ್ಟು ಜನರಿಂದ ಚುನಾವಣೆ ನಿಯಮದಂತೆ ಜನರು ನನ್ನನ್ನು ಆಯ್ಕೆ ಮಾಡಿದ್ದಾರೆ ಎಂಬುದು ತಿಳಿದಿರಲಿ ಎಂದು ತಾಕೀತು ಮಾಡಿದರು.

ರಾಜಕೀಯ ನಿವೃತ್ತಿ ಹೊಂದಿ ಮಕ್ಕಳನ್ನು ನಿಲ್ಲಿಸೋಣ:

ಮತದಾರರು ನನಗೆ 5 ವರ್ಷ ಅಧಿಕಾರ ನೀಡಿ, ಗೆಲ್ಲಿಸಿ ವಿಧಾನಸೌಧಕ್ಕೆ ಕಳಿಸಿದ್ದಾರೆ. ಇದರಿಂದ ಹತಾಶಗೊಂಡು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಅಧಿಕೃತವಾಗಿ ಸಿಗುವುದಿಲ್ಲ. ಎಸ್.ವಿ. ರಾಮಚಂದ್ರ ಅವರಿಗೆ ಟಿಕೆಟ್ ಸಿಗುತ್ತದೆ ಎಂಬ ಭಯದಿಂದ ಪಕ್ಷೇತರರಾಗಿ ನಿಲ್ಲುವಂತೆ ನನಗೆ ಸವಾಲು ಹಾಕಿದ್ದರಲ್ಲಿ ಹತಾಶೆ ಎದ್ದುಕಾಣುತ್ತದೆ. ಮುಂದಿನ ಚುನಾವಣೆಯಲ್ಲಿ ರಾಜಕೀಯವಾಗಿ ನಿವೃತ್ತಿ ಹೊಂದುತ್ತೇನೆ. ನೀವೂ ರಾಜಕೀಯ ನಿವೃತ್ತಿ ಹೊಂದಿ. ನಿಮ್ಮ ಮಗನನ್ನು, ನನ್ನ ಮಗನೊಂದಿಗೆ ನೇರವಾಗಿ ಚುನಾವಣೆ ನಿಲ್ಲಿಸಿ. ಇದೇ ನನ್ನ ಸವಾಲು ಎಂದರು.

ಬಿಜೆಪಿಯಿಂದ ಪಕ್ಷೇತರರಾಗಿ ನಂತರ ಕಾಂಗ್ರೆಸ್‌ಗೆ ಬಂದು ಅರಸಿಕೆರೆ ದೇವೇಂದ್ರಪ್ಪ, ಪುಷ್ಪ ಲಕ್ಷ್ಮಣ್ ಸ್ವಾಮಿಗೆ ವಂಚಿಸಿ ಟಿಕೆಟ್ ಪಡೆದಿದ್ದಿರಿ ನೀವು. ನನಗೆ ನೈತಿಕ ಪಾಠ ಹೇಳಲು ನಿಮಗೆ ಏನು ಹಕ್ಕಿದೆ? ನನ್ನ ತಂದೆ ಇರಲಿ, ಮಗನಿರಲಿ. ಹೊಂದಾಣಿಕೆ ರಾಜಕೀಯ ಮಾಡಿಕೊಳ್ಳಲ್ಲ. ಪಕ್ಷಕ್ಕೆ ಪ್ರಾಮಾಣಿಕವಾಗಿ ಮತ ಹಾಕಿ ದುಡಿಯುವೆ ಎಂದರು.

ಕೇಂದ್ರದಿಂದ ನಯಾಪೈಸೆ ಇಲ್ಲ:

2 ವರ್ಷಗಳಲ್ಲಿ ₹600 ಕೋಟಿ ತಂದು ಅಭಿವೃದ್ಧಿಪಡಿಸಿರುವ ಬಗ್ಗೆ ಮಾಧ್ಯಮಗಳಿಗೆ ದಾಖಲೆ ಸಮೇತ ಬಿಡುಗಡೆ ಮಾಡುವೆ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಒಂದು ನಯಾಪೈಸ ಇಲ್ಲ. ರಾಜ್ಯ ಸರ್ಕಾರವೇ ಅನುದಾನ ಬಿಡುಗಡೆ ಮಾಡಿದೆ. ನಾನು ಕನ್ನಡಿ ಇದ್ದಂತೆ. ಕನ್ನಡಿ ಮುಂದೆ ನಿಂತು ನಕ್ಕರೆ ಅದು ನಗುತ್ತದೆ, ಅಳುತ್ತ ನಿಂತರೆ ಅಳುವುದೂ ಕಾಣುತ್ತೆ. ಆ ರೀತಿ ಕೆಲಸಕ್ಕೆ ತಕ್ಕ ಪ್ರತಿಫಲ ಕೊಡುತ್ತೇನೆ. ಕ್ಷೇತ್ರದಲ್ಲಿ ಕೆರೆ-ಕಟ್ಟೆಗಳು ತುಂಬುತ್ತವೆ. ಮಾಜಿ ಶಾಸಕರು ಎಲ್ಲರೂ ಸೇರಿ ಒಟ್ಟಾಗಿ ಹೋಗೋಣ ಬನ್ನಿ. ನನ್ನ ಹುಟ್ಟೂರು ಚಿಕ್ಕಮ್ಮನಹಟ್ಟಿ ಗ್ರಾಮಕ್ಕೆ ₹1 ಕೋಟಿ ಹಾಕಿ ಅಭಿವೃದ್ಧಿ ಮಾಡಿದ ರಾಜೇಶಣ್ಣ ಅವರಿಗೆ ಅಭಿನಂದನೆ ಸಲ್ಲಿಸುವೆ. ಕ್ಷೇತ್ರದಲ್ಲಿ ವಿವಿಧ ಗ್ರಾಮಗಳ ಅಭಿವೃದ್ಧಿ ಜೊತೆಗೆ ನಿಮ್ಮ ಸ್ವಂತ ಗ್ರಾಮ ಬಿದರಕೆರೆಗೆ ₹2 ಕೋಟಿ ಹಾಕಿ ಅಭಿವೃದ್ಧಿಪಡಿಸುವೆ ಎಂದರು.

ಈ ಸಂದರ್ಭ ಅರಸಿಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಂಬತ್ತಳ್ಳಿ ಮಂಜಣ್ಣ, ಜಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಶೀರ್ ಅಹಮದ್, ಎಸ್.ಟಿ. ಘಟಕದ ರಾಜ್ಯಾಧ್ಯಕ್ಷ ಕೆಪಿ ಪಾಲಯ್ಯ, ಕಾಂಗ್ರೆಸ್ ಮುಖಂಡರಾದ ಪಿ.ಸುರೇಶ್ ಗೌಡ, ಮೆದುಗಿನಕೆರೆ ಈರಣ್ಣ, ಎಸ್‌ಸಿ-ಎಸ್‌ಟಿ ಘಟಕದ ತಿಪ್ಪೇಸ್ವಾಮಿ, ಪಲ್ಲಗಟ್ಟಿ ಶೇಖರಪ್ಪ, ಮಹೇಶ್ವರಪ್ಪ, ಶಂಭುಲಿಂಗಪ್ಪ, ಶಕೀಲ್ ಅಹ್ಮದ್, ಚಿತ್ತಪ್ಪ, ಸಾವಿತ್ರಮ್ಮ, ಇಕ್ಬಾಲ್ ಅಹಮದ್ ಖಾನ್, ರವಿಕುಮಾರ್, ವೆಂಕಟೇಶ್ ಇತರರು ಉಪಸ್ಥಿತರಿದ್ದರು.

- - -

-16ಜೆ.ಜಿ.ಎಲ್.1.ಜೆಪಿಜಿ:

ಜಗಳೂರು ಪಟ್ಟಣದ ಶಾಸಕರ ಭವನ ಜನಸಂಪರ್ಕ ಕಚೇರಿಯಲ್ಲಿ ಶನಿವಾರ ಶಾಸಕ ಬಿ.ದೇವೇಂದ್ರಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.