ಸಾರಾಂಶ
ಕನ್ನಡಪ್ರಭ ವಾರ್ತೆ, ಬಸವಕಲ್ಯಾಣರಂಭಾಪುರಿ ಶ್ರೀಗಳ ನೇತೃತ್ವದಲ್ಲಿ 9 ದಿನದ ಶರನ್ನವರಾತ್ರಿ ದಸರಾ ದರ್ಬಾರ್ ಕಾರ್ಯಕ್ರಮ ನಗರದಲ್ಲಿ 2025ರ ದಸರಾ ಯಶಸ್ವಿ ಮತ್ತು ವೈಭವಪೂರ್ಣ ನಡೆಯುವ ಜತೆಗೆ ಸಮಾಜಕ್ಕೆ ಆದರ್ಶ ಸಂದೇಶ ಸಾರಲಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಮಠದ ಜಗದ್ಗುರು ಡಾ.ವೀರಸೋಮೇಶ್ವರ ಮಹಾಸ್ವಾಮೀಗಳು ನುಡಿದರು.2025ರಲ್ಲಿ ಬಸವಕಲ್ಯಾಣದಲ್ಲಿ ಜರುಗಲಿರುವ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ನಿಮಿತ್ಯ ತಾಲೂಕಿನ ಹಾರಕೂಡ ಮಠದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಶ್ರೀಗಳು, 12ನೇ ಶತಮಾನದಲ್ಲಿನ ಶರಣರ ಕಾಯಕ ಭೂಮಿ, ಅಧ್ಯಾತ್ಮಿಕ ಕ್ಷೇತ್ರ, ವಚನ ಸಾಹಿತ್ಯದ ಮೂಲಕ ಆದರ್ಶ ಮೌಲ್ಯಗಳು ಬಿತ್ತಿದ ಪವಿತ್ರ ಭೂಮಿಯಲ್ಲಿ 34ನೇ ದಸರಾ ದರ್ಬಾರ ಜರುಗಲಿದ್ದು ಇದು ಬಹಳ ಮಹತ್ವ ಪಡೆದಿದೆ ಹೀಗಾಗಿ ಎಲ್ಲರೂ ಸೇರಿ ಇದನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.ಬಸವಕಲ್ಯಾಣ ಕ್ಷೇತ್ರದ ಶಾಸಕ ಶರಣು ಸಲಗರ ಅವರ ನೇತ್ರತ್ವದಲ್ಲಿ ಆಗಮಿಸಿ ಕಲ್ಯಾಣದಲ್ಲಿ ದಸರಾ ದರ್ಬಾರ ಆಚರಿಸಲು ಸಮಯ ನಿಗದಿಪಡಿಸಲಾಗಿದೆ ಎಂದ ಶ್ರೀಗಳು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಕಾರ್ಯಕ್ರಮ ಯಶಸ್ವಿಗೊಳ್ಳಬೇಕು ಎಂದು ಶಾಸಕ ಶರಣು ಸಲಗರ ಅವರು ಬೆನ್ನೆಲುಬಾಗಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕರೆ ನೀಡಿದರು. ಸ್ವಾಗತ ಸಮಿತಿ ರಚನೆ:ಕಲ್ಯಾಣದಲ್ಲಿ ಜರುಗಲಿರುವ 34ನೇ ದಸರಾ ದರ್ಬಾರ ನಿಮಿತ್ಯ ಸ್ವಾಗತ ಸಮಿತಿ ರಚಿಸಲಾಗಿದ್ದು ಹಾರಕೂಡನ ಡಾ. ಚೆನ್ನವೀರ ಶಿವಾಚಾರ್ಯರು ಗೌರವಾಧ್ಯಕ್ಷರನ್ನಾಗಿ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷರಾಗಿ ಮತ್ತು ಶಾಸಕ ಶರಣು ಸಲಗರ ಅವರನ್ನು ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡುವರು ಎಂದು ವೇದಿಕೆಯಲ್ಲಿ ಘೋಷಣೆ ಮಾಡಿದರು. ನಂತರ ದಿನಗಳಲ್ಲಿ ಹಾರಕೂಡ ಶ್ರೀಗಳು ಮತ್ತು ಶಾಸಕರು ಸೇರಿಕೊಂಡು ಸಮಿತಿಯ ಮತ್ತು ಉಪ ಸಮಿತಿಯ ಪದಾಧಿಕಾರಿಗಳ ನೇಮಕ ಮಾಡಲಿದ್ದಾರೆ ಎಂದು ತಿಳಿಸಿದರು.ಹಿರನಾಗಾಂವನ ಜಯಶಾಂತಲಿಂಗ ಸ್ವಾಮೀ ಮಾತನಾಡಿ, 34ನೇ ದಸರಾ ದರ್ಬಾರ ಕಾರ್ಯಕ್ರಮಕ್ಕೆ ವೈಯಕ್ತಿಕವಾಗಿ 2.51 ಲಕ್ಷ ರು.ನೀಡುವುದಾಗಿ ತಿಳಿಸಿದರು.ತ್ರೀಪುರಾಂತನ ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿದರು. ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ, ಚಂದ್ರಶೇಖರ ಪಾಟೀಲ, ಮಲ್ಲಿನಾಥ ಹಿರೇಮಠ ಹಾರಕೂಡ, ಸೋಮಸೇಖರ ವಸ್ತ್ರದ, ಶ್ರೀಕಾಂತ ಬಡದಾಳೆ, ಮೇಘರಾಜ ನಾಗರಾಳೆ, ಶರಣಪ್ಪ ಬಿರಾದಾರ, ರಾಜಕುಮಾರ ಸಿರಗಾಪೂರ, ಸುನೀಲ ಪಾಟೀಲ, ಮಲ್ಲಯ್ಯ ಹಿರೇಮಠ, ಸಿದ್ರಾಮಪ್ಪ ಗುದಗೆ, ವೀರಣ್ಣ ಶೀಲವಂತ, ಎಮ್.ಕೆ ನಂದಿ, ಎ.ಜಿ ಪಾಟೀಲ, ಸುಭಾಷ ಸೇರಿದಂತೆ ಮತ್ತಿತರಿದ್ದರು. ಶಿಕ್ಷಕ ರಮೇಶ ರಾಜೋಳೆ ನಿರುಪಿಸಿದರು. ಧರ್ಮದ ಏಳಿಗೆಗಾಗಿ ಹಾಗೂ ರಕ್ಷಣೆಗಾಗಿ, ಮಾನವ ಕುಲಕ್ಕೆ ಜಯ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ವಾಕ್ಯದೊಂದಿಗೆ ಬಸವಕಲ್ಯಾಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮವು ಎಲ್ಲರೂ ಸೇರಿ ಅಚ್ಚು ಕಟ್ಟಾಗಿ ಮಾಡೋಣ ಕಲ್ಯಾಣದ ಕೀರ್ತಿ ಇನ್ನೂ ಹೆಚ್ಚಿಸೋಣ ಎಂದು ಶಾಸಕರು ನುಡಿದರು. ಬಸವಕಲ್ಯಾಣದಲ್ಲಿ 34ನೇ ದಸರಾ ದರ್ಬಾರ ಕಾರ್ಯಕ್ರಮ ನಡೆಸಲು ರಂಭಾಪೂರಿ ಜಗದ್ಗುರುಗಳು ಒಪ್ಪಿಗೆ ನೀಡಿದ್ದು ನಮ್ಮ ಪೂರ್ವಜನ್ಮದ ಪುಣ್ಯವಾಗಿದೆ ಎಂದು ಹಾರಕೂಡನ ಡಾ. ಚೆನ್ನವೀರ ಶಿವಾಚಾರ್ಯರು ಹೇಳಿದರು.ಬಸವಕಲ್ಯಾಣದಲ್ಲಿ ಮುಂದಿನ ವರ್ಷ ಜರುಗಲಿರುವ ದಸರಾ ದರ್ಬಾರ ಕಾರ್ಯಕ್ರಮಕ್ಕೆ ಶಾಸಕ ಶರಣು ಸಲಗರ 11 ಲಕ್ಷ. ಕಾಂಗ್ರೆಸ್ ಮುಖಂಡ ಧನರಾಜ ತಾಳಂಪಳ್ಳಿ 5 ಲಕ್ಷ, ಹಾರಕೂಡ ಗ್ರಾಮಸ್ಥರಿಂದ 2 ಲಕ್ಷ, ಹಾರಕೂಡ ಮಠದ ಪೂರ್ವಾಶ್ರಮದ ಸಹೋದರರಿಂದ 1 ಲಕ್ಷ, ಹೀರನಾಗಾಂವ ಶ್ರೀಗಳಿಂದ 2.50 ಲಕ್ಷ ರು. ಸೇರಿದಂತೆ ಒಟ್ಟು 51 ಲಕ್ಷ ರು. ದೇಣಿಗೆ ನೀಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಪ್ರಥಮ ಪೂರ್ವಭಾವಿ ಸಭೆಯಲ್ಲಿ ಹಾರಕೂಡ ಶ್ರೀಗಳು ವೇದಿಕೆಯಲ್ಲಿ ಘೋಷಣೆ ಮಾಡಿದರು.