ಕಡಿಮೆ ಮತದಾನ ಕೇಂದ್ರ ಗುರುತಿಸಿ ಜಾಗೃತಿ ಮೂಡಿಸಿ

| Published : Mar 29 2024, 12:45 AM IST

ಕಡಿಮೆ ಮತದಾನ ಕೇಂದ್ರ ಗುರುತಿಸಿ ಜಾಗೃತಿ ಮೂಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಅತಿ ಕಡಿಮೆ ಮತದಾನವಾದ ಮತಗಟ್ಟೆಗಳನ್ನು ಗುರುತಿಸಬೇಕು. ಮನೆಮನೆಗೆ ಭೇಟಿನೀಡಿ ಜಾಗೃತಿ ಮೂಡಿಸಬೇಕು. ಮೊಬೈಲ್ ಸಂಖ್ಯೆ ಸಂಗ್ರಹಿಸಿ ಚುನಾವಣೆ ಮತದಾನ ಕುರಿತು ನಿರಂತರವಾಗಿ ಸಂದೇಶಗಳನ್ನು ರವಾನಿಸಬೇಕು.

ಕುರುಗೋಡು: ಇಲ್ಲಿನ ಸಮಸ್ಯೆಗಳನ್ನು ಗುರುತಿಸಿ ಲೋಕಸಭಾ ಚುನಾವಣೆಯಲ್ಲಿ ಮತದಾನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಇಸಿಒ ರಾಹುಲ್ ಶರಣಪ್ಪ ಸಂಕನೂರ್ ಸೂಚಿಸಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೂತ್ ಮಟ್ಟದ ಅಧಿಕಾರಿಗಳು, ಮೇಲ್ವಿಚಾರಕರು ಮತ್ತು ಸೆಕ್ಟರ್ ಅಧಿಕಾರಿಗಳಿಗೆ ತಾಲ್ಲೂಕು ಸ್ವೀಪ್ ಸಮಿತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಶಿಕ್ಷಣ ಮತ್ತು ಜಾಗೃತಿ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಅತಿ ಕಡಿಮೆ ಮತದಾನವಾದ ಮತಗಟ್ಟೆಗಳನ್ನು ಗುರುತಿಸಬೇಕು. ಮನೆಮನೆಗೆ ಭೇಟಿನೀಡಿ ಜಾಗೃತಿ ಮೂಡಿಸಬೇಕು. ಮೊಬೈಲ್ ಸಂಖ್ಯೆ ಸಂಗ್ರಹಿಸಿ ಚುನಾವಣೆ ಮತದಾನ ಕುರಿತು ನಿರಂತರವಾಗಿ ಸಂದೇಶಗಳನ್ನು ರವಾನಿಸಬೇಕು. ಉದ್ಯೋಗ ಅರಸಿ ವಲಸೆ ಹೋದವರ ಮಾಹಿತಿ ಸಂಗ್ರಹಿಸಿ ಅವರಿಗೆ ಕರೆ ಮಾಡಿ ನರೇಗಾ ಯೋಜನೆಯಲ್ಲಿ ಅವರಿಗೆ ಸ್ಥಳೀಯವಾಗಿ ಉದ್ಯೋಗ ನೀಡುದಾಗಿ ತಿಳಿಸಿ ಮರಳಿ ಕರೆತನ್ನಿ. ೬ ತಿಂಗಳಿಂದ ೩ವರ್ಷದವರೆಗಿನ ಮಕ್ಕಳನ್ನು ನೋಡಿಕೊಳ್ಳಲು ಎಲ್ಲ ಗ್ರಾಪಂಗಳಲ್ಲಿ ಕೂಸಿನ ಮನೆ ಪ್ರಾರಂಭಿಸಲಾಗಿದೆ. ಅದರ ಸದುಪಯೋಗ ಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.ಜಿಪಂ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ, ತಹಶೀಲ್ದಾರ್ ಎಂ.ರೇಣುಕಾ, ತಾಪಂ ಇಒ ಕೆ.ವಿ. ನಿರ್ಮಲಾ, ನರೇಗಾ ಸಹಾಯಕ ನಿರ್ದೇಶಕ ಪಿ.ಶಿವರಾಮರೆಡ್ಡಿ ಮತ್ತು ಯೋಜನಾಧಿಕಾರಿ ರಾಧಿಕಾ ಇದ್ದರು.