ಪಾಲಕರು ನಿಮ್ಮ ಆಸೆಯನ್ನು ಮಕ್ಕಳ ಮೇಲೆ ಹೇರಿ ಅವರ ಪ್ರತಿಭೆ ಮುರಿಯಬಾರದು
ಕೊಪ್ಪಳ: ಮಕ್ಕಳೇ ನಮ್ಮ ಆಸ್ತಿಯಾಗಿ,ದೇಶದ ಆಸ್ತಿಯಾಗಿಸಲು ಮಗುವಿನ ಸೂಕ್ತ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಬೇಕು ಎಂದು ಬೆಂಗಳೂರಿನ ಖ್ಯಾತ ಲೇಖಕರು, ವೈದ್ಯರು ಹಾಗೂ ಕ್ವಿಜ್ ಮಾಸ್ಟರ್ ಡಾ.ನಾ. ಸೋಮೇಶ್ವರ ಹೇಳಿದರು.
ನಗರದ ಗವಿಮಠದ ಕೈಲಾಸ ಮಂಟಪದಲ್ಲಿ ಬುಧವಾರ ಜರುಗಿದ ಗವಿಸಿದ್ದೇಶ್ವರ ಜಾತ್ರೆಯ ಸಮಾರೋಪ ಸಮಾರಂಭದಲ್ಲಿ ಸಮಾರೋಪ ನುಡಿಗಳನ್ನಾಡಿದ ಅವರು, ಮಕ್ಕಳಿಗೆ ಹೊಲ, ಮನೆ, ಆಸ್ತಿ ಮನೆ ಮಾಡಿ ಆದರೆ ನಮ್ಮ ಮಕ್ಕಳೇ ನಮ್ಮ ಆಸ್ತಿಯಾಗಿ,ದೇಶದ ಆಸ್ತಿಯಾಗಿ ಬೆಳೆಸಬೇಕು. ಅದಕ್ಕಾಗಿ ನಮ್ಮ ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆ ಗುರುತಿಸುವ ಕೆಲಸ ಮಾಡಬೇಕು. ಮಕ್ಕಳ ವೃತಾ(ಹುಟ್ಟಿನ ಗುಣ/ಜನ್ಮದತ್ತ ಆಸಕ್ತಿ) ಯಾವುದು ಎಂಬುದು ಹೆತ್ತವರು, ವಿಶೇಷವಾಗಿ ತಾಯಿ ತಿಳಿಯಬೇಕು. ನಿಮ್ಮ ಮಗುವಿಗೆ ಯಾವ ರೀತಿಯ ತರಬೇತಿ ನೀಡಿದರೆ ಸೂಕ್ತ ಪ್ರತಿಭೆಯ ಅನಾವರಣ ಆಗುವುದು ಎಂದು ಆಲೋಚಿಸಿ ಪಾಲಕರು ಮಕ್ಕಳ ಸೂಕ್ತ ಪ್ರತಿಭೆಗೆ ಪ್ರೋತ್ಸಾಹ ನೀಡಬೇಕು ಎಂದರು.ಪಾಲಕರು ನಿಮ್ಮ ಆಸೆಯನ್ನು ಮಕ್ಕಳ ಮೇಲೆ ಹೇರಿ ಅವರ ಪ್ರತಿಭೆ ಮುರಿಯಬಾರದು. ಹೆತ್ತವರ ಮಾತಿನಿಂದ ಕ್ರಿಕೆಟ್ ಆಡಬೇಕು ಎಂಬ ಆಸೆ ಅಧಮಿಟ್ಟು ಇಂಜಿನಿಯರ್ ಓದಿದರೂ ಸಹ ಆಸಕ್ತಿಯಿಂದ ಅನಿಲ್ ಕುಂಬ್ಳೆ ಕ್ರಿಕೆಟ್ ಆಸಕ್ತಿಯಿಂದ ದೊಡ್ಡ ಆಟಗಾರನಾದ. ಸಚಿನ ತೆಂಡೂಲ್ಕರ್ ತಂದೆ ರಮೇಶ ತೆಂಡೂಲ್ಕರ್ ಸಚಿನನಿಗೆ ಧೈರ್ಯ ತುಂಬಿದ ಕಾರಣ ಕ್ರಿಕೆಟ್ ದೇವರಾದ. ಹುಸೇನ್ ಬೋಲ್ಟ್ ಗೆ ಕ್ರಿಕೆಟ್ ಆಡಬೇಕೆಂಬ ಆಸೆ ಇತ್ತು. ಕೊಚ್ ಹತ್ತಿರ ನಿರಂತರವಾಗಿ ಅವಕಾಶಕ್ಕೆ ಕೇಳುತ್ತಿದ್ದ, ಒಂದು ದಿನ ಒಬ್ಬ ಆಟಗಾರನ ಗೈರಿನಿಂದ ಬೌಂಡರಿ ಲೈನ್ ನಲ್ಲಿ ಸಿಕ್ಕ ಅವಕಾಶ ವೇಗವಾಗಿ ಓಡಿ ಚಂಡು ಬೌಂಡರಿ ಲೈನ್ ದಾಟದಂತೆ ನೋಡಿಕೊಳ್ಳುತ್ತಿದ್ದ. ಅದನ್ನು ಗಮನಿಸಿ ಅವರ ತಂದೆಗೆ ಕೋಚ್ ಅವರು ಅಥ್ಲೆಟಿಕ್ ಓಟಗಾರನಾಗಬೇಕು. ಅವನಿಗೆ ತರಬೇತಿ ನೀಡಿಸಿ ಎಂದು ಹೇಳಿದ್ದರು. ಅದು ವೇಗ ಓಟಗಾರನಾಗಿ ಹೊರಹೊಮ್ಮಲು ಸಾಧ್ಯವಾಯಿತು ಎಂದರು.
ಅಭಿನವ ಗವಿಶ್ರೀ ಪ್ರತಿಭೆ ಗುರುತಿಸಿ ಗವಿಮಠದ ಶ್ರೀ ಲಿಂ.ಶ್ರೀ ಶಿವಶಾಂತವೀರ ಶಿವಯೋಗಿಗಳು ವಿದ್ಯೆ ನೀಡಿದ್ದರ ಫಲ ಇಂದು ಇಡಿ ಭಕ್ತರನ್ನು ಬೆಳಗುತ್ತಿದೆ ಎಂದರು. ಮಕ್ಕಳಾಗಿ ತಾಯಿ, ತಾಯಿ ನಾಡು ಹಾಗೂ ತಾಯಿ ಭಾಷೆ ಕಾಪಾಡಬೇಕು ಎಂದು ಹೇಳಿದರು.9 ಜನ್ಮದತ್ತ ಪ್ರತಿಭೆಗಳು: ಸೂಕ್ತ ಪ್ರತಿಭೆಗಳು ಜನ್ಮದತ್ತ ಜಾಣತನಗಳನ್ನು 9 ರೀತಿಯಲ್ಲಿ ವರ್ಗೀಕರಿಸಲಾಗಿದೆ. ಗಣತೀಯ ತಾರ್ಕೀಕ ಪ್ರತಿಭೆ, ಭಾಷಾ ಬುದ್ಧಿವಂತಿಕೆ, ಅತ್ಯುತ್ತಮ ವ್ಯವಹಾರಿಕ ಪ್ರತಿಭೆ, ಸಂಗೀತ ಪ್ರತಿಭೆ, ಮನೋ ಕಲ್ಪನಾಧಾರಣ ಪ್ರತಿಭೆ, ದೈಹಿಕ ಕ್ರಿಯಾತ್ಮಕ ಬುದ್ಧಿವಂತಿಕೆ, ನೈಸರ್ಗಿಕ ಪ್ರತಿಭೆ ಹಾಗೂ ಅಸ್ತಿತ್ವವಾದ ಬುದ್ಧಿವಂತಿಕೆಗಳೆಂದು ವರ್ಗೀಕರಿಸಲಾಗಿದೆ ಎಂದು ಹೇಳಿದರು.
ಸಾರ್ವಕಾಲಿಕ 4 ಸತ್ಯ ಅರಿಯಿರಿ: ಜಗತ್ತಿನಲ್ಲಿ ಯಾರೂ ದಡ್ಡರೆಂಬುದು ಇಲ್ಲ. ದೇವರು ಹುಟ್ಟುವ ಪ್ರತಿ ಮಗುವಿನ ಮಿದುಳಿನಲ್ಲಿ 100 ಶತಕೋಟಿ ನರಕೋಶ ನೀಡುತ್ತಾನೆ. ಇದು ಎಲ್ಲರಿಗೂ ಸಮವಾಗಿರುತ್ತದೆ. ದಡ್ಡ ಮಗು ಹುಟ್ಟುವುದಕ್ಕೆ ಸಾಧ್ಯ ಇಲ್ಲ. 2 ಮಿದುಳು ತನಗೆ ಹಿತವಾದದನ್ನು ಅರಿತು, ಅಹಿತವಾದದ್ದನ್ನು ಮರೆಯುತ್ತದೆ. 3. ಇಷ್ಟ ಪಟ್ಟು ಓದಬೇಕು. ಕಷ್ಟಪಟ್ಟು ಓದಬಾರದು. 4. ಯಶಸ್ಸಿಗೆ ಯಾವುದೇ ಶಾರ್ಟಕಟ್ ಇಲ್ಲ ಎಂಬುದು ಸಾರ್ವಕಾಲಿಕ ಸತ್ಯಗಳು ಎಂದು ಹೇಳಿದರು.ಮೂರು ಉತ್ತಮ ಪರಿಸರ ಸಿಗಲಿ: ಮಗು ಜಾಣನಾಗಲು ಮಗುವಿಗೆ ಮನೆಯ ಪರಿಸರ, ಶಾಲಾ ಪರಿಸರ, ಸಹಪಾಠಿಗಳ ಪರಿಸರ ಪರಿಣಾಮ ಬೀರುತ್ತದೆ ಎಂದರು.
ಸಮಾರೋಪದಲ್ಲಿ ಸಾಧಕರಿಗೆ ಸನ್ಮಾನಒರಿಸ್ಸಾದ ಗುಡ್ಡುಗಾಡು ಪ್ರದೇಶದ ಗುಮ್ ಸಾಯಿ ಎಂಬ ಹಳ್ಳಿಯಲ್ಲಿ 10 ಕಿಮಿ ಗುಡ್ಡ ಹತ್ತಿ ನಡೆದು ಮಕ್ಕಳು ಶಾಲೆಗೆ ಕಲಿಯಬೇಕಿತ್ತು. ಅದನ್ನು ಅರಿತು 8 ಕಿಮೀ ರಸ್ತೆಯನ್ನು ನಿತ್ಯ ಸ್ವತ ತಾನೇ ಕೆಲಸ ಮಾಡಿ ಆ ಹಳ್ಳಿಗೆ 8 ಕಿಮೀ ರಸ್ತೆ ಮಾಡಿದ್ದ ಜಲಂಧರ ನಾಯಕಗೆ ಸನ್ಮಾನಿಸಲಾಯಿತು.
ಮೆದುಳಿಗೆ ಪಾಶೃವಾಯು ಹೊಡೆದರು ಒಂದೇ ಬೆರಳು ಇದ್ದು, ನಡೆದಾಡಲು ಬಾರದಿದ್ದರೂ ಎಸ್ಸೆಸ್ಸೆಲ್ಸಿಯಲ್ಲಿ 80% ಫಲಿತಾಂಶ, ಪಿಯುಸಿಯಲ್ಲಿ 73% ಫಲಿತಾಂಶ, ನಂತರ ಕಂಪ್ಯೂಟರ್ ಸೈನ್ಸ್ ಇಂಜಿನಿಯರ್ ಮುಗಿಸಿ ಡೆಲ್ ಕಂಪನಿಯಲ್ಲಿ ಸಾಪ್ಟವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಅಶ್ವಿನ್ ಕಾರ್ತಿಕ್ ಹಾಗೂ ಆಕೆಯ ತಾಯಿ ಪ್ರಭಾ ಅವರನ್ನು ಸನ್ಮಾನಿಸಲಾಯಿತು.