ಕಲಾವಿದರಿಗೆ ಗುರುತಿನ ಚೀಟಿ ವಿತರಿಸಿ

| Published : Sep 07 2025, 01:01 AM IST

ಸಾರಾಂಶ

ಕಲಾವಿದರ ಬದುಕು ಕಷ್ಟದಲ್ಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದ ಕಾರ್ಯಕ್ರಮಗಳ ಸಂಭಾವನೆಯನ್ನು ಶೀಘ್ರವಾಗಿ ಪಾವತಿಸಬೇಕು

ಹಾನಗಲ್ಲ: ತಾಲೂಕು ಶ್ರೀಕುಮಾರೇಶ್ವರ ಕಲಾ ಸಂಘದ ನೇತೃತ್ವದಲ್ಲಿ ಶುಕ್ರವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ತಾಲೂಕಿನ ವಿವಿಧ ಪ್ರಕಾರದ ಕಲಾವಿದರ ಸಭೆ ನಡೆಯಿತು.

ಶ್ರೀ ಕುಮಾರೇಶ್ವರ ಕಲಾ ಸಂಘದ ಅಧ್ಯಕ್ಷ ಬಡವೆಪ್ಪ ಆನವಟ್ಟಿ ಮಾತನಾಡಿ, ಕಲಾವಿದರು ಮಾಶಾಸನಕ್ಕೆ ಅರ್ಜಿ ಸಲ್ಲಿಸಲು ಜನ್ಮ ದಾಖಲಾತಿ ಅಥವಾ ಶಾಲಾ ದಾಖಲೆ ಪರಿಗಣಿಸಬೇಕು. ಅರ್ಹ ಕಲಾವಿದರಿಗೆ ಸರ್ಕಾರದಿಂದ ಗುರುತಿನ ಚೀಟಿ ವಿತರಿಸಬೇಕು ಎಂದು ಆಗ್ರಹಿಸಿದರು.

ಹಿರಿಯ ರಂಗ ಕಲಾವಿದ ಮಧುಕುಮಾರ ಎಚ್ ಮಾತನಾಡಿ, ಕಲಾವಿದರ ಬದುಕು ಕಷ್ಟದಲ್ಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದ ಕಾರ್ಯಕ್ರಮಗಳ ಸಂಭಾವನೆಯನ್ನು ಶೀಘ್ರವಾಗಿ ಪಾವತಿಸಬೇಕು. ನಿಧನ ಹೊಂದುವ ಕಲಾವಿದರ ಕುಟುಂಬಕ್ಕೆ ಸರ್ಕಾರ ಪರಿಹಾರ ವಿತರಿಸಬೇಕು. ಕಲಾವಿದರಿಗೆ ಉಚಿತ ಆರೋಗ್ಯ ಸೇವೆ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಕಲಾವಿದರಾದ ಗುಡ್ಡಪ್ಪ ಚೂರಿ, ಸಂತೋಷ ಶೆಟ್ಟರ್‌, ಯಲ್ಲಪ್ಪ ಚಿಕ್ಕಾಂಶಿ, ಕರಬಸಪ್ಪ ಬೆಟಗೇರಿ, ರಾಮನಗೌಡ ಪಾಟೀಲ, ಬಸವಣೆಯ್ಯ ಶಾಸ್ತ್ರಿç, ಬಾಪುಗೌಡ ಪಾಟೀಲ, ಪುಟ್ಟಪ್ಪ ಮುಗಳಿಕಟ್ಟಿ, ನಾಗಪ್ಪ ಡೊಳ್ಳೇಶ್ವರ, ಲಕ್ಷ್ಮಣ ಗಿಡ್ಡಣ್ಣನವರ, ರಾಮಣ್ಣ ಕಲ್ಲಾಪೂರ, ಮಾರ್ತಾಂಡಪ್ಪ ತಳವಾರ, ರಾಮಣ್ಣ ನೀರೊಳ್ಳಿ, ಚೋಳಪ್ಪ ಲಮಾಣಿ, ಕಮಲವ್ವ ತಳವಾರ, ಕಸ್ತೂರೆವ್ವ ಹಿರೇಮಠ, ಕಮಲವ್ವ ಮೆಳ್ಳಳ್ಳಿ, ಅಕ್ಕಮ್ಮ ಖಾನವರ ಇದ್ದರು.