ಬನಹಟ್ಟಿ ನಗರದಲ್ಲಿ ಸಂಭ್ರಮದ ಐದೇಶಿ ಕಾರ್ಯಕ್ರಮ

| Published : Apr 22 2024, 02:16 AM IST

ಸಾರಾಂಶ

ಮಂಗಳಾರುತಿಯ ಸಯಮದಲ್ಲಿ ಪುರುಷರು ದಿವಟಿಗೆಗಳನ್ನು ಮತ್ತು ಮಹಿಳೆಯರು ಆರತಿಗಳನ್ನು ಹಿಡಿದುಕೊಂಡು ಭಾಗವಹಿಸಿದ್ದರು. ಈ ವೇಳೆ ನಗರದಲ್ಲಿ ೨೦ ಕ್ವಿಂಟಲ್ ಕಿಂತಲೂ ಹೆಚ್ಚು ಬೆಲ್ಲ ಹಂಚಲಾಯಿತು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಬನಹಟ್ಟಿ ನಗರದ ಸೋಮವಾರ ಪೇಟೆ ಸಮಸ್ತ ದೈವ ಮಂಡಳಿ ವತಿಯೀಂದ ಐದೇಶಿ ಕಾರ್ಯಕ್ರಮ ಗುರುವಾರ ರಾತ್ರಿ ಸಂಭ್ರಮ ಸಡಗರದಿಂದ ಮಹಾಮಂಗಳಾರುತಿಯೊಂದಿಗೆ ನಡೆಯಿತು.

ಐದೇಶಿ ಎಂದರೆ ಐದು ದಿನಗಳ ಕಾರ್ಯಕ್ರಮ. ಐದು ದಿನಗಳ ಹಿಂದೆ ದೇವರನ್ನು ಕರೆದುಕೊಳ್ಳುವ ಕಾರ್ಯ ನಡೆದಿತ್ತು. ಐದನೆಯ ದಿನದ ಕಾರ್ಯಕ್ರಮ ನಿಮಿತ್ತವಾಗಿ ಗುರುವಾರ ರಾತ್ರಿ ಬನಹಟ್ಟಿಯ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಬೆಳಗ್ಗೆ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಮಧ್ಯಾಹ್ನ ಮಹಿಳೆಯರು ಮಲ್ಲಿಕಾರ್ಜುನ ದೇವರಿಗೆ ನೈವೇದ್ಯ ಸಲ್ಲಿಸಿದರು.

ಬೆಲ್ಲ ಹಂಚುವ ಕಾರ್ಯಕ್ರಮದ ನಂತರ ಮಹಾಮಂಗಳಾರುತಿ ನಡೆಯಿತು. ಮಂಗಳಾರುತಿಯ ಸಯಮದಲ್ಲಿ ಪುರುಷರು ದಿವಟಿಗೆಗಳನ್ನು ಮತ್ತು ಮಹಿಳೆಯರು ಆರತಿಗಳನ್ನು ಹಿಡಿದುಕೊಂಡು ಭಾಗವಹಿಸಿದ್ದರು. ಈ ವೇಳೆ ನಗರದಲ್ಲಿ ೨೦ ಕ್ವಿಂಟಲ್ ಕಿಂತಲೂ ಹೆಚ್ಚು ಬೆಲ್ಲ ಹಂಚಲಾಯಿತು.

ಈ ಸಂದರ್ಭದಲ್ಲಿ ದೈವ ಮಂಡಳಿಯ ಚೇರಮನ್ ಮಲ್ಲಿಕಾರ್ಜುನ ತುಂಗಳ, ಮಹಾಶಾಂತ ಶೆಟ್ಟಿ, ಪ್ರಶಾಂತ ಕೊಳಕಿ, ಕಿರಣ ಆಳಗಿ, ಚೆನ್ನಪ್ಪ ಗುಣಕಿ, ಶಿವು ಬಾಗೇವಾಡಿ, ಶಿವಾನಂದ ಬುದ್ನಿ, ಶಿವನಿಂಗ ಶಿರಹಟ್ಟಿ, ಗುರು ಹೊರಟ್ಟಿ, ಮಲ್ಲಿಕಾರ್ಜುನ ಬುಟ್ಟನವರ, ರಾಜು ಲುಕ್ಕ, ಮಲ್ಲಿಕಾರ್ಜುನ ಬಾವಲತ್ತಿ, ರಾಚಯ್ಯ ಮಠಪತಿ, ಚನ್ನಬಸಯ್ಯ ಮಠಪತಿ, ಬಾಳು ಗಣೇಶನವರ, ಶಿವು ಗಣೇಶನವರ ಸೇರಿದಂತೆ ಅನೇಕರು ಭಾಗವಹಿಸಿದ್ದರು.