ಸಾರಾಂಶ
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಗ್ರಾಮದ ಮಟ್ಟದಲ್ಲಿ ಘನ ತ್ಯಾಜ್ಯ ನಿರ್ವಹಣೆ, ಮಳೆ ನೀರು ಕೊಯ್ಲು ಹಾಗೂ ನವೀಕರಿಸಬಹುದ ಇಂಧನಗಳ ಬಳಕೆ ಮಾಡುವ ಮೂಲಕ ಪರಿಸರ ಸಂರಕ್ಷಣೆ ಮಾಡುವ ಬಗ್ಗೆ ಜಾಗೃತಿ ಮೂಡಿಸಿ ಮಾದರಿ ಗ್ರಾಮವನ್ನಾಗಿಸಲು ಸಂಜೀವಿನಿ ಒಕ್ಕೂಟದ ಮಹಿಳಾ ಸದಸ್ಯರು ಶ್ರಮಿಸಬೇಕು ಎಂದು ತಾಪಂ ವ್ಯವಸ್ಥಾಪಕ ಪ್ರಭು ತಿಳಿಸಿದರು.ನಗರದ ತಾಪಂ ಸಭಾಂಗಣದಲ್ಲಿ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ, ಬೆಂಗಳೂರಿನ ಜಕ್ಕೂರಿನಲ್ಲಿ ಮಹಾತ್ಮಾ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃಧ್ದಿ ಸಂಸ್ಥೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಕೌಶಲ್ಯಾಭಿವೃದ್ದಿ ಮತ್ತು ಜೀವನೋಪಾಯ ಮತ್ತು ಪೂಜಾ ಚಾರಿಟೆಬಲ್ ಟ್ರಸ್ಟ್ ಹಯೋಗದಲ್ಲಿ ನಡೆದ ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರಿಗೆ ಘನ ತ್ಯಾಜ್ಯ ನಿರ್ವಹಣೆ, ಮಳೆ ನೀರು ಕೊಯ್ಲು ಹಾಗೂ ನವೀಕರಿಸಬಹುದ ಇಂಧನಗಳ ಬಳಕೆ ಕುರಿತ ಒಂದು ದಿನದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಕಲ್ಪನೆಯ ಭಾಗವಾಗಿ ಹಳ್ಳಿಗಳು ಅಭಿವೃದ್ಧಿಯಾದರೆ ದೇಶ ಪ್ರಗತಿಯಾಗುತ್ತವೆ ಎಂಬ ನಿಟ್ಟಿನಲ್ಲಿ ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸುವ ಈ ಕಾರ್ಯಕ್ರಮ ಬಹಳ ಉಪಯುಕ್ತವಾಗಿದೆ. ಮಹಿಳಾ ಒಕ್ಕೂಟದ ಸದಸ್ಯರು ಸಂಘಗಳನ್ನು ನಿರ್ವಹಣೆ ಮಾಡುವ ಜೊತೆಗೆ ಅಲ್ಲಿನ ಜನರಿಗೆ ಘನತ್ಯಾಜ್ಯ ನಿರ್ವಹಣೆ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಹೆಚ್ಚು ತಿಳುವಳಿಕೆ ನೀಡಬೇಕು. ಮೊದಲು ನಿಮಗೆ ಇದರ ಬಗ್ಗೆ ಜ್ಞಾನ ಹೆಚ್ಚಾದರೆ ಅವರಿಗೆ ತಿಳುವಳಿಕೆ ಮೂಡಿಸುವುದು ಸುಲಭವಾಗುತ್ತಿದೆ. ಈ ನಿಟ್ಟಿನಲ್ಲಿ ಈ ಕಾರ್ಯಾಗಾರ ಬಹಳ ಯಶಸ್ವಿಯಾಗಿ ನಡೆಯಲಿದೆ ಎಂದರು.ಕರ್ನಾಟಕ ವೈಜ್ಞಾನಿಕ ಪರಿಷತ್ ನ ಜಿಲ್ಲಾಧ್ಯಕ್ಷ ಕಿರಣ್‌ರಾಜ್ ಮಾತನಾಡಿ, ಘನ ತಾಜ್ಯ್ಯ ನಿರ್ವಹಣೆ ಮತ್ತು ಮಳೆ ನೀರು ಕೊಯ್ಲು ಕಾರ್ಯಕ್ರಮಗಳು ಬಹಳ ಉಪಯುಕ್ತವಾಗಿದೆ. ಮನೆಯಿಂದಲೇ ಸ್ವಚ್ಛತೆ ಮತ್ತು ಪರಿಸರ ಕಾಳಜಿ ಮೂಡಿಸಿದರೆ ಮುಂದೆ ಸಹಕಾರಿಯಾಗುತ್ತದೆ. ಮರು ಬಳಕೆಯಾಗಬಹುದ ಇಂಧನಗಳನ್ನು ಹೆಚ್ಚು ಬಳಕೆ ಮಾಡಿ, ದೇಶದ ಸಂಪತ್ತು ವೃದ್ದಿ ಪಡಿಸಲು ಯುವ ಜನಾಂಗ ಮುಂದಾಗಬೇಕು ಎಂದರು.
ಪೂಜಾ ಚಾರಿಟಬಲ್ ಟ್ರಸ್ಟ್‌ನ ಕಾರ್ಯದರ್ಶಿ ಸವಿತ ಮಾತನಾಡಿ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆಯಂತೆ ಎಂಬ ನಾಣ್ನುಡಿಯಂತೆ ಮಹಿಳೆಯರು ಈ ಈ ವಿಷಯ ಬಗ್ಗೆ ಹೆಚ್ಚು ತಿಳಿದು ಕೊಂಡರೆ ನಮ್ಮ ಸುತ್ತಮುತ್ತಲಿನ ಪರಿಸರ ಮತ್ತು ಗ್ರಾಮದ ಸ್ವಚ್ಚವಾಗಿರುತ್ತದೆ ಎಂದರು.ಮಹಾತ್ಮಾ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯ ನಿರ್ದೇಶಕ ಮಂಜುನಾಥ್ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಸಿದ್ದರಾಜು, ಭಾಗ್ಯ, ನಿತ್ಯಾಶ್ರೀ ಅವರು ಘನತ್ಯಾಜ್ಯ ನಿರ್ವವಣೆ ಹಾಗೂ ನವೀಕರಬಹುದಾದ ಇಂಧನಗಳ ಉಪಯುಕ್ತತೆ, ಬಳಕೆ ವಿಧಾನ, ಸರ್ಕಾರದಿಂದ ದೊರೆಯುವ ಸಹಾಯಧನಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಟ್ಟರು.
ತಾಪಂ ಸಹಾಯಕ ಕಾರ್ಯದರ್ಶಿ ಪ್ರಕಾಶ್, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮಹಿಳಾ ಸಂಜೀವಿನಿ ಸಂಘಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.