ರೈತರ ಟ್ರ್ಯಾಕ್ಟರ್ ಜಪ್ತಿ ಮಾಡಿದರೆ ಕಾನೂನು ಕ್ರಮ

| Published : Aug 08 2024, 01:38 AM IST

ರೈತರ ಟ್ರ್ಯಾಕ್ಟರ್ ಜಪ್ತಿ ಮಾಡಿದರೆ ಕಾನೂನು ಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಸಿಂಧನೂರಿನ ಮಿನಿವಿಧಾನಸೌಧ ಸಭಾಂಗಣದಲ್ಲಿ ರೈತರು ಹಾಗೂ ಫೈನಾನ್ಸ್ ಕಂಪನಿಗಳ ಪ್ರತಿನಿಧಿಗಳೊಂದಿಗೆ ತಹಸೀಲ್ದಾರ್ ಅರುಣ್ ಎಚ್.ದೇಸಾಯಿ ಸಭೆ ನಡೆಸಿದರು.

ಸಿಂಧನೂರು: ರೈತರು ಸಾಲ ಪಡೆದು ಕಟ್ಟು ಬಾಕಿದಾರರಾಗಿದ್ದ ಸಂದರ್ಭದಲ್ಲಿ ಫೈನಾನ್ಸ್ ಕಂಪನಿಗಳು ಜಪ್ತಿದಾರರಿಂದ ಕಾನೂನುಬಾಹಿರವಾಗಿ ರೈತರ ಟ್ರ್ಯಾಕ್ಟರ್‌ಗಳನ್ನು ಜಪ್ತಿ ಮಾಡಿಸಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ತಹಸೀಲ್ದಾರ್ ಅರುಣ್ ಎಚ್.ದೇಸಾಯಿ ಎಚ್ಚರಿಕೆ ನೀಡಿದರು.

ಸ್ಥಳೀಯ ಮಿನಿವಿಧಾನಸೌಧ ಸಭಾಂಗಣದಲ್ಲಿ ನಡೆದ ರೈತರು ಹಾಗೂ ಫೈನಾನ್ಸ್ ಕಂಪನಿಗಳ ಸಭೆಯಲ್ಲಿ ಅವರು ಮಾತನಾಡಿ, ರೈತರ ಟ್ರ್ಯಾಕ್ಟರ್ ಸಾಲಕ್ಕೆ 4 ವರ್ಷಕ್ಕೆ 8 ಕಂತು ಮಾಡಿ ₹5 ಲಕ್ಷ ಬಡ್ಡಿ ಹಾಕಿ ಕಂತುಗಳಲ್ಲಿ ಸೇರ್ಪಡೆ ಮಾಡಿ, ಕಂತು ಪಾವತಿಗೆ ಒಂದು ದಿನ ತಡವಾದರೂ ಹೆಚ್ಚಿನ ಬಡ್ಡಿ ಹಾಕುವುದನ್ನು ನಿಲ್ಲಿಸಬೇಕು. ಸಾಲ ತಿರುವಳಿ ಮಾಡದ ಸಮಯದಲ್ಲಿ ರೈತರು ಕೊಟ್ಟ ಚೆಕ್‌ಗಳಿಗೆ ಬೌನ್ಸ್‌ ಎಂದು ಪ್ರಕರಣ ದಾಖಲಿಸಿ, ಅದರ ಖರ್ಚನ್ನು ರೈತರು ಭರಿಸುವಂತೆ ಮಾಡುತ್ತಿರುವುದು, ಸಾಲ ವಸೂಲಿಗೆಂದು ರೈತರ ಮನೆಗಳಿಗೆ ತೆರಳಿ ಗೂಂಡಾಗಿರಿ ಮತ್ತು ಅವಮಾನ ಮಾಡಿ ಟ್ರ್ಯಾಕ್ಟರ್ ಜಪ್ತಿ ಮಾಡುವ ಧೋರಣೆ ನಿಲ್ಲಿಸಬೇಕು ಎಂದು ಸೂಚನೆ ನೀಡಿದರು. ವಿವಿಧ ಸಂಘಟನೆಗಳ ಮುಖಂಡರಾದ ಶರಣಪ್ಪ ಮರಳಿ, ವಿಠಲರಾವ್ ಈಳಗೇರಾ, ಚಂದ್ರಶೇಖರ ಗೊರಬಾಳ, ಮಾನಯ್ಯ ಅಂಕುಶದೊಡ್ಡಿ ಇದ್ದರು.