ಗಾಂಧಿ ಸಿದ್ಧಾಂತ ಪಾಲಿಸಿದರೆ ದೇಶ ವಿಶ್ವಗುರು: ಶಾಸಕ ಅಶೋಕ್ ರೈ

| Published : Oct 04 2025, 12:00 AM IST

ಸಾರಾಂಶ

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಗಾಂಧೀಕಟ್ಟೆ ಸಮಿತಿ ವತಿಯಿಂದ ಪುತ್ತೂರು ಬಸ್‌ನಿಲ್ದಾಣದ ಬಳಿಯ ಗಾಂಧೀಕಟ್ಟೆಯಲ್ಲಿ ಗುರುವಾರ ಗಾಂಧೀ ಜನ್ಮದಿನಾಚರಣೆ ನಡೆಯಿತು.

ಪುತ್ತೂರು: ಮಹಾತ್ಮ ಗಾಂಧೀಜಿ ಬ್ರಿಟಿಷರ ದಾಸ್ಯದಿಂದ ಭಾರತಕ್ಕೆ ಮುಕ್ತಿ ನೀಡಿದ ಮಹಾನ್ ವ್ಯಕ್ತಿಯಾಗಿದ್ದು, ಅಹಿಂಸಾ ಸಿದ್ಧಾಂತ ದೇಶಕ್ಕೆ ಕೊಟ್ಟವರು. ಬ್ರಿಟಿಷರ ಕೈಯಿಂದ ದೇಶವನ್ನು ಬಿಡುಗಡೆಗೊಳಿಸಿರುವ ಅವರ ಸಿದ್ಧಾಂತ ಸಮರ್ಪಕವಾಗಿ ಪಾಲನೆಯಾದಲ್ಲಿ ಮಾತ್ರ ದೇಶ ವಿಶ್ವಗುರುವಾಗಲು ಸಾಧ್ಯ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಗಾಂಧೀಕಟ್ಟೆ ಸಮಿತಿ ವತಿಯಿಂದ ಪುತ್ತೂರು ಬಸ್‌ನಿಲ್ದಾಣದ ಬಳಿಯ ಗಾಂಧೀಕಟ್ಟೆಯಲ್ಲಿ ಗುರುವಾರ ನಡೆದ ಗಾಂಧೀ ಜನ್ಮದಿನಾಚರಣೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬದುಕಿನಲ್ಲಿ ಎಷ್ಟೇ ಸವಾಲುಗಳು ಬಂದರೂ ಮಹಾತ್ಮಾಗಾಂಧಿ ತಮ್ಮ ಅಹಿಂಸಾ ತತ್ವ ಬಿಟ್ಟುಕೊಡಲಿಲ್ಲ. ಅವರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಗಾಂಧೀಜಿ ಅವರಿಗೆ ನಾವು ಗೌರವ ಕೊಡಬೇಕು ಎಂದರು.ದೀಪಪ್ರಜ್ವಲನೆ ಮಾಡಿದ ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಮಾತನಾಡಿ, ಅಹಿಂಸೆ, ಶಾಂತಿ ಸೌಹಾರ್ದತೆಯ ಪ್ರತೀಕವಾಗಿರುವ ಮಹಾತ್ಮಾ ಗಾಂಧೀಜಿಯವರಂತೆ ಅಹಿಂಸಾ ತತ್ವವನ್ನು ಪಾಲನೆ ಮಾಡಬೇಕಾದರೆ ಧೈರ್ಯ ಬೇಕು ಎಂದರು.ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ, ತಹಸೀಲ್ದಾರ್ ನಾಗರಾಜ್ ವಿ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ್, ಇನ್‌ಸ್ಪೆಕ್ಟರ್‌ ಜಾನ್ಸನ್ ಡಿಸೋಜ, ಕ.ಸಾ.ಪ. ಪುತ್ತೂರು ಅಧ್ಯಕ್ಷ ಉಮೇಶ್ ನಾಯಕ್, ತಾ.ಪಂ. ವ್ಯವಸ್ಥಾಪಕ ಜಯಪ್ರಕಾಶ್, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಪುಡಾ ಸದಸ್ಯ ಲ್ಯಾನ್ಸಿ ಮಸ್ಕರೇನಸ್, ಹಿರಿಯ ಗಾಂಧಿವಾದಿ ಬೋಳೋಡಿ ಚಂದ್ರಹಾಸ ರೈ, ಗಾಂಧಿಕಟ್ಟೆ ಸಮಿತಿ ಪ್ರಧಾನ ಕಾರ್ಯದರ್ಶಿ ಸೈಯದ್ ಕಮಾಲ್ ಮತ್ತಿತರರಿದದ್ದರು.ಗಾಂಧೀಕಟ್ಟೆ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಸ್ವಾಗತಿಸಿದರು. ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ ವಂದಿಸಿದರು. ಗಾಂಧಿಕಟ್ಟೆ ಸಮಿತಿ ಸದಸ್ಯ ಇಸಾಕ್ ಸಾಲ್ಮರ ನಿರೂಪಿಸಿದರು.