ಸಾರಾಂಶ
ದುರ್ಗಾದೇವಿ ನವರಾತ್ರಿಯ ಧಾರ್ಮಿಕ ಸಭೆಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಹಿಂದೂಗಳು ಒಗ್ಗೂಡಿದರೆ ಧರ್ಮವನ್ನು ಗಟ್ಟಿಗೊಳಿಸಿ ಉಳಿಸಿ ಬೆಳೆಸಲು ಸಾಧ್ಯವಿದೆ ಎಂದು ಕಾಸರಗೋಡು ಎಡನೀರು ಮಠ ಶಂಕರಾಚಾರ್ಯ ಸಂಸ್ಥಾನದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.ಪಟ್ಟಣದ ಮಾರ್ಕಾಂಡೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ಆಯೋಜಿಸಿರುವ 16ನೇ ವರ್ಷದ ಶರನ್ನವರಾತ್ರಿ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ನಮ್ಮ ಧರ್ಮ ನಮಗೆ ರಾಷ್ಟ್ರ ಭಕ್ತಿ, ದೇಶ ಸೇವೆ, ಆಚರಣೆಗಳ ಅರಿವು ಮೂಡಿಸುತ್ತದೆ. ಪ್ರತಿಯೊಬ್ಬ ಧರ್ಮ ಬಾಂಧವರಲ್ಲಿಯೂ ಇದು ಆಗಬೇಕಿದೆ. ಧರ್ಮದ ವಿಷಯ ಬಂದಾಗ ನಾವೆಲ್ಲರೂ ಒಂದೇ ರೀತಿಯಾಗಿ ವರ್ತಿಸಬೇಕು ಎಂದರು.ಇಂದಿನ ಯುವ ಜನಾಂಗ ಧಾರ್ಮಿಕ ಅರಿವು, ನಂಬಿಕೆಗಳು, ಆಚರಣೆಗಳಿಂದ ವಿಮುಖರಾಗುತ್ತಿದ್ದಾರೆ. ತಂತ್ರಜ್ಞಾನಗಳನ್ನು ಮಾತ್ರ ಅಳವಡಿಸಿಕೊಂಡು ಮುಂದುವರಿಯುತ್ತಿದ್ದಾರೆ. ಕೇವಲ ತಂತ್ರಜ್ಞಾನವೊಂದಿದ್ದರೆ ಸಾಲದು. ಅರಿವು, ನಂಬಿಕೆ, ಆಚರಣೆ ಗಳು ಅಗತ್ಯವಾಗಿ ಇರಬೇಕಿದೆ ಎಂದರು.ಯುವಜನರು ಸಾಮೂಹಿಕವಾಗಿ ನಡೆಯುವ ಉತ್ಸವ, ದೇವಾಲಯಗಳ ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿ ತೊಡಗಿ ಕೊಂಡರೆ ದುಶ್ಚಟಗಳಿಗೆ ದಾರಿ ತಪ್ಪುವ ಸಾಧ್ಯತೆ ಕಡಿಮೆ. ಯುವಜನರು ಸಜ್ಜನ ಮಾರ್ಗದಲ್ಲಿ ನಡೆದರೆ ದೇಶ ಸ್ಥಿರವಾಗಿ, ಧರ್ಮ ಗಟ್ಟಿಯಾಗಿ ಇರಲು ಸಾಧ್ಯ. ಭಾರತ ವಿಶ್ವಕ್ಕೆ ಗುರುವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.ನಮ್ಮ ಮಕ್ಕಳಿಗೆ ಹಿಂದೂ ಸಂಸ್ಕೃತಿ, ಸಂಪ್ರದಾಯ, ಹಬ್ಬಗಳ ಅರಿವು ಮೂಡಿಸಬೇಕು. ಸಂಪ್ರದಾಯಗಳ ಆಚರಣೆ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಈ ಹಿಂದೆ ಮಾತ್ರ ಆಗುತಿತ್ತು, ಇದೂ ಈಗಲೂ ಅಗಬೇಕಿದೆ. ಸಾಮಾಜಿಕ, ರಾಷ್ಟ್ರ ಸೇವೆ, ಧರ್ಮ ಸೇವೆ ಹೆಚ್ಚಾಗಿ ನಡೆಯಬೇಕಿದೆ ಎಂದರು.ನಿಟ್ಟೆ ಡೀಮ್ಡ್ ವಿವಿ ಪ್ರೊಫೆಸರ್ ಡಾ.ಸುಧೀರ್ ರಾಜ್ ಮಾತನಾಡಿ, ಭಾರತ ಅಭಿವೃದ್ಧಿ ಹೊಂದುತ್ತಲೇ ಇದ್ದು, ಯಶಸ್ವಿಯಾಗಿ ಮುನ್ನಡೆಯುತ್ತಲೇ ಇದೆ. ಜೀವನದಲ್ಲಿ ನಮಗೆ ಪ್ರಜ್ಞೆ ಅಗತ್ಯವಾಗಿ ಇರಬೇಕಿದ್ದು, ಆಗ ಮಾತ್ರ ಯಶಸ್ವಿಯಾಗಲು ಸಾಧ್ಯ. ಜೀವನದಲ್ಲಿ ಬದ್ಧತೆಯೂ ಇರಬೇಕಿದೆ.ನಾವುಗಳು ವಾಸ್ತವಕ್ಕೆ ಹೊಂದಿಕೊಂಡು ಹೋದಾಗ ದೈವ, ದೇವರ ಸಾನ್ನಿಧ್ಯ ಅರ್ಥಪೂರ್ಣವಾಗಿ ಸಾಗುತ್ತದೆ. ಸಮಾಜ ಮುಖಿಯಾಗಿ ಬದುಕಿದರೆ ಜೀವನ ಉತ್ತಮಗೊಳ್ಳಲಿದೆ. ವಿಶ್ವಮಾನ ಪರಿಕಲ್ಪನೆಯಡಿ ಭಾರತ ಇಡೀ ವಿಶ್ವಕ್ಕೆ ಮಾರ್ಗದರ್ಶನ ನೀಡುವ ಸ್ಥಾನಕ್ಕೆ ಬಂದು ನಿಂತಿದೆ.ಉತ್ತಮ ಬಾಳ್ವೆ ನಡೆಸಲು ಸಂಸ್ಕಾರ ಬೇಕಿದ್ದು, ಬಾಳು ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿ ಆಗಲಿದೆ. ಭಾರತದ ಭವಿಷ್ಯ ಯುವಜನರ ಕೈಯಲ್ಲಿ ಕಾಣುತ್ತಿದ್ದು, ಇದನ್ನು ಉಳಿಸಿಕೊಳ್ಳಬೇಕಿದೆ ಎಂದರು.ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಎಚ್.ಯು.ಮಿನುಗು, ಬಿ.ಜೆ.ಅನನ್ಯ, ಎ.ಆರ್.ಋತ್ವಿ, ಎ.ಅವಿಜ್ಞಾ, ಎಸ್.ವೈ.ಯಶವಂತ್ ಅವರಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಸನ್ಮಾನಿಸಲಾಯಿತು.ಉದ್ಯಮಿ ವಿಶ್ವನಾಥ್ ಗದ್ದೆಮನೆ, ನವರಾತ್ರಿ ಪೂಜಾ ಸಮಿತಿ ಅಧ್ಯಕ್ಷ ಎಚ್.ಡಿ.ನಾಗೇಶ್ ಹೆಗ್ಡೆ, ಕಾರ್ಯಾಧ್ಯಕ್ಷ ಬಿ. ಚನ್ನಕೇಶವಗೌಡ, ಪ್ರಧಾನ ಕಾರ್ಯದರ್ಶಿ ಆರ್.ಡಿ.ಮಹೇಂದ್ರ, ಕೋಶಾಧ್ಯಕ್ಷ ಭಾಸ್ಕರ್ ವೆನಿಲ್ಲಾ, ಕಾರ್ಯದರ್ಶಿ ಪ್ರಭಾಕರ್ ಪ್ರಣಸ್ವಿ, ಎಚ್.ಡಿ.ಸತೀಶ್, ಉಪಾಧ್ಯಕ್ಷ ಶಿವರಾಮಶೆಟ್ಟಿ, ಸಹ ಖಜಾಂಚಿ ಚೈತನ್ಯ ವೆಂಕಿ, ಕಾನೂನು ಸಲಹೆಗಾರ ಎಚ್.ಎಚ್.ಕೃಷ್ಣಮೂರ್ತಿ ಮತ್ತಿತರರು ಹಾಜರಿದ್ದರು.೦೨ಬಿಹೆಚ್‌ಆರ್ ೧:
ಬಾಳೆಹೊನ್ನೂರಿನ ದುರ್ಗಾದೇವಿ ನವರಾತ್ರಿ ಮಹೋತ್ಸವದ ವಿಜಯದಶಮಿಯಂದು ಭಕ್ತರಿಗೆ ಅನ್ನ ಸಂತರ್ಪಣಾ ಸೇವೆ ನಡೆಸಿದ ಉದ್ಯಮಿ ವಿಶ್ವನಾಥ್ ಗದ್ದೆಮನೆ ಅವರನ್ನು ಸನ್ಮಾನಿಸಲಾಯಿತು. ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ನಾಗೇಶ್ ಹೆಗ್ಡೆ, ಬಿ.ಚನ್ನಕೇಶವ, ಭಾಸ್ಕರ್ ವೆನಿಲ್ಲಾ, ಪ್ರಭಾಕರ್ ಪ್ರಣಸ್ವಿ ಇದ್ದರು.