ನಾ ಶಾಸಕನಾಗಿದ್ದರೆ ಮಾದರಿ ಕ್ಷೇತ್ರ ಮಾಡುತ್ತಿದ್ದೆ

| Published : Jul 23 2025, 01:48 AM IST

ನಾ ಶಾಸಕನಾಗಿದ್ದರೆ ಮಾದರಿ ಕ್ಷೇತ್ರ ಮಾಡುತ್ತಿದ್ದೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಕಳೆದ 5 ವರ್ಷಗಳ ನನ್ನ ಅಧಿಕಾರಾವಧಿಯಲ್ಲಿ ಜಾತಿ, ಧರ್ಮ, ಮತ, ಪಂಥ ಎನ್ನದೇ ಸರ್ವರೂ ಒಂದೇ ಎಂಭ ಭಾವನೆಯೊಂದಿಗೆ ಮತಕ್ಷೇತ್ರದ ಅಭಿವೃದ್ಧಿಯ ಕನಸಿನೊಂದಿಗೆ ಮುನ್ನಡೆದು ಅಭಿವೃದ್ಧಿ ಎಂದರೆ ಏನು ಅನ್ನೋದನ್ನು ಸಾಧನೆ ಮೂಲಕ ಮಾಡಿ ತೋರಿಸಿದ್ದೇನೆ. ಆ ತೃಪ್ತಿ ನನಗಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಕಳೆದ 5 ವರ್ಷಗಳ ನನ್ನ ಅಧಿಕಾರಾವಧಿಯಲ್ಲಿ ಜಾತಿ, ಧರ್ಮ, ಮತ, ಪಂಥ ಎನ್ನದೇ ಸರ್ವರೂ ಒಂದೇ ಎಂಭ ಭಾವನೆಯೊಂದಿಗೆ ಮತಕ್ಷೇತ್ರದ ಅಭಿವೃದ್ಧಿಯ ಕನಸಿನೊಂದಿಗೆ ಮುನ್ನಡೆದು ಅಭಿವೃದ್ಧಿ ಎಂದರೆ ಏನು ಅನ್ನೋದನ್ನು ಸಾಧನೆ ಮೂಲಕ ಮಾಡಿ ತೋರಿಸಿದ್ದೇನೆ. ಆ ತೃಪ್ತಿ ನನಗಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಹೇಳಿದರು.

ಪಟ್ಟಣದ ಮಾರುತಿ ನಗರ ಬಡಾವಣೆ ಹೊರಭಾಗದಲ್ಲಿರುವ ತೋಟದ ಮನೆಯಲ್ಲಿ ಬಿಜೆಪಿ ತಾಲೂಕು ಮಂಡಲ ಹಾಗೂ ಅಭಿಮಾನಿಗಳು ಹಮ್ಮಿಕೊಂಡಿದ್ದ ತಮ್ಮ 56ನೇ ವರ್ಷದ ಜನ್ಮ ದಿನ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಅವರು ಮಾತನಾಡಿದರು. ಹಾಲಿ ಶಾಸಕರು ಗೆದ್ದು ಬಂದ ಮೇಲೆ ಮತಕ್ಷೇತ್ರದಲ್ಲಿ ರೈತರ ಹೊಲಗಳಿಗೆ ಸಮರ್ಪಕ ವಿದ್ಯುತ್ ಸಿಗುತ್ತಿಲ್ಲ, ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡಿಲ್ಲ. ಅಭಿವೃದ್ಧಿಯ ಬಗ್ಗೆಯಾಗಲಿ ಅಥವಾ ಬಡವರ ಬಗ್ಗೆಯಾಗಲಿ ಯಾವುದೇ ಕಾಳಜಿ ಅವರಲ್ಲಿಲ್ಲ. ಆದರೆ, ಈ ಸಂದರ್ಭದಲ್ಲಿ ನಾನು ಶಾಸಕನಾಗಿದ್ದರೇ ಸರ್ಕಾರ ಯಾವುದೇ ಆಗಿರಲಿ ಸರ್ಕಾರದಲ್ಲಿ ಬೆನ್ನು ಬಿದ್ದು ಅಭಿವೃದ್ಧಿ ಮಾಡಲು ಆಯಾ ಇಲಾಖೆಯಲ್ಲಿರುವ ಅನುದಾನವನ್ನು ಬಿಡುಗಡೆ ಮಾಡಿಸಿಕೊಂಡು ಬಂದು, ಗ್ರಾಮೀಣ ಭಾಗದ ಜನರಿಗೆ ರೈತರಿಗೆ ದಿನಕ್ಕೆ 12 ಗಂಟೆ ವಿದ್ಯುತ್ ಕೊಡುತ್ತಿದ್ದೆ. ಬಾಕಿ ಇರುವ ನೀರಾವರಿ ಕಾಮಗಾರಿಗಳನ್ನು ಪೂರ್ಣಗೊಳಿಸುವ ಮೂಲಕ ಮಾದರಿ ಮತಕ್ಷೇತ್ರವನ್ನಾಗಿ ಮಾಡುತ್ತಿದ್ದೆ ಎಂದರು.

ಸದ್ಯ ನಾನು ಅಧಿಕಾರದಲ್ಲಿಲ್ಲ, ಈಗಲೂ ಕಾಲ ಮಿಂಚಿಲ್ಲ. ಆಗಿರುವ ತಪ್ಪಿನ ಅರಿವು ಮೂಡಿಸಿಕೊಂಡು ನಿಮಗೆ ನೀರು ಬೇಕು, ವಿದ್ಯುತ್ ಬೇಕು, ರಸ್ತೆ ಬೇಕು, ಉದ್ಯೋಗ ಸೃಷ್ಟಿಯಾಗಬೇಕು ಎನ್ನುದಾದರೇ ಮುಂಬರುವ ದಿನಗಳಲ್ಲಿ ನಡಹಳ್ಳಿಯವರನ್ನು ಗೆಲ್ಲಿಸಿ. ಅದು ಜನರ ಕೈಯಲ್ಲಿದೆ. ಅದು ನಿಮಗೆ ಬಿಟ್ಟಿದ್ದು

ನಾನು ಎಷ್ಟೆಲ್ಲ ಅಭಿವೃದ್ಧಿ ಮಾಡಿದರೂ ಜನ ನನ್ನನ್ನು ತಿರಸ್ಕಾರ ಮಾಡಿದರು. ಕಾರಣ ನನಗೆ ಮನಸಿಗೆ ತುಂಬ ನೋವಾಯಿತು. ಇನ್ನು ಮುಂದೆ ನಾನು ಜನ್ಮ ದಿನಾಚರಣೆ ಆರಿಸಿಕೊಳ್ಳಬಾರದು ಎಂಬ ತಿರ್ಮಾನ ಮಾಡಿದ್ದೆ. ಆದರೆ, ನನ್ನ ಕಾರ್ಯಕರ್ತರು, ಮುಖಂಡರು ಒತ್ತಾಯದ ಮೇಲೆ ಜನ್ಮ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ. ನನ್ನ ಮೇಲೆ ಅಪಾರ ಅಭಿಮಾನ, ಪ್ರೀತಿ ತೋರಿಸಿ ಅದ್ಧೂರಿ ಜನ್ಮದಿನ ಆಚರಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದ ತಿಳಿಸಿದರು.

ಈ ಸಂದರ್ಭದಲ್ಲಿ ಬಾಜಪ ವಿಜಯಪುರ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಬಾಜಪ ತಾಲೂಕು ಮಂಡಲದ ಅಧ್ಯಕ್ಷ ಜಗಧೀಶ ಪಂಪಣ್ಣವರ, ಮುಖಂಡರಾದ ಮುನ್ನಾಧಣಿ ನಾಡಗೌಡ, ಎಂ ಎಸ್ ಪಾಟೀಲ, ಮುತ್ತು ಅಂಗಡಿ, ಮಲಕೇಂದ್ರಾಯಗೌಡ ಪಾಟೀಲ,ಕೆಂಚೆಪ್ಪ ಬಿರಾದಾರ, ಸೋಮನಗೌಡ ಬಿರಾದಾರ(ಕವಡಿಮಟ್ಟಿ) ಪ್ರಭು ಕಡಿ, ಬಿ ಪಿ ಕುಲಕರ್ಣಿ, ಪುರಸಭೆ ಸದಸ್ಯರಾದ ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಡಾ, ವಿರೇಶ ಪಾಟೀಲ,ಸಿದ್ದರಾಜ ಹೊಳಿ, ಸಂಜು ಬಾಗೇವಾಡಿ, ಆಶೋಕ ರಾಠೋಡ, ವಿರೇಶ ಢವಳಗಿ ಸೇರಿದಂತೆ ಹಲವರು ಇದ್ದರು.

ವಿವಿಧ ಶಿಬಿರ ಆಯೋಜನೆ: ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) 56ನೇ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ, ಜಿಲ್ಲಾ ಸ್ಲಂ ಮೋರ್ಚಾ, ಅಲ್ಪಸಂಖ್ಯಾತ ಮೋರ್ಚಾ, ಗ್ರಾಮಾಂತರ ಮೋರ್ಚಾಗಳಿಂದ ಮಂಗಳವಾರ ಉಚಿತ ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಸೇರಿ ಹಲವು ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

---

ಕೋಟ್‌

ಚುನಾವಣೆ ಮುಗಿದು ಎರಡೂವರೆ ವರ್ಷಗಳು ಗತಿಸಿದರೂ ಹಾಲಿ ಶಾಸಕರು ಒಬ್ಬರಿಗೂ ಕೃತಜ್ಞತೆಗಳನ್ನು ಸಲ್ಲಿಸಿಲ್ಲ. ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಮುಂದೆಯೂ ಅವರಿಂದ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ. ಅಂತವರನ್ನು ಜನರು ಅದ್ಹೇಗೆ ಗೆಲ್ಲಿಸಿದರೋ ಗೊತ್ತಿಲ್ಲ. ವಾಸ್ತವ ಸ್ಥಿತಿಗತಿಗಳ ಬಗ್ಗೆ ಜನರು ಅರ್ಥೈಸಿಕೊಳ್ಳಬೇಕು. ಅಭಿವೃದ್ಧಿಯ ಬಗ್ಗೆಯಾಗಲಿ ಅಥವಾ ಬಡವರ ಬಗ್ಗೆಯಾಗಲಿ ಕಾಳಜಿ ಇಲ್ಲ. ನಾನು ಶಾಸಕನಾಗಿದ್ದರೇ ಸರ್ಕಾರ ಯಾವುದೇ ಆಗಿರಲಿ ಬೆನ್ನು ಬಿದ್ದು ಅನುದಾನ ತರುತ್ತಿದ್ದೆ.

ಎ.ಎಸ್‌.ಪಾಟೀಲ,(ನಡಹಳ್ಳಿ), ಮಾಜಿ ಶಾಸಕ