ಪಾಂಡವಪುರ:

ಸ್ಥಳೀಯವಾಗಿ ಜನರಿಗೆ ಉದ್ಯೋಗವಕಾಶಗಳನ್ನು ಸೃಷ್ಟಿಸಿದರೆ ನಗರ ಪ್ರದೇಶಗಳಿಗೆ ವಲಸೆ ಹೋಗುವ ಬದಲಿಗೆ ಊರಿನಲ್ಲೇ ಜನ ಉಳಿಯುತ್ತಾರೆ. ಇದರಿಂದ ಗ್ರಾಮೀಣ ಪ್ರದೇಶದ ಆರ್ಥಿಕತೆಗೆ ಬೆಳವಣಿಗೆಯಾಗುತ್ತದೆ ಎಂದು ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಹೇಳಿದರು.

ತಾಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ಪುಟ್ಟಣ್ಣಯ್ಯ ಫೌಂಡೇಶನ್‌ ಮತ್ತು ಸೆಲ್ಕೋ ಫೌಂಡೇಶನ್‌ನಿಂದ ಆಧುನೀಕರಣಗೊಂಡ ಶಾರದಾ ಮಿನಿ ಗಾರ್ಮೆಂಟ್ಸ್‌ ಘಟಕ ಉದ್ಘಾಟಿಸಿ ಮಾತನಾಡಿದರು.

ಮಿನಿ ಗಾರ್ಮೆಂಟ್ಸ್ ನ ಇಡೀ ಉತ್ಪಾದನಾ ಘಟಕಕ್ಕೆ ಸೋಲಾರ್‌ ವ್ಯವಸ್ಥೆ ಅಳವಡಿಸಲಾಗಿದೆ. ನಾವು ಎಲ್ಲ ಕಡೆ ಸಣ್ಣ ಕೈಗಾರಿಕೆಗಳಿಗೆ ಆದ್ಯತೆ ಕೊಡುತ್ತಿದ್ದೇವೆ. ಇದರಿಂದಾಗಿ ಸ್ಥಳೀಯ ಮಟ್ಟದಲ್ಲಿ ಜನರಿಗೆ ಉದ್ಯೋಗ ದೊರಕುವ‌ ಜತೆಗೆ ಅವರಿಗೆ ಖರ್ಚು ಕೂಡ ಕಡಿಮೆ ಇರುತ್ತದೆ. ಈ ನಿಟ್ಟಿನಲ್ಲಿ ಸ್ಥಳೀಯವಾಗಿ ಉದ್ಯೋಗವಕಾಶ ಸೃಷ್ಟಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಗಾರ್ಮೆಂಟ್ಸ್‌ ನೂರಾರು ಜನರಿಗೆ ಕೆಲಸ ಕೊಡುವಂತೆ ಬೆಳೆಯಲಿ ಎಂದು ಶುಭಕೋರಿದರು.

ಈ ವೇಳೆ ಪುಟ್ಟಣ್ಣಯ್ಯ ಫೌಂಡೇಶನ್ ಸಿಇಒ‌ ಹಿರೇಮರಳಿ ರಣಜಿತ್, ಶಾರದಾ ಗಾರ್ಮೆಂಟ್ಸ್ ಮಾಲೀಕ ಪ್ರಜ್ವಲ್,‌ ರೈತಸಂಘದ ಮುಖಂಡ ವಿಜೇಂದ್ರ, ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಸಿ.ಎಂ.ಶ್ರೀಕಾಂತ್, ಕೃಷ್ಣೇಗೌಡ ಇತರರಿದ್ದರು.


ಜುಲೈ 5 ರಂದು ರಾಜ್ಯ ಮಟ್ಟದ ಜೋಡಿ ಕರುಗಳ ಚಕ್ಕಡಿ ಓಟದ ಸ್ಪರ್ಧೆ

ಪಾಂಡವಪುರ: ತಾಲೂಕಿನ ಕೆನ್ನಾಳು ಗ್ರಾಮದ ಸಿಪಿಎಡ್ ಕಾಲೇಜಿನ ಬಳಿ ಶ್ರೀಜಯಚಾಮರಾಜೇಂದ್ರ ಕಲಾಸಂಘದ ವತಿಯಿಂದ ಜುಲೈ 5ರಂದು ಮೊದಲನೇ ವರ್ಷದ ರಾಜ್ಯ ಮಟ್ಟದ ಜೋಡಿಕರುಗಳ ಚಕ್ಕಡಿ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು 3999 ಪ್ರವೇಶಾತಿ ಶುಲ್ಕ ಪಾವತಿಸಬೇಕು, ಮೊದಲನೇ ಬಹುಮಾನ 8 ಗ್ರಾಂ ಚಿನ್ನ, ಎರಡನೇ ಬಹುಮಾನ ಹೀರೋ ಎಚ್.ಎಫ್ 100 ಬೈಕ್, ತೃತೀಯ ಬಹುಮಾನ 30 ಸಾವಿರ, ನಾಲ್ಕನೇ ಬಹುಮಾನ 15 ಸಾವಿರ, ಐದನೇ ಬಹುಮಾನ 10 ಸಾವಿರ, ಆರನೇ ಬಹುಮಾನ 8 ಸಾವಿರ, ಏಳನೇ ಬಹುಮಾನ 5 ಸಾವಿರ. ಹೆಚ್ಚಿನ ಮಾಹಿತಿಗಾಗಿ ಮನೋಜ್‌ಗೌಡ-9972938163, 9972484236ಗೆ ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.