ಐದಳಕಾವಲ್‌ನಲ್ಲಿ ಎತ್ತಿನಹೊಳೆ ಯೋಜನೆಯ ಕಾಮಗಾರಿಯನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರ ಹೇಳಿಕೆ ಕುರಿತೇ ಮಾಧ್ಯಮದವರು ಪದೇಪದೇ ಪ್ರಶ್ನಿಸುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.ಕುಮಾರಸ್ವಾಮಿ ಅವರ ಹೇಳಿಕೆಗಳ ಕುರಿತು ನಿರಂತರವಾಗಿ ಪ್ರಶ್ನಿಸುತ್ತಿರುವುದೇಕೆ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದ ಸಚಿವರು, ಶಿವಲಿಂಗೇಗೌಡರಾಗಲಿ, ತಾವಾಗಲಿ ಅಥವಾ ಬೇರೆ ರಾಜಕಾರಣಿಗಳಾಗಲಿ ಹೇಳಿಕೆ ನೀಡಿದಾಗ ಒಂದೆರಡು ಬಾರಿ ಪ್ರಶ್ನಿಸಿ ಸುಮ್ಮನಾಗುತ್ತೀರಿ. ಆದರೆ ಕುಮಾರಸ್ವಾಮಿ ಅವರ ವಿಚಾರದಲ್ಲಿ ಮಾತ್ರ ಪದೇಪದೇ ಪ್ರಶ್ನಿಸುತ್ತಿರುವುದೇಕೆ ಎಂದು ಕೇಳಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರು ಸರ್ಕಾರವನ್ನು ಅಲುಗಾಡಿಸುವಂತಹ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ನೀಡಿರುವ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಅವರ ಬಳಿ ನಿಜವಾಗಿಯೂ ದಾಖಲೆಗಳಿದ್ದರೆ ಬಿಡುಗಡೆ ಮಾಡುವಂತೆ ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಸವಾಲು ಹಾಕಿದ್ದಾರೆ.ತಾಲೂಕಿನ ಐದಳಕಾವಲ್‌ನಲ್ಲಿ ಎತ್ತಿನಹೊಳೆ ಯೋಜನೆಯ ಕಾಮಗಾರಿಯನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರ ಹೇಳಿಕೆ ಕುರಿತೇ ಮಾಧ್ಯಮದವರು ಪದೇಪದೇ ಪ್ರಶ್ನಿಸುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.ಕುಮಾರಸ್ವಾಮಿ ಅವರ ಹೇಳಿಕೆಗಳ ಕುರಿತು ನಿರಂತರವಾಗಿ ಪ್ರಶ್ನಿಸುತ್ತಿರುವುದೇಕೆ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದ ಸಚಿವರು, ಶಿವಲಿಂಗೇಗೌಡರಾಗಲಿ, ತಾವಾಗಲಿ ಅಥವಾ ಬೇರೆ ರಾಜಕಾರಣಿಗಳಾಗಲಿ ಹೇಳಿಕೆ ನೀಡಿದಾಗ ಒಂದೆರಡು ಬಾರಿ ಪ್ರಶ್ನಿಸಿ ಸುಮ್ಮನಾಗುತ್ತೀರಿ. ಆದರೆ ಕುಮಾರಸ್ವಾಮಿ ಅವರ ವಿಚಾರದಲ್ಲಿ ಮಾತ್ರ ಪದೇಪದೇ ಪ್ರಶ್ನಿಸುತ್ತಿರುವುದೇಕೆ ಎಂದು ಕೇಳಿದರು.ಹಲವು ಹೇಳಿಕೆಗಳು ಏನಾದವು?

2023ರಿಂದಲೂ ಕುಮಾರಸ್ವಾಮಿ ಅವರು ವಿವಿಧ ವಿಚಾರಗಳ ಕುರಿತು ಹಲವು ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಪೆನ್‌ಡ್ರೈವ್ ಸೇರಿದಂತೆ ಹಲವು ವಿಚಾರಗಳಲ್ಲಿ ಅವರು ನೀಡಿದ್ದ ಹೇಳಿಕೆಗಳ ಪೈಕಿ ಎಷ್ಟು ಪರಿಣಾಮ ಬೀರಿವೆ ಎಂಬುದನ್ನು ಪರಿಶೀಲಿಸಬೇಕಿದೆ ಎಂದು ಚಲುವರಾಯಸ್ವಾಮಿ ಹೇಳಿದರು. ದೇಶವೇ ಅಲ್ಲೋಲಕಲ್ಲೋಲವಾಗಲಿದೆ, ಸರ್ಕಾರವೇ ಅಲುಗಾಡಲಿದೆ ಎನ್ನುವಷ್ಟು ಮಹತ್ವದ ದಾಖಲೆಗಳು ತಮ್ಮ ಬಳಿ ಇದ್ದರೆ, ಅವುಗಳನ್ನು ಬಿಡುಗಡೆ ಮಾಡುವುದಕ್ಕೆ ಯಾರೂ ತಡೆಯೊಡ್ಡಿಲ್ಲ. ಅಂತಹ ದಾಖಲೆಗಳಿದ್ದ ಸಂದರ್ಭದಲ್ಲಿ ವಿದೇಶ ಪ್ರವಾಸ ಕೈಗೊಳ್ಳುವ ಬದಲು ಅವುಗಳನ್ನು ಇಲ್ಲಿಂದಲೇ ಬಿಡುಗಡೆ ಮಾಡಿ ಮಾತನಾಡಬಹುದಿತ್ತಲ್ಲವೇ ಎಂದು ಪ್ರಶ್ನಿಸಿದರು.ಕುಮಾರಸ್ವಾಮಿ ಅವರು ವಿದೇಶ ಪ್ರವಾಸಕ್ಕೆ ತೆರಳಿರುವ ಸಂದರ್ಭದಲ್ಲೇ ಇಂತಹ ಹೇಳಿಕೆ ನೀಡಿರುವುದರ ಹಿಂದಿನ ಕಾರಣವೇನು ಎಂಬುದನ್ನು ಅವರ ರಾಜಕೀಯ ಇತಿಹಾಸ ಗಮನಿಸಿದರೆ ಅರ್ಥವಾಗಲಿದೆ ಎಂದು ಸಚಿವರು ಹೇಳಿದರು. ಪದೇಪದೇ ಇದೇ ವಿಚಾರವನ್ನು ಕೇಳುವುದರಿಂದ ತಮಗೂ ಮುಜುಗರವಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.''''''''ದಾಖಲೆ ಬಿಡುಗಡೆಗೆ ಯಾರ ತಡೆ?’

ಕುಮಾರಸ್ವಾಮಿ ಅವರ ಬಳಿ ದಾಖಲೆಗಳಿದ್ದರೆ ಅವುಗಳನ್ನು ಬಿಡುಗಡೆ ಮಾಡಲು ಯಾರೂ ಅಡ್ಡಿಪಡಿಸುತ್ತಿಲ್ಲ. ದಾಖಲೆಗಳನ್ನು ಬಿಡುಗಡೆ ಮಾಡಬಾರದು ಎಂದು ಸರ್ಕಾರವಾಗಲಿ, ನ್ಯಾಯಾಲಯವಾಗಲಿ ಯಾವುದೇ ತಡೆಯಾಜ್ಞೆ ನೀಡಿಲ್ಲ. ಹಾಗಿದ್ದರೆ ದಾಖಲೆಗಳನ್ನು ಬಿಡುಗಡೆ ಮಾಡದೇ ಇರುವುದಕ್ಕೆ ಕಾರಣವೇನು ಎಂದು ಚಲುವರಾಯಸ್ವಾಮಿ ಸರಣಿ ಪ್ರಶ್ನೆಗಳನ್ನು ಹಾಕಿದರು.

ಮಾಧ್ಯಮದವರು ಯಾರ ಪರವಾಗಿಯೂ ಇರಬೇಕು ಎಂದು ತಾವು ಎಂದಿಗೂ ಹೇಳುವುದಿಲ್ಲ. ಆದರೆ ತಮ್ಮ ವಿಚಾರಗಳಿಗೂ ಮಾಧ್ಯಮದಲ್ಲಿ ಅವಕಾಶ ನೀಡಬೇಕು ಎಂದು ಮನವಿ ಮಾಡಿದ ಅವರು, ಕುಮಾರಸ್ವಾಮಿ ಅವರ ಹೇಳಿಕೆಗಳಿಗೆ ನೀಡುವಷ್ಟೇ ಗಮನವನ್ನು ಇತರರ ಹೇಳಿಕೆಗಳಿಗೂ ನೀಡಬೇಕು ಎಂದರು. ಇದೇ ವಿಚಾರವನ್ನು ಪದೇಪದೇ ಪ್ರಶ್ನಿಸಬಾರದು ಎಂದು ಮಾಧ್ಯಮದವರಿಗೆ ಕೈಮುಗಿದು ಮನವಿ ಮಾಡಿದ ಸಚಿವರು, ‘‘ಈ ವಿಚಾರವನ್ನು ಮತ್ತೆ ಮತ್ತೆ ರಿಪೀಟ್ ಮಾಡಬೇಡಿ’’ ಎಂದು ಹೇಳಿದರು.ಕಾಮಗಾರಿ ತ್ವರಿತ ಪೂರ್ಣಗೊಳಿಸಲು ಸೂಚನೆ:

ಇದಕ್ಕೂ ಮುನ್ನ ಎತ್ತಿನಹೊಳೆ ಯೋಜನೆಯ ಕಾಮಗಾರಿಯನ್ನು ಸಚಿವ ಎನ್.ಚಲುವರಾಯಸ್ವಾಮಿ ಪರಿಶೀಲಿಸಿದರು. ಕಾಮಗಾರಿ ಪ್ರಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಯಾವುದೇ ಕಾರಣಕ್ಕೂ ಕಾಮಗಾರಿ ವಿಳಂಬವಾಗದಂತೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಎಂದು ಸೂಚಿಸಿದರು.ಈ ಸಂದರ್ಭದಲ್ಲಿ ಅಬಕಾರಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ, ಶಾಸಕ ಎಚ್.ಕೆ.ಸುರೇಶ್, ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ, ಮಾಜಿ ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ ಸೇರಿದಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

==ಬಾಕ್ಸ್‌:::: ನೂರು ದಿನದಲ್ಲಿ ತುಮಕೂರಿಗೆ ಎತ್ತಿನಹೊಳೆ ನೀರು: ಶಿವಲಿಂಗೇಗೌಡ

ಎತ್ತಿನಹೊಳೆ ಯೋಜನೆಯ ಮೂಲಕ ನೂರು ದಿನಗಳೊಳಗೆ ತುಮಕೂರಿಗೆ ನೀರು ಹರಿಸುವ ಗುರಿಯನ್ನು ಹೊಂದಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ತಳಲುತೊರೆಯಲ್ಲಿ ಎತ್ತಿನಹೊಳೆ ಯೋಜನೆಯ ಗುರುತ್ವ ಕಾಲುವೆ ಪ್ಯಾಕೇಜ್-8ರ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು, ಯೋಜನೆ ಪೂರ್ಣಗೊಂಡ ಬಳಿಕ ಅರಸೀಕೆರೆ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಿಗೂ ಕುಡಿಯುವ ನೀರಿನ ಲಭ್ಯತೆ ಹೆಚ್ಚಾಗಲಿದೆ. ಕೆರೆಗಳು ತುಂಬುವುದರಿಂದ ಅಂತರ್ಜಲ ಮಟ್ಟವೂ ಸುಧಾರಿಸಲಿದ್ದು, ಕೊಳವೆಬಾವಿಗಳಲ್ಲಿ ನೀರು ದೊರೆಯುವ ನಿರೀಕ್ಷೆಯಿದೆ ಎಂದರು. ಯೋಜನೆಯ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ನದಿ ನೀರು ಹರಿಯಲು ಅಗತ್ಯ ಕ್ರಮ ಕೈಗೊಳ್ಳಬೇಕು. ಯಾವುದೇ ಹಂತದಲ್ಲೂ ಕಾಮಗಾರಿ ವಿಳಂಬವಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.

===

ಫೊಟೋ:

ಅರಸೀಕೆರೆ ತಾಲೂಕಿನ ಐದಳಕಾವಲ್‌ನಲ್ಲಿ ಎತ್ತಿನಹೊಳೆ ಯೋಜನೆಯ ಕಾಮಗಾರಿಯನ್ನು ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಸಚಿವ ಶಿವಲಿಂಗೇಗೌಡರು ಪರಿಶೀಲಿಸಿದರು.