ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಒಂದು ಭಾಷೆ ನಾಶ ಆದರೆ, ಆ ಜನಾಂಗದ ಸಂಸ್ಕೃತಿ ನಾಶಗುತ್ತದೆ. ಒಂದು ಸಂಸ್ಕೃತಿ ನಾಶ ಆದರೆ ಆ ಜನಾಂಗವೇ ನಾಶ ಆಗಿ ಹೋಗುತ್ತದೆ. ಆದ್ದರಿಂದ ಭಾಷೆಯ ನಾಶವಾಗಲು ಬಿಡಬಾರದು ಎಂಬುದನ್ನು ಎಲ್ಲರೂ ಅರಿತುಕೊಂಡು ನಮ್ಮ ಮಾತೃಭಾಷೆಯನ್ನು ಮಾತನಾಡಬೇಕೆಂದು ತೂಕ್ ಬೊಳಕ್ ಕಲೆ ಕ್ರೀಡೆ ಸಾಹಿತ್ಯ ಅಕಾಡೆಮಿಯ ಸಂಚಾಲಕ ಮುಲ್ಲೇಂಗಡ ಮಧೋಶ್ ಪೂವಯ್ಯ ಅಭಿಪ್ರಾಯಪಟ್ಟಿದ್ದಾರೆಟಿ. ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ನಡೆಯುತ್ತಿರುವ 9ನೇ ವರ್ಷದ ಚಂಗ್ರಾಂದಿ ಪತ್ತಾಲೋದಿ ಕಾರ್ಯಕ್ರಮದ ಎಂಟನೇ ದಿನದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.
ತಂದೆ- ತಾಯಿ, ಮಕ್ಕಳ ಜೊತೆ ಕೊಡವ ಭಾಷೆಯಲ್ಲಿ ಮಾತನಾಡಬೇಕು. ಕೊಡವ ಭಾಷೆಯ ಮೇಲೆ ಮಕ್ಕಳಿಗೆ ಅಭಿಮಾನ ಹುಟ್ಟುವಂತೆ ಮಾಡಬೇಕು. ಕೊಡವ ಭಾಷೆ ನಮ್ಮ ಮನಸ್ಸಿನ ಮಾತಾಗಬೇಕು, ನಮ್ಮ ಮಾತೃಭಾಷೆಯಾಗಬೇಕು. ಅಂದರೆ ಮಾತ್ರ ನಮ್ಮ ಭಾಷೆ ಸಂಸ್ಕೃತಿ ಉಳಿಯುತ್ತದೆ ಎಂಬುದನ್ನು ಅರಿತುಕೊಳ್ಳಬೇಕೆಂದು ಅಭಿಪ್ರಾಯಪಟ್ಟರು.ಎಲ್ಲ ಕೊಡವ ಸಮಾಜಗಳಲ್ಲಿ ಇದೇ ರೀತಿಯಲ್ಲಿ ಕಾರ್ಯಕ್ರಮವಾದರೆ ಅಳವಿ ನಂಚಿನಲ್ಲಿರುವ 56 ಭಾಷೆಯ ಜೊತೆಯಲ್ಲಿ ಒಂದಾಗಿರುವ ಕೊಡವ ಭಾಷೆ ಮತ್ತು ನಮ್ಮ ವಿಶೇಷ ಪಟ್ಟ ಸಂಸ್ಕೃತಿ ಉಳಿಯುತ್ತದೆ. ಇಂದು ಕೊಡವ ಸಾಹಿತ್ಯ ಲೋಕ ಸಿನಿಮಾ ಲೋಕ ಬೆಳವಣಿಗೆ ಕಾಣುತ್ತಿದೆ, ಆದರೆ ಭಾಷೆಯ ಬೆಳವಣಿಗೆ ಸಾಲದು ಇನ್ನಷ್ಟು ಬೆಳವಣಿಗೆಗೆ ಎಲ್ಲರೂ ಪ್ರಯತ್ನಿಸಬೇಕೆಂದು ಹೇಳಿದರು.
ಕೊಡವ ಸಮಾಜದ ಅಧ್ಯಕ್ಷ ಕೈಬುಲಿರ ಹರೀಶ್ ಅಪ್ಪಯ್ಯ ಅಧ್ಯಕ್ಷತೆ ವಹಿಸಿ, ನಮ್ಮ ವ್ಯವಹಾರಕ್ಕೆ ಇಂಗ್ಲಿಷ್ ಬೇಕಾಗುತ್ತದೆ. ಆದರೆ ಕೊಡವ ಭಾಷೆಗೆ ಪ್ರಾಮುಖ್ಯತೆ ನೀಡಬೇಕು. ನಮ್ಮ ಈ ಚಂಗ್ರಾಂದಿ ಪತ್ತಲೋದಿ ಕಾರ್ಯಕ್ರಮದಿಂದ ಇಲ್ಲಿಗೆ ಬರುವ ಪ್ರತಿಯೊಬ್ಬರ ಬಾಂಧವ್ಯ ಬೆಳೆಯುತ್ತದೆ ಎಂದರು.ಶ್ರೀಮಂಗಲ ಕೊಡವ ಸಮಾಜದ ಮೊಮ್ಮಕ್ಕಡ ಕೂಟದ ಅಧ್ಯಕ್ಷೆ ಪೆಮ್ಮಂಡ ಸಬಿತ ಕುಶಾಲಪ್ಪ, ಸಮಾಜದ ಸಾಂಸ್ಕೃತಿಕ ಸಮಿತಿ ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ, ಕೋಟ್ರಮಾಡ ಮಂಜು ಅಯ್ಯಪ್ಪ, ಕಾಳಿಮಾಡ ಪದ್ಮ ಬೆಳ್ಯಪ್ಪ ವೇದಿಕೆಯಲ್ಲಿ ಹಾಜರಿದ್ದರು. ಪೊಮ್ಮಕ್ಕಡ ಕೂಟದ ಸಾಂಸ್ಕೃತಿಕ ಕಾರ್ಯಕ್ರಮಲ್ಲಿ ಕಾಳಿಮಾಡ ಶೀಮಾ, ಕೋಟ್ರಮಾಡ ಶೈಮಾ, ಕೋಟ್ರಮಾಡ ಶೀತಲ್, ಕೋಟ್ರಮಾಡ ಶೃತಿ, ಮಚ್ಚಾಮಡ ಶ್ವೇತ, ಚೇದಂಡ ತಾನ್ಸಿ, ಬಾಚಮಾಡ ರಜಿತ, ಅಜ್ಜಮಾಡ ಪವಿತ, ಚಟ್ಟಂಡ ಲತಾ ಪಾಲ್ಗೊಂಡಿದ್ದರು.
ಅಜ್ಜಮಾಡ ಸಾವಿತ್ರಿ ಪ್ರಾರ್ಥಿಸಿದರು. ಬೊಳ್ಳೇರ ಪೊನ್ನಪ್ಪ ಸ್ವಾಗತಿಸಿದರು. ಸಮಾಜದ ಜಂಟಿ ಕಾರ್ಯದರ್ಶಿ ಆಂಡಮಾಡ ಸತೀಶ್ ವಿಶ್ವನಾಥ್ ವಂದಿಸಿದರು.;Resize=(128,128))
;Resize=(128,128))