ಸಾರಾಂಶ
ಈ ಹಿಂದೆ ಪಿಡಬ್ಲ್ಯುಡಿ ಸಚಿವನಿದ್ದಾಗ ಸಾಕಷ್ಟು ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇನೆ. ಕೊರೋನಾ ಸಂದರ್ಭದಲ್ಲಿ ಜನತೆಯ ಆರೋಗ್ಯದ ಕಡೆ ಗಮನ ಹರಿಸಿದ್ದೇನೆ ಎಂದು ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.
ನರಗುಂದ: ಕ್ಷೇತ್ರಕ್ಕಾಗಿ ಪಕ್ಷಭೇದ ಮರೆತು ಎಲ್ಲರ ಜತೆ ಸಂಬಂಧವನ್ನು ಇಟ್ಟುಕೊಂಡಾಗ ಅಭಿವೃದ್ಧಿ ಸಾಧ್ಯ. ಗ್ರಾಮೀಣ ರಸ್ತೆಗಳು, ಸೇತುವೆಗಳು ನಿರ್ಮಾಣಗೊಂಡರೆ, ಕೃಷಿ ಚಟುವಟಿಕೆಗಳಿಗೆ ಸಹಕಾರ ನೀಡಿದಂತಾಗುತ್ತದೆ ಎಂದು ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.
ಸೋಮವಾರ ಲೋಕೋಪಯೋಗಿ ಇಲಾಖೆ ಅಡಿ ತಾಲೂಕಿನ ಗಂಗಾಪುರ ಗ್ರಾಮದ ಹತ್ತಿರದ ಕುಸುಗಲ್ಲ- ಶಿರೋಳ ರಾಜ್ಯ ಹೆದ್ದಾರಿ 264ರಲ್ಲಿ ₹3 ಕೋಟಿ ವೆಚ್ಚದ ಸೇತುವೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ನಂತರ ಮಾತನಾಡಿ, ಕ್ಷೇತ್ರದ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ಧಿಯೆಡೆ ಗಮನ ಇರಬೇಕೆ ಹೊರತು ಬರೀ ಗುತ್ತಿಗೆದಾರರ ಕಡೆ ಲಕ್ಷ್ಯ ಇರಬಾರದು. ಇದರಿಂದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ವಿರೋಧ ಪಕ್ಷದ ನಾಯಕರಿಗೆ ಪರೋಕ್ಷವಾಗಿ ಹೇಳಿದರು.ಈ ಹಿಂದೆ ಪಿಡಬ್ಲ್ಯುಡಿ ಸಚಿವನಿದ್ದಾಗ ಸಾಕಷ್ಟು ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇನೆ. ಕೊರೋನಾ ಸಂದರ್ಭದಲ್ಲಿ ಜನತೆಯ ಆರೋಗ್ಯದ ಕಡೆ ಗಮನ ಹರಿಸಿದ್ದೇನೆ. ಕ್ಷೇತ್ರದ ಅಭಿವೃದ್ಧಿ ಇನ್ನೂ ಸಾಕಷ್ಟು ಆಗಬೇಕಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಒಳ್ಳೆಯ ಆಡಳಿತಗಾರ. ಅವರನ್ನು ಭೇಟಿಯಾಗಿ ಅನುದಾನ ತರುವಲ್ಲಿ ಪ್ರಯತ್ನಿಸುತ್ತೇನೆ. ರೈತರ ಒತ್ತಾಯದ ಮೇರೆಗೆ ಹಿಂಗಾರು ಬೆಳೆಗೆ ನೀರೊದಗಿಸಲು ಗಂಗಾಪುರ ಹತ್ತಿರದ ಜಾಕ್‌ವೆಲ್ ಪ್ರಾರಂಭಿಸುವಂತೆ ನೀರಾವರಿ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಬಾಬುಗೌಡ ತಿಮ್ಮನಗೌಡ್ರ, ಬಸವಣ್ಣೆಪ್ಪ ಸುಂಕದ, ಶಂಕರಪ್ಪ ಹುಲ್ಯಾಳ, ಪ್ರಕಾಶಗೌಡ ತಿರಕನಗೌಡ್ರ, ಬಿ.ಬಿ. ಐನಾಪೂರ, ಮಹಾಂತೇಶ ಜಾಲವಾಡಗಿ, ಚಂದ್ರು ದಂಡಿನ, ಭೀಮಪ್ಪ ಹಾದಿಮನಿ, ಶಿವಾನಂದ ಮುತ್ತವಾಡ, ಬಸನಗೌಡ ವೀರನಗೌಡ್ರ, ಲಾಲಸಾಬ ಅರಗಂಜಿ, ಹನುಮಂತ ಹದಗಲ್ಲ, ಎಚ್.ಎಸ್. ಮಲ್ಲಾಪೂರ, ಬಸನಗೌಡ ಪಾಟೀಲ, ಗುತ್ತಿಗೆದಾರ ಪ್ರತೀಶ ಶೆಟ್ಟಿ, ಭರತ ಕೆ. ಇತರರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))