ಧರ್ಮ ಸಮನ್ವಯಗೊಂಡರೆ ದೇಶದಲ್ಲಿ ಶಾಂತಿ,ಸಮಾನತೆ

| Published : Mar 07 2024, 01:47 AM IST

ಧರ್ಮ ಸಮನ್ವಯಗೊಂಡರೆ ದೇಶದಲ್ಲಿ ಶಾಂತಿ,ಸಮಾನತೆ
Share this Article
  • FB
  • TW
  • Linkdin
  • Email

ಸಾರಾಂಶ

ಮುದ್ದೇಬಿಹಾಳ: ಧರ್ಮ ಸಮನ್ವಯಗೊಂಡಾಗ ದೇಶದಲ್ಲಿ ಸಮಾನತೆ ಹಾಗೂ ಶಾಂತಿ ಮಾನವೀಯ ಮೌಲ್ಯಗಳು ಉಳಿದುಕೊಳ್ಳುತ್ತವೆ. ಒಂದು ವೇಳೆ ಧರ್ಮದಲ್ಲಿ ಸಮನ್ವಯತೆ ಬರದಿದ್ದರೆ ಲೋಕವು ನರಕದಂತಾಗುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಧರ್ಮ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಮತ್ತು ಗುರುವನ್ನು ಗೌರವಿಸುವ ಮೂಲಕ ನೈಜ ಮನುಷ್ಯರಾಗಿ ಬಾಳಬೇಕೆಂದು ಶಿರಹಟ್ಟಿ ಭಾವೈಕ್ಯತಾ ಮಹಾಸಂಸ್ಥಾನಮಠದ ಶ್ರೀ ಪಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಧರ್ಮ ಸಮನ್ವಯಗೊಂಡಾಗ ದೇಶದಲ್ಲಿ ಸಮಾನತೆ ಹಾಗೂ ಶಾಂತಿ ಮಾನವೀಯ ಮೌಲ್ಯಗಳು ಉಳಿದುಕೊಳ್ಳುತ್ತವೆ. ಒಂದು ವೇಳೆ ಧರ್ಮದಲ್ಲಿ ಸಮನ್ವಯತೆ ಬರದಿದ್ದರೆ ಲೋಕವು ನರಕದಂತಾಗುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಧರ್ಮ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಮತ್ತು ಗುರುವನ್ನು ಗೌರವಿಸುವ ಮೂಲಕ ನೈಜ ಮನುಷ್ಯರಾಗಿ ಬಾಳಬೇಕೆಂದು ಶಿರಹಟ್ಟಿ ಭಾವೈಕ್ಯತಾ ಮಹಾಸಂಸ್ಥಾನಮಠದ ಶ್ರೀ ಪಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ಸುಕ್ಷೇತ್ರ ಕುಂಟೋಜಿ ಸಂಸ್ಥಾನ ಹಿರೇಮಠದ ಶ್ರೀ ಚನ್ನವೀರ ದೇವರ ಗುರು ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ನಡೆದ ಧರ್ಮ ಸಮನ್ವಯ ಸಮಾರಂಭ ಹಾಗೂ ಶರಣಬಸವೇಶ್ವರ ಪುರಾಣ ಮಂಗಲೋತ್ಸವ ಕಾರ್ಯದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕುಂಟೋಜಿ ಗ್ರಾಮ ಪುಣ್ಯ ಕ್ಷೇತ್ರ. ಹಿರೇಮಠದಂತ ಮಠದ ಪರಂಪರೆಯು ಇತಿಹಾಸವನ್ನು ಹೊಂದಿದ್ದು, ಮಾತ್ರವಲ್ಲದೇ ಅಪಾರ ಪ್ರಮಾಣದಲ್ಲಿ ಭಕ್ತಗಣವನ್ನು ಹೊಂದಿರುವ ಏಕೈಕ ಮಠ ಇದಾಗಿದೆ. ಸಧ್ಯ ಮಠದ ಬಹುತೇಕ ಎಲ್ಲ ಭಕ್ತರ ಆಶಯದಂತೆ ಹಿರೇಮಠದ ಶ್ರೀ ಚನ್ನವೀರ ದೇವರ ಗುರು ಪಟ್ಟಾಧಿಕಾರ ಮಹೋತ್ಸವ ನಡೆಯುತ್ತಿರುವುದು ಸಂತಸವಾಗಿದೆ. ಇದರಿಂದ ಕುಂಟೋಜಿ ಗ್ರಾಮಕ್ಕೆ ಒಳ್ಳೆಯ ಹೆಸರು ಬರಲಿದ್ದು, ಕೀರ್ತಿ ಘನತೆ ಹೆಚ್ಚಾಗಿದೆ. ಚನ್ನವೀರ ದೇವರು ಬಾಲ್ಯದಿಂದಲೂ ಸಾಕಷ್ಟು ಏರು ಪೇರುಗಳನ್ನು ಅನುಭವಿಸಿದ್ದಲ್ಲದೇ, ಭಕ್ತರ ಹೃದಯದಲ್ಲಿ ನೆಲಿಸಿದ್ದಾರೆ. ಈ ನಿಟ್ಟಿನಲ್ಲಿ ಅವರ ಗುರು ಪಟ್ಟಾಧಿಕಾರ ಕಾರ್ಯಕ್ರಮ ಕೊನೆ ದಿನದವರೆಗೂ ಗ್ರಾಮದ ಎಲ್ಲ ಜನರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.ಯರನಾಳ ವಿರಕ್ತಮಠದ ಸಂಗನಬಸವ ಸ್ವಾಮೀಜಿ ಮಾತನಾಡಿ, ಯಾವ ಸಂತ ತನ್ನ ಸಂಸಾರವನ್ನು ತ್ಯಾಗಮಾಡಿ ಲೋಕ ಕಲ್ಯಾಣಕ್ಕಾಗಿ ಸಮಾಜದ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಲ್ಲುವ ಮೂಲಕ ಸಮಸಮಾಜ ಕಟ್ಟುವಲ್ಲಿ ಶ್ರಮಿಸುತ್ತಾನೋ ಅಂತಹವನು ನಿಜವಾದ ಮಠಾಧೀಶರು, ಶರಣರಾಗಿ ಉಳಿಯಲು ಸಾಧ್ಯ. ಈ ಬಗ್ಗೆ ಹನ್ನೆರಡನೇ ಶತಮಾನದ ಎಲ್ಲ ಶರಣು ಹೇಳಿದ್ದಾರೆ. ಸನ್ಯಾಸಿಗಳು ಸಂಸಾರಿಗಳು ಹೇಗಿರಬೇಕು ಎಂದು ತಿಳಿಸಿ ಕೊಟ್ಟವರು ಹಾನಗಲ್ಲ ಕುಮಾರಸ್ವಾಮಿಗಳು ಕಲಿಸಿಕೊಟ್ಟಿದ್ದಾರೆ ಎಂದರು.ಜೇವರ್ಗಿ ಸೊನ್ನದ ದಾಸೋಹ ಮಠದ ಶಿವಾನಂದ ಶ್ರೀ, ಬೆಂಗಳೂರಿನ ಭೂತಿಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಶ್ರೀ, ಗಡಿಗೌಡಗಾಂವ ಹಾವಗಿ ಲಿಂಗೇಶ್ವರ ಮಠದ ಶಾಣಂತಲಿಂಗ ಸ್ವಾಮೀಜಿ, ಇಂಗಳೇಶ್ವರ ವಚನ ಶಿಲಾಮಂಟಪದ ವಚನ್ನಬಸವಶ್ರೀ, ಸಂತೇಕೆಲ್ಲೂರು ಗುರುಬಸವ ಶ್ರೀ, ಗದಗ ಕಪ್ಪತ್ತಗುಡ್ಡದ ನಂದಿವೇರಿಮಠದ ಶಿವಕುಮಾರ ಶ್ರೀ, ಬೆಳಗಾವಿ ಜಿಲ್ಲೆಯ ಗಚ್ಚಿನಮಠದ ಹಿರೇಮಠದ ಚನ್ನಮಲ್ಲ ಶ್ರೀ, ಯಕ್ಕುಂಡಿ ಕುಮಾರೇಶ್ವರ ಸಂಸ್ಥಾನ ವಿರಕ್ತಮಠದ ಪಂಚಾಕ್ಷರ ಶ್ರೀ, ಸವಣೂರದ ಚನ್ನಬಸವ ಶ್ರೀ, ಉಪ್ಪಿನ ಬೆಟಗೇರಿಯ ಕುಮಾರ ವಿರೂಪಾಕ್ಷ ಶ್ರೀ, ಕಮತಗಿ ಹುಚ್ಚೇಶ್ವರ ಸ್ವಾಮೀಜಿ, ಮಸಬಿನಾಳದ ಸಿದ್ಧರಾಮ ಶ್ರೀ, ಕನಕಗಿರಿ ಚನ್ನಮಲ್ಲ ಶ್ರೀ, ಅಮೀನಗಡದ ಶಂಕರರಾಜೇಂದ್ರ ಶ್ರೀ, ಗುಳೇದಗುಡ್ಡದ ಒಪ್ಪತೇಶ್ವರ ಸ್ವಾಮೀಜಿ, ಹಾಗೂ ಕಾಶಿನಾಥ ಸ್ವಾಮೀಜಿ, ಶಾಸಕ ಹಾಗೂ ಕರ್ನಾಟಕ ಸರಕಾರದ ಸಾಭೂನ ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ), ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಸೇರಿದಂತೆ ಅನೇಕ ಗಣ್ಯರು, ಸಾಹಿತಿಗಳು, ಮಹಿಳೆಯರು ಇದ್ದರು.ಕೋಟ್...ಕರ್ನಾಟಕದಲ್ಲಿ ವೀರಶೈವ ಲಿಂಗಾಯತ ಸಮಾಜ ಬೆಳೆಯಲು ಮತ್ತು ಗೌರವ ಹೊಂದಿದೆ ಎಂದರೆ ಶಿವಯೋಗ ಮಂದಿರದಿಂದ ಅಂತಹ ವ್ಯವಸ್ಥೆಯಲ್ಲಿ ಬೆಳೆದು ನಿಂತವರು ಕುಂಟೋಜಿ ಹಿರೇಮಠದ ಶ್ರೀ ಚನ್ನವೀರ ದೇವರು. ಸಧ್ಯ ಅವರ ಪಟ್ಟಾಧಿಕಾರ ನಡೆಯುತ್ತಿರುವುದು ಎಲ್ಲೆಡೆ ಸಂಭ್ರಮ ಮನೆ ಮಾಡಿದೆ.ಸಂಗನಬಸವ ಸ್ವಾಮೀಜಿ, ಯರನಾಳ ವಿರಕ್ತಮಠ.