ಸಾರಾಂಶ
ರೈತರು ಈ ಯಂತ್ರದಿಂದ ನಾಟಿ ಮಾಡುವುದರಿಂದ ಉತ್ತಮ ಇಳುವರಿ ಹಾಗೂ ಬೆಳೆಗೆ ಬರಬಹುದಾದಂತಹ ರೋಗ ತಡೆಗಟ್ಟುವ ಬಗ್ಗೆ ಮಾಹಿತಿ ನೀಡಿದರು
ಕನ್ನಡಪ್ರಭ ವಾರ್ತೆ ಚನ್ನಗಿರಿ
ಯಂತ್ರದ ಮೂಲಕ ಭತ್ತದ ಬೆಳೆ ನಾಟಿ ಮಾಡುವುದರಿಂದ ಸಮಯ ಉಳಿತಾಯ ಜೊತೆಗೆ ಕಡಿಮೆ ವೆಚ್ಚದಲ್ಲಿ ನಾಟಿ ಕೆಲಸ ಮುಗಿಸಲು ಸಹಾಯಕವಾಗಲಿದೆ ಎಂದು ಇಲ್ಲಿನ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅರುಣ್ ಕುಮಾರ್ ತಿಳಿಸಿದರು.ಗುರುವಾರ ತಾಲೂಕಿನ ತ್ಯಾವಣಿಗೆ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ ಕಡಿಮೆ ವೆಚ್ಚದಲ್ಲಿ ಯಂತ್ರಶ್ರೀ ಮೂಲಕ ಭತ್ತ ನಾಟಿ ಮಾಡುವ ಯಂತ್ರಕ್ಕೆ ಚಾಲನೆ ನೀಡಿ ಮಾತನಾಡಿ, ರೈತರು ಈ ಯಂತ್ರದಿಂದ ನಾಟಿ ಮಾಡುವುದರಿಂದ ಉತ್ತಮ ಇಳುವರಿ ಹಾಗೂ ಬೆಳೆಗೆ ಬರಬಹುದಾದಂತಹ ರೋಗ ತಡೆಗಟ್ಟುವ ಬಗ್ಗೆ ಮಾಹಿತಿ ನೀಡಿದರು. ಸಂತೆಬೆನ್ನೂರು ಯೋಜನಾಧಿಕಾರಿ ಎ.ಜಿ.ಪ್ರವೀಣ್ ಮಾತನಾಡಿ, ಸರ್ಕಾರದ ಸಹಭಾಗಿತ್ವದಲ್ಲಿ ಕೃಷಿ ಯಂತ್ರಧಾರೆ ಮೂಲಕ ರೈತರುಗಳಿಗೆ ಕಡಿಮೆ ಬಾಡಿಗೆ ದರದಲ್ಲಿ ಯಂತ್ರ ಉಳುಮೆ ಮಾಡಲು ನೀಡುತ್ತಿದ್ದು, ಇದರಿಂದ ರೈತರಿಗೆ ಅನುಕೂಲ ಹಾಗೂ ಕೂಲಿ ಆಳು ಸಿಗಲಿಲ್ಲ ಎಂಬ ಕೊರತೆ ನೀಗಲಿದೆ ಎಂದರು. ಭತ್ತ ನಾಟಿಯಿಂದ ಹಿಡಿದು ಕಟಾವಿನ ವರೆಗೆ ಯಾಂತ್ರಿಕೃತ ಇರುವುದರಿಂದ ಖರ್ಚು ಕಡಿಮೆಯಾಗಿ ಆದಾಯ ಹೆಚ್ಚಿಸುವ ಉದ್ದೇಶದಿಂದ ಯಂತ್ರಶ್ರೀ ಕಾರ್ಯಕ್ರಮ ಅನುಷ್ಠಾನ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷರಾದ ಕರಿಬಸಪ್ಪ, ಒಕ್ಕೂಟದ ಅಧ್ಯಕ್ಷ ಉಮಾಪತಿ, ರುದ್ರೇಶ್, ಮೇಲ್ವಿಚಾರಕ ರಾಜೇಂದ್ರ, ಕೃಷಿ ಮೇಲ್ವಿಚಾರಕ ಅಜ್ಜಪ್ಪ, ಮನೋಜ್, ದಿನೇಶ್ ಸೇರಿ ರೈತರು ಇದ್ದರು.