ವಿದ್ಯಾರ್ಥಿಗಳಿಗೆ ಗುರು, ಉಜ್ವಲ ಭವಿಷ್ಯದ ಗುರಿ ಇದ್ದರೆ ಸಾಧನೆ: ಸಂದೇಶ

| Published : Sep 06 2024, 01:07 AM IST

ಸಾರಾಂಶ

ವಿದ್ಯಾ ಕಲಿಸಿದ ಗುರುಗಳನ್ನು ಎಂದಿಗೂ ಮರೆಯಬಾರದು. ಇವತ್ತಿನ ಪ್ರಾಥಮಿಕ ಶಿಕ್ಷಣದಿಂದಲೇ ನಿಮ್ಮ ಮುಂದಿನ ಭವಿಷ್ಯದ ಬುನಾದಿಗಳು ಹಾಕಬಹುದು. ಶಿಕ್ಷಕರ ಮಾರ್ಗದರ್ಶನ ನಿಮಗೆ ಅಗತ್ಯವಿದೆ. ಇಂತಹ ಸಮಯದಲ್ಲಿ ಶಿಕ್ಷಕರನ್ನು ಗೌರವಿಸಿ ಅಭಿನಂಧಿಸುವುದು ನಮ್ಮ ಕರ್ತವ್ಯವಾಗಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಗುರು, ಮಕ್ಕಳ ಉಜ್ವಲ ಭವಿಷ್ಯದ ಗುರಿ ಇದ್ದರೆ ಎಲ್ಲವನ್ನು ಸಾಧಿಸಬಹುದು ಎಂದು ತಾಪಂ ಮಾಜಿ ಅಧ್ಯಕ್ಷ ಸಂದೇಶ ಹೇಳಿದರು.

ತಾಲೂಕಿನ ಬಾಬುರಾಯನಕೊಪ್ಪಲು ಗ್ರಾಮದ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆಸಲ್ಲಿಸಿದ ಶಿಕ್ಷಕರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾ ಕಲಿಸಿದ ಗುರುಗಳನ್ನು ಎಂದಿಗೂ ಮರೆಯಬಾರದು. ಇವತ್ತಿನ ಪ್ರಾಥಮಿಕ ಶಿಕ್ಷಣದಿಂದಲೇ ನಿಮ್ಮ ಮುಂದಿನ ಭವಿಷ್ಯದ ಬುನಾದಿಗಳು ಹಾಕಬಹುದು. ಶಿಕ್ಷಕರ ಮಾರ್ಗದರ್ಶನ ನಿಮಗೆ ಅಗತ್ಯವಿದೆ. ಇಂತಹ ಸಮಯದಲ್ಲಿ ಶಿಕ್ಷಕರನ್ನು ಗೌರವಿಸಿ ಅಭಿನಂಧಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.

ತಾಲೂಕು ಕಸಾಪ ನೂತನ ಅಧ್ಯಕ್ಷ ಎಂ.ಬಿ.ಕುಮಾರ್ ಮಾತನಾಡಿದರು. ಶಾಲೆ ಮುಖ್ಯ ಶಿಕ್ಷಕಿ ಹೇಮಲತಾ ಅಧ್ಯಕ್ಷತೆ ವಹಿಸಿದ್ದರು.

ಈ ವೇಳೆ ತಾಲೂಕಿನ ಅರಕೆರೆ ಪ್ರೌಢಶಾಲೆ ಪ್ರಾಂಶುಪಾಲ ಹರೀಶ್, ಹುರುಳಿಕ್ಯಾತನಹಳ್ಳಿ ಪ್ರೌಢಶಾಲೆ ಶಿಕ್ಷಕಿ ಮೇರಿ, ಕೆ.ಶೆಟ್ಟಹಳ್ಳಿ ಪ್ರೌಢಶಾಲೆ ನೆಲಮನೆ ಕೃಷ್ಣಪ್ಪ, ಬಾಬುರಾಯನ ಕೊಪ್ಪಲು ಶಾಲೆ ಮುಖ್ಯ ಶಿಕ್ಷಕಿ ಹೇಮಲತಾ ಹರಿಯಾಳ, ಪಾಲಹಳ್ಳಿ ವಾಹಿನಿ ಶಾಲೆ ಶಿಕ್ಷಕ ಕರಿಯಪ್ಪ ಲೇಪಗಿರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಸುಬ್ಬಣ್ಣ, ಕಸಾಪ ಉಪಾಧ್ಯಕ್ಷ ಗಂಜಾಂ ಮಂಜು, ಅಖಿಲಾ ಕರ್ನಾಕಟ ಒಕ್ಕಲಿಗ ವೇದಿಕೆ ಅಧ್ಯಕ್ಷ ದೇವರಾಜ್‌ಗೌಡಹಳ್ಳಿ, ಪ್ರಧಾನ ಕಾರ್ಯದರ್ಶಿ ಸಿ. ಸ್ವಾಮಿಗೌಡ, ಖಜಾಂಚಿ ಕೆ.ಬಿ.ಬಸವರಾಜು, ಕೆ.ಶೆಟ್ಟಹಳ್ಳಿ ಹೋಬಳಿಯ ಕಸಾಪ ಅಧ್ಯಕ್ಷ ಕೆ.ಜೆ ಲೋಕೇಶ್, ಕೂಡಲಕುಪ್ಪೆ ಸೋಮಶೇಖರ್, ರಾಮ್ ಪ್ರಸಾದ್, ಪೊನ್ನು ಸ್ವಾಮಿ ಸೇರಿದಂತೆ ಶಿಕ್ಷಕರು ಹಾಗೂ ಮಕ್ಕಳು ಇದ್ದರು.