ಕಲೆ ಉಳಿದರೆ ಕಲಾವಿದ ಉಳಿಯುತ್ತಾನೆ

| Published : Dec 27 2023, 01:30 AM IST / Updated: Dec 27 2023, 01:31 AM IST

ಸಾರಾಂಶ

ಕಲೆ ಯಾರ ಸ್ವತ್ತು ಅಲ್ಲ. ಅದು ಖರೀದಿ ವಸ್ತು ಅಲ್ಲ. ಕಲೆ ಉಳಿದರೆ ಕಲಾವಿದ ಉಳಿಯುತ್ತಾನೆ: ಧರೇಪ್ಪ ಸಾಂಗ್ಲಿಕರ

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಕಲೆ ಯಾರ ಸ್ವತ್ತು ಅಲ್ಲ. ಅದು ಖರೀದಿ ವಸ್ತು ಅಲ್ಲ. ಕಲೆ ಉಳಿದರೆ ಕಲಾವಿದ ಉಳಿಯುತ್ತಾನೆ ಎಂದು ಜಿಲ್ಲಾ ಪಂಚಮಸಾಲಿ ಸಂಘದ ಅಧ್ಯಕ್ಷ ರನ್ನ ಬೆಳಗಲಿಯ ಧರೇಪ್ಪ ಸಾಂಗ್ಲಿಕರ ಹೇಳಿದರು.

ಸ್ಥಳೀಯ ಹಿರಿಯ ಪಾರಿಜಾತ ಕಲಾವಿದೆ ಕೌಜಲಗಿ ನಿಂಗಮ್ಮ ಭವನದಲ್ಲಿ ನಡೆದ ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು, ತಾಲೂಕು ಘಟಕ ರಬಕವಿ ಬನಹಟ್ಟಿ ಹಾಗೂ ವಲಯ ಘಟಕ ಮಹಾಲಿಂಗಪುರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಾಗಲಕೋಟೆ ಇವರ ಸಹಯೋಗದಲ್ಲಿ ನಡೆದ ಸುವರ್ಣ ಕರ್ನಾಟಕ ಜಾನಪದ ಸಂಭ್ರಮ ಹಾಗೂ ಸಾಧಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಮಾತನಾಡಿ ಅವರು, ನಗರದಲ್ಲಿ ಎಷ್ಟೋ ಕಲಾವಿದರು ಇದ್ದಾರೆ. ಆದರೆ, ಕಾರ್ಯಕ್ರಮದಲ್ಲಿ ಬೆರಳಿನಿಕೆಯಷ್ಟು ಕಲಾವಿದರು ಭಾಗವಹಿಸಿದು ದುಃಖ ತರಿಸಿದೆ. ಇಂತಹ ಸಮ್ಮೇಳನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಇದು ಕಲಾವಿದರ ಸಮ್ಮೇಳನ ಇಂತಹ ಸಮ್ಮೇಳನದಲ್ಲಿ ಹೆಚ್ಚು ಜನ ಪಾಲ್ಗೊಳ್ಳುವುದರ ಮೂಲಕ ಸಮ್ಮೇಳನ ಯಶಸ್ವಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ನಂತರ ಮಾತನಾಡಿದ ಪುರಸಭೆ ಅಧಿಕಾರಿ ಸಿ.ಎಸ್.ಮಠಪತಿ, ನಗರದಲ್ಲಿ ಕೌಜಲಗಿ ನಿಂಗಮ್ಮ ಭವನವನ್ನು ಕಲಾವಿದರಿಗೋಸ್ಕರ ಸರ್ಕಾರ ಸುಮಾರು ₹4.5 ಕೋಟಿ ವೆಚ್ಚದಲ್ಲಿ ನಿರ್ಮಿಸಿದೆ. ಇದರ ಸದುಪಯೋಗ ಆಗಬೇಕು. ನಿರಂತರ ಕಲಾ ಚಟುವಟಿಕೆಗಳು ನಡೆಯುತ್ತಿರಬೇಕು. ಅದನ್ನು ಕಲಾವಿದರು ಬಳಸಿಕೊಳ್ಳಬೇಕು. ಇಂತಹ ಭವನ ನಿರ್ಮಾಣವಾಗಿದ್ದು ನಮ್ಮೆಲ್ಲರ ಹೆಮ್ಮೆ. ನಿರಂತರ ಇಂತಹ ಕಾರ್ಯಕ್ರಮಗಳು ನಡೆಯುವಂತಾಗಬೇಕು. ಆಗಲೇ ಇದನ್ನು ನಿರ್ಮಿಸಿದ್ದಕ್ಕೂ ಸ್ವಾರ್ಥಕವಾಗುತ್ತದೆ ಎಂದು ಹೇಳಿದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 24 ಸಾಧಕರಿಗೆ ಸಾಧಕ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಹಾದೇವ ಕದ್ದಿಮನಿ ಪ್ರಶಸ್ತಿ ಪುರಸ್ಕೃತರ ಪರವಾಗಿ ರವಿ ಜಮಖಂಡಿ ಮಾತನಾಡಿದರು .ಜಯರಾಮ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಲಿಂಗ ಟಿರ್ಕಿ, ಅಣ್ಣಾಜಿ ಫಡತಾರೆ, ಬಸವರಾಜ ರಾಯರ, ಮೀರಾ ತಟಗಾರ, ನಿಜಾಮ ಅಲ್ಲಾಖಾನ, ಮಲ್ಲಪ್ಪಾ ಮುದಕಪ್ಪಾಗೋಳ, ಮೆಹಬೂಬ ಸನದಿ, ಸಂಗಪ್ಪ ಹಲ್ಲಿ, ಜಿ.ಎಸ್.ಗೊಂಬಿ, ಬಸವರಾಜ ಮೇಟಿ, ರಮೇಶ ಸಬಕಾಳೆ, ಚಿದಾನಂದ ಸೊಲ್ಲಾಪುರ, ಶ್ರೀಶೈಲ ಭೂಯ್ಯಾರ, ಮಹೇಶ ಆರಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮುಖಂಡರಾದ ಕಲ್ಲಪ್ಪ ಚಿಂಚಲಿ, ಭೀಮಪ್ಪ ಗಜಾಗೋಳ, ಗುರಪ್ಪ ಪಂಕಿ, ರಾಜು ಗೆದ್ದೇಪ್ಪನವರ, ಡಾ ಗಂಗಾಧರ ಮಗದುಮ್, ಶಂಕರ ನೀಲಾರಿ, ಭೀಮಶಿ ನೇಗಿನಾಳ, ಸಿ.ಐ.ಕೊಳಕಿ, ಬಸವರಾಜ ಪರೀಟ, ವಿನೋದ ಸಿಂಪಿ, ರಾಜು ಗಲಗಲಿ, ಪಂಡಿತ ಬಡಿಗೇರ, ಚನ್ನಪ್ಪ ಹುನ್ನೂರ, ಹಣಮಂತ ಮೇರಾಪಟ್ಟಿ, ಮೈತ್ರಾದೇವಿ ಕದ್ದಿಮನಿ, ರಾಜೇಶ್ವರಿ ಉಮದಿ, ಸುಹಾಸಿನಿ ಕದ್ದಿಮನಿ, ಸೀಮಾ ಹಲ್ಲಿ ಸೇರಿ ಹಲವರು ಇದ್ದರು.ಲಕ್ಷ್ಮಣ ಕಿಶೋರ ನಿರೂಪಿಸಿ, ವಂದಿಸಿದರು.

-------

ಕೋಟ್‌

ಕಲೆ ಉಳಿಸಿ, ಬೆಳೆಸುವ ಕೆಲಸ ನಿರಂತವಾಗಿ ನಡೆಯಬೇಕು. ಅದಕ್ಕಾಗಿ ಮೇಲಿಂದ ಮೇಲೆ ಇಂತಹ ಸಮ್ಮೇಳನಗಳು ನಡೆಯಬೇಕು. ಆಗಲೇ ಅದಕ್ಕಾಗಿ ಸರ್ಕಾರ ಪ್ರೋತ್ಸಾಹ ನೀಡಬೇಕು. ಕಲೆಯನ್ನು ಯಾರು ಪ್ರೀತಿಸುತ್ತಾರೋ ಅವರನ್ನು ಕಲೆ ಕೈ ಹಿಡಿದು ಪೋಷಿಸುತ್ತದೆ. ಕಲೆಗಾಗಿ ಜೀವನ ಹೊರತು ಕಲೆಯೇ ಜೀವನ ಅಲ್ಲ .

-ಧರೇಪ್ಪ ಸಾಂಗ್ಲಿಕರ, ಜಿಲ್ಲಾ ಪಂಚಮಸಾಲಿ ಸಂಘದ ಅಧ್ಯಕ್ಷ, ರನ್ನ ಬೆಳಗಲಿ

--

ಫೋಟೊ: 26ಎಂಎಲ್‌ಪಿ1