ಸಾರಾಂಶ
ದೇಶಕ್ಕೆ ಅನ್ನ ನೀಡುವ ರೈತ ಇಂದು ಸಂಕಷ್ಟದಲ್ಲಿದ್ದಾನೆ. ಬೆಳೆಗಳನ್ನು ಮಾರ್ಕೆಟ್ ಮುಖಾಂತರ ಬೆಂಬಲ ಬೆಲೆಗೆ ಮಾರಿದಾಗ ಮಾತ್ರ ರೈತ ಆರ್ಥಿಕ ಸಬಲತೆ ಹೊಂದಲು ಸಹಕಾರಿಯಾಗುತ್ತದೆ ಎಂದು ಸಹಾಯಕ ತೋಟಗಾರಿಕೆ ಅಧಿಕಾರಿ ರಮೇಶ್ ಇಪ್ಪಿಕೊಪ್ಪ ಹೇಳಿದ್ದಾರೆ.
- ಸಾಸ್ವೇಹಳ್ಳಿಯಲ್ಲಿ ಬಲರಾಮ ರೈತ ಉತ್ಪಾದಕರ ಕಂಪನಿ ಸಭೆ - - -
ಕನ್ನಡಪ್ರಭ ವಾರ್ತೆ ಹೊನ್ನಾಳಿ
ದೇಶಕ್ಕೆ ಅನ್ನ ನೀಡುವ ರೈತ ಇಂದು ಸಂಕಷ್ಟದಲ್ಲಿದ್ದಾನೆ. ಬೆಳೆಗಳನ್ನು ಮಾರ್ಕೆಟ್ ಮುಖಾಂತರ ಬೆಂಬಲ ಬೆಲೆಗೆ ಮಾರಿದಾಗ ಮಾತ್ರ ರೈತ ಆರ್ಥಿಕ ಸಬಲತೆ ಹೊಂದಲು ಸಹಕಾರಿಯಾಗುತ್ತದೆ ಎಂದು ಸಹಾಯಕ ತೋಟಗಾರಿಕೆ ಅಧಿಕಾರಿ ರಮೇಶ್ ಇಪ್ಪಿಕೊಪ್ಪ ಹೇಳಿದರು.ತಾಲೂಕಿನ ಸಾಸ್ವೇಹಳ್ಳಿಯಲ್ಲಿ ನಡೆದ ಬಲರಾಮ ರೈತ ಉತ್ಪಾದಕರ ಕಂಪನಿ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ರೈತರು ಜಮೀನುಗಳಲ್ಲಿ ಅಕ್ಕಡಿ ಸಾಲುಗಳನ್ನು ಬೆಳೆಯಬೇಕು. ಅಡಕೆ ತೋಟದಲ್ಲೂ ಮಿಶ್ರ ಬೆಳೆಗಳಾಗಿ ಬಾಳೆ, ಏಲಕ್ಕಿ. ಮೆಣಸು. ಬೆಳೆದು ಆರ್ಥಿಕವಾಗಿ ಲಾಭ ಪಡೆಯಬಹುದು. ಇಲಾಖೆ ಮುಖಾಂತರ ತಮಗೆ ಮಾಹಿತಿಗಳು ಬೇಕಾಗಿದ್ದಲ್ಲಿ ಯಾವಾಗ ಬೇಕಾದರೂ ರೈತರು ನನಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು.ಹೊನ್ನಾಳಿಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಜಿ.ಪಿ.ರೇಖಾ ಮಾತನಾಡಿ, ರೈತರು ಸಿರಿಧಾನ್ಯಗಳನ್ನು ಬೆಳೇದು ತಮ್ಮದೇ ಬ್ರಾಂಡುಗಳ ಮೂಲಕ ಮಾರಾಟ ಮಾಡಬೇಕು. ಭೂಮಿ ಫಲವತ್ತಾಗಿ ಮಾಡಲು ಹಸಿರೆಲೆ ಗೊಬ್ಬರಗಳಾದ ಡಯಾಂಚ, ಸೆಣಬು ಬೆಳೆದು, ಅವುಗಳನ್ನು ಭೂಮಿಯೊಂದಿಗೆ ಸೇರಿಸಬೇಕು. ಇದರಿಂದ ಭೂಮಿ ಯಾವಾಗಲೂ ಫಲವತ್ತತೆಯಿಂದ ಕೂಡಿರುತ್ತದೆ ಎಂದರು.
ನಿರ್ದೇಶಕರಾದ ಗಿರೀಶ್ ಪಟೇಲ್ ಮಾತನಾಡಿ, ಕಂಪನಿ ಮುಖಾಂತರ ಈಗಾಗಲೇ ಗಾಣದಿಂದ ತಯಾರಾದ ಶೇಂಗಾ ಎಣ್ಣೆ. ಆರ್ಗ್ಯಾನಿಕ್ ಬೆಲ್ಲ ಮುಂತಾದವುಗಳನ್ನ ಮಾರಾಟ ಮಾಡಿದ್ದೇವೆ. ರೈತರಿಗೆ ಬೇಕಾದ ಉಪಕರಣಗಳನ್ನು ಹಾಗೂ ಔಷಧಿಗಳನ್ನು, ಗ್ರಾಸ್ ಕಟ್ಟರ್ ಯಂತ್ರವನ್ನು ಮಾರಾಟ ಮಾಡಿದ್ದೇವೆ. 700 ಷೇರುದಾರರನ್ನು ಹೊಂದಿರುವ ಕಂಪನಿ ಮುಂದಿನ ದಿನಗಳಲ್ಲಿ 1000 ಷೇರುದಾರರನ್ನು ಮಾಡಬೇಕಾಗಿದೆ. ಆದ್ದರಿಂದ ರೈತರು ಕಂಪನಿಗೆ ಷೇರುದಾರರಾಗುವ ಮೂಲಕ ಸಹಕಾರ ನೀಡಬೇಕು ಎಂದರು.ಕಂಪನಿ ಅಧ್ಯಕ್ಷ ಅಪ್ಪಲರಾಜು, ಉಪಾಧ್ಯಕ್ಷ ಎಚ್.ಎಸ್. ತಿಮ್ಮಯ್ಯ. ಇಸಿಒ ಅಭಿಷೇಕ್, ನಿರ್ದೇಶಕರಾದ ಹಾಲಸ್ವಾಮಿ ಕೆ.ವಿ., ಪ್ರವೀಣ್ ನಾಗರಾಜ್, ಷೇರುದಾರರು ಭಾಗವಹಿಸಿದ್ದರು.
- - - -29ಎಚ್.ಎಲ್.ಐ1:ಹೊನ್ನಾಳಿ ತಾಲೂಕು ಸಾಸ್ವೇಹಳ್ಳಿಯಲ್ಲಿ ನಡೆದ ಬಲರಾಮ ರೈತ ಉತ್ಪಾದಕರ ಕಂಪನಿ ಸರ್ವ ಸದಸ್ಯರ ಸಭೆಯಲ್ಲಿ ಅಧ್ಯಕ್ಷ ಅಪ್ಪಲರಾಜು ಮಾತನಾಡಿದರು.