ನೂತನ ಪೊಲೀಸ್‌ ಠಾಣೆ ಉದ್ಘಾಟಿಸದಿದ್ದರೆ ಜಾಲಿಮುಳ್ಳು ಬೇಲಿ ಹಾಕುವ ಎಚ್ಚರಿಕೆ

| Published : Sep 14 2024, 01:53 AM IST

ನೂತನ ಪೊಲೀಸ್‌ ಠಾಣೆ ಉದ್ಘಾಟಿಸದಿದ್ದರೆ ಜಾಲಿಮುಳ್ಳು ಬೇಲಿ ಹಾಕುವ ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

fence, put, up, new, police

- ಪೊಲೀಸ್ ಠಾಣೆ ಕಟ್ಟಡ ಸ್ಥಳಕ್ಕೆ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಭೇಟಿ-----

ಕನ್ನಡಪ್ರಭ ವಾರ್ತೆ ಯಾದಗಿರಿ

ಯಾದಗಿರಿ ನಗರದಲ್ಲಿ 1.65 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ, ಸುಸಜ್ಜಿತ ಪೊಲೀಸ್ ಠಾಣೆ ಕಟ್ಟಡ ಕಾಮಗಾರಿ ‌ಮುಗಿದು ಒಂದು ವರ್ಷ ಗತಿಸಿದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಒಂದು ವಾರದೊಳಗೆ ಉದ್ಘಾಟಿಸದಿದ್ದರೆ ಠಾಣೆ ದ್ವಾರಕ್ಕೆ ಜಾಲಿಮುಳ್ಳು ಬೇಲಿ ಬಡಿದು ಪ್ರತಿಭಟಿಸಲಾಗುವುದು ಎಂದು ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ ಎಚ್ಚರಿಕೆ ನೀಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ನಂತರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಎಂಟು ತಿಂಗಳ ಹಿಂದೆಯೇ ಪೊಲೀಸ್ ಹೌಸಿಂಗ್ ಕಾರ್ಪೊರೇಷನ್‌ಗೆ ಕಟ್ಟಡವನ್ನು ಹಸ್ತಾಂತರ ಮಾಡಲಾಗಿದೆ. ಕೋಟ್ಯಂತರ ವೆಚ್ಚದಲ್ಲಿ ನಿರ್ಮಾಣಗೊಂಡ ಸುಸಜ್ಜಿತ ಕಟ್ಟಡ ಪುಂಡ ಪೋಕರಿಗಳ ಅಡ್ಡೆಯಾಗಿ ಮಾರ್ಪಟ್ಟಿದೆ. ಕೂಡಲೇ ಸರ್ಕಾರ ಕುಂಟು ನೆಪ ಹೇಳದೆ ಪೊಲೀಸ್ ಠಾಣೆ ಉದ್ಘಾಟನೆ ಮಾಡಬೇಕೆಂದು ಆಗ್ರಹ ‌ಮಾಡಿದ್ದಾರೆ.

ಯಾದಗಿರಿ ಜಿಲ್ಲಾ ಕೇಂದ್ರವಾಗಿ 14ವರ್ಷ ಕಳೆದ ಬಳಿಕ ನಿಜಾಮರ ಕಾಲದಲ್ಲಿ ನಿರ್ಮಿಸಿದ್ದ ಹಳೆಯ ಪೊಲೀಸ್ ಠಾಣೆ ಕಟ್ಟಡ ಕೆಡವಿ, ಅದೇ ಜಾಗದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗಿದೆ. ಬಸವರಾಜ್ ಇಟಗಿ, ಬಾಬಾ ಖಾನ್, ಸಾಬಯ್ಯ, ವಿಶ್ವನಾಥ, ಭೀಮಶೆಪ್ಪ, ರಾಜು ಇದ್ದರು.-----

12ವೈಡಿಆರ್3

ಯಾದಗಿರಿ ನಗರ ಪೊಲೀಸ್ ಠಾಣೆ ಕಟ್ಟಡ ಸ್ಥಳಕ್ಕೆ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಅವರು ಭೇಟಿ ನೀಡಿ ಪರಿಶೀಲಿಸಿದರು.