ಸಂಘಟನೆ ಬಲಿಷ್ಠವಾದಲ್ಲಿ ರೈತರಿಗೆ ಸೌಲಭ್ಯ ಸಿಗಲು ಸಾಧ್ಯ: ರವಿಕುಮಾರ್‌

| Published : Mar 08 2025, 12:32 AM IST

ಸಂಘಟನೆ ಬಲಿಷ್ಠವಾದಲ್ಲಿ ರೈತರಿಗೆ ಸೌಲಭ್ಯ ಸಿಗಲು ಸಾಧ್ಯ: ರವಿಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ರೈತ ಸಂಘಟನೆಗಳು ಬಲಿಷ್ಠವಾಗಿದ್ದಾಗ ನ್ಯಾಯ ಸಮ್ಮತವಾಗಿ ರೈತರಿಗೆ ಸೌಲಭ್ಯಗಳು ಸಿಗುತ್ತವೆ ಎಂದು ಹುಚ್ಚವ್ವನಹಳ್ಳಿ ಮಂಜುನಾಥ್ ಬಣದ ತಾಲೂಕು ರೈತ ಸಂಘ ಅಧ್ಯಕ್ಷ ಯಲೋದಹಳ್ಳಿ ರವಿಕುಮಾರ್ ಹೇಳಿದ್ದಾರೆ.

- ಕಂಚುಗಾರ್ತಿಕಟ್ಟೆ, ಶೃಂಗಾರಬಾಗಿನಲ್ಲಿ ರೈತ ಸಂಘ ಘಟಕಗಳ ಉದ್ಘಾಟನೆ - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ರೈತ ಸಂಘಟನೆಗಳು ಬಲಿಷ್ಠವಾಗಿದ್ದಾಗ ನ್ಯಾಯ ಸಮ್ಮತವಾಗಿ ರೈತರಿಗೆ ಸೌಲಭ್ಯಗಳು ಸಿಗುತ್ತವೆ ಎಂದು ಹುಚ್ಚವ್ವನಹಳ್ಳಿ ಮಂಜುನಾಥ್ ಬಣದ ತಾಲೂಕು ರೈತ ಸಂಘ ಅಧ್ಯಕ್ಷ ಯಲೋದಹಳ್ಳಿ ರವಿಕುಮಾರ್ ಹೇಳಿದರು.

ತಾಲೂಕಿನ ಬಸವಾಪಟ್ಟಣ ಹೋಬಳಿಯ ಕಂಚುಗಾರ್ತಿಕಟ್ಟೆ ಮತ್ತು ಶೃಂಗಾರಬಾಗು ಗ್ರಾಮಗಳಲ್ಲಿ ಶುಕ್ರವಾರ ರೈತ ಸಂಘ ಮತ್ತು ಹಸಿರು ಸೇನೆಯ ಗ್ರಾಮ ಘಕಟಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಪ್ರದೇಶಗಳಲ್ಲಿ ಹಲವಾರು ವರ್ಷಗಳಿಂದ ಭೂಮಿ ಇಲ್ಲದ ಬಡರೈತರು 1ರಿಂದ 2 ಎಕರೆ ಭೂ ಪ್ರದೇಶವನ್ನು ಬಗರ್‌ಹುಕುಂ ಆಗಿ 40 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದಾರೆ. ಈ ಬಡರೈತರಿಗೆ ಕಾನೂನು ಪ್ರಕಾರವಾಗಿ ಬಗರ್ ಹುಕುಂ ಜಮೀನುಗಳ ಹಕ್ಕುಪತ್ರಗಳನ್ನು ಕೊಡಿಸಲು ಹೋರಾಟ ಮುಂದುವರಿದಿದೆ. ಅತಿ ಶೀಘ್ರದಲ್ಲಿಯೇ ಭೂ ಒಡೆತನದ ಹಕ್ಕುಪತ್ರಗಳನ್ನು ಕೊಡಿಸಲಾಗುವುದು ಎಂದರು.

ರೈತ ಸಂಘದ ಪೀರಾನಾಯ್ಕ್ ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೇ ಕಂಗಲಾಗಿದ್ದಾರೆ. ಪ್ರತಿ ಹಂತಗಳಲ್ಲಿಯೋ ರೈತರ ನೆರವಿಗೆ ಸರ್ಕಾರ ಬರಬೇಕು ಎಂದರು.

ಸಮಾರಂಭದಲ್ಲಿ ತಾಲೂಕು ರೈತ ಸಂಘ, ಹಸಿರು ಸೇನೆಯ ಪ್ರಮುಖರಾದ ಮಲ್ಲಿಗೇನಹಳ್ಳಿ ಹನುಮಂತಪ್ಪ, ಜಿ.ಕೆ.ಹಳ್ಳಿ ಪ್ರಭಾಕರ್, ಹಿರೇಕೋಗಲೂರು ಕುಮಾರ್, ಎನ್.ಗಾಣದಕಟ್ಟೆ ಆಂಜನೇಯ, ಮಂಜುನಾಥ್, ವೀರಾಭೂವಿ, ಮೂರ್ತಿ, ರವಿಕುಮಾರ್, ರಾಜಪ್ಪ, ಕುಬೇರ ನಾಯ್ಕ್, ರೈತ ಸಂಘದ ಕಾರ್ಯಕರ್ತರು ಭಾಗವಹಿಸಿದ್ದರು.

- - -