ಸಾರಾಂಶ
ಘಟಪ್ರಭಾಸಕ್ಕರೆ ಕಾರ್ಖಾನೆ ಮಾಲೀಕರು ಕಬ್ಬುನುರಿಸಲು ಪ್ರಾರಂಭಿಸುವ ಮೊದಲು ದರ ಘೋಷಣೆ ಮಾಡದಿದ್ದರೆ ರೈತರು ತೀವ್ರ ಹೋರಾಟ ಮಾಡಿ ಕಬ್ಬು ಸಾಗಿಸುವ ಟ್ರ್ಯಾಕ್ಟರ್ ತಡೆದು ನಿಲ್ಲುಸುತ್ತೇವೆ ಎಂದು ರಾಜ್ಯ ರೈತ ಸಂಘದ ಮುಖಂಡರು ಎಚ್ಚರಿಸಿದರು.
ಕನ್ನಡಪ್ರಭ ವಾರ್ತೆ ಘಟಪ್ರಭಾ
ಸಕ್ಕರೆ ಕಾರ್ಖಾನೆ ಮಾಲೀಕರು ಕಬ್ಬುನುರಿಸಲು ಪ್ರಾರಂಭಿಸುವ ಮೊದಲು ದರ ಘೋಷಣೆ ಮಾಡದಿದ್ದರೆ ರೈತರು ತೀವ್ರ ಹೋರಾಟ ಮಾಡಿ ಕಬ್ಬು ಸಾಗಿಸುವ ಟ್ರ್ಯಾಕ್ಟರ್ ತಡೆದು ನಿಲ್ಲುಸುತ್ತೇವೆ ಎಂದು ರಾಜ್ಯ ರೈತ ಸಂಘದ ಮುಖಂಡರು ಎಚ್ಚರಿಸಿದರು.ಶನಿವಾರಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ಮುಖಂಡರು, ಪ್ರತಿವರ್ಷ ಸಕ್ಕರೆ ಕಾರ್ಖನೆಯವರು ರೈತರ ಜತೆ ಚರ್ಚೆ ಮಾಡಿ ಹಾಗೂ ಸಕ್ಕರೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳು ಸೇರಿ ಸಭೆ ನಡೆಸಿ ಕಬ್ಬಿಗೆ ದರ ನಿಗದಿ ಮಾಡುತ್ತಿದ್ದರು. ಆದರೆ 2024-25ರ ಸಾಲಿನಲ್ಲಿ ಜಿಲ್ಲೆಯಲ್ಲಿ ಯಾವುದೇ ಚರ್ಚೆ ಮಾಡದೆ ಕಬ್ಬು ನುರಿಸಲು ಕಾರ್ಖಾನೆ ಮಾಲೀಕರು ಪ್ರಾರಂಭಿಸುತ್ತಿದ್ದಾರೆ. ಮೊದಲು ದರ ನಿಗದಿ ಮಾಡಬೇಕು. ಒಂದು ವೇಳೆ ದರ ಘೋಷಣೆ ಮಾಡದಿದ್ದರೆ ಸಾವಿರಾರು ರೈತರು ಕಾರ್ಖಾನೆ ಮುಂದೆ ಪ್ರತಿಭಟನೆ ನಡೆಸುತ್ತೇವೆ ಹಾಗೂ ಕಾರ್ಖಾನೆಗೆ ಕಬ್ಬು ತುಂಬಿಸಿಕೊಂಡು ಹೋಗುವ ಟ್ರ್ಯಾಕ್ಟರ್ ತಡೆಯುತ್ತೇವೆ. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೆ ಜಿಲ್ಲಾಧಿಕಾರಿಗಳೆ ಹೊಣೆಗಾರರು ಎಂದು ರೈತರು ಎಚ್ಚರಿಸಿದರು.
ರೈತ ಸಂಘದ ಅಧ್ಯಕ್ಷ ಗಣೇಶ ಈಳಿಗೇರ, ರಾಜ್ಯ ಸಂಚಾಲಕ ಬಾಬುಗೌಡ ಪಾಟೀಲ, ಜಿಲ್ಲಾಧ್ಯಕ್ಷ ಸತ್ಯಪ್ಪ ಮಲ್ಲಾಪೂರೆ, ಭರ್ಮಣ್ಣ ಚಿಮ್ಮಡ, ಹಾಗೂ ಇತರರು ಇದ್ದರು.