ಮೀಸಲು ಕ್ಷೇತ್ರ ಬದಲಾದರೆ ಕೊರಟಗೆರೆ ಕ್ಷೇತ್ರದಿಂದ ಸ್ಪರ್ಧೆ

| Published : Nov 20 2025, 12:45 AM IST

ಮೀಸಲು ಕ್ಷೇತ್ರ ಬದಲಾದರೆ ಕೊರಟಗೆರೆ ಕ್ಷೇತ್ರದಿಂದ ಸ್ಪರ್ಧೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊರಟಗೆರೆ ವಿಧಾನಸಭಾ ಕ್ಷೇತ್ರ ಮೀಸಲು ಕ್ಷೇತ್ರ ಹೋಗಿ ಸಾಮಾನ್ಯ ಕ್ಷೇತ್ರವಾಗಿ ಬದಲಾದರೆ ನಾನು ಕೊರಟಗೆರೆ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತ ಎಂದು ತುಮಕೂರು ಗ್ರಾಮಾಂತರ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಕೊರಟಗೆರೆ ವಿಧಾನಸಭಾ ಕ್ಷೇತ್ರ ಮೀಸಲು ಕ್ಷೇತ್ರ ಹೋಗಿ ಸಾಮಾನ್ಯ ಕ್ಷೇತ್ರವಾಗಿ ಬದಲಾದರೆ ನಾನು ಕೊರಟಗೆರೆ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತ ಎಂದು ತುಮಕೂರು ಗ್ರಾಮಾಂತರ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ತಿಳಿಸಿದರು. ತಾಲೂಕಿನ ಕೋಳಾಲ ಹೋಬಳಿ ಮಾವತ್ತೂರು ಗ್ರಾಮದಲ್ಲಿ ವಿಷ್ನೇಶ್ವರ ದೇವಾಲಯದಲ್ಲಿ ಕಾರ್ತಿಕ ದೀಪೋತ್ಸವ ಕಾರ್ಯಕ್ರಮದಲ್ಲಿ ಸುಮಾರು ೩೦೦ ಕ್ಕೂ ಹೆಚ್ಚು ಮಹಿಳೆಯರಿಗೆ ಸೀರೆ ಬಾಗಿನ ಮತ್ತು ಬಡವರಿಗೆ ಬೆಚ್ಚನೆ ಹೊದಿಕೆ ವಿತರಿಸಿ ಮಾತನಾಡಿದರು.ಕೊರಟಗೆರೆ ಕ್ಷೇತ್ರದ ಜನ ನನ್ನ ಮೇಲೆ ಮತ್ತು ನನ್ನ ತಂದೆ ಚಿನ್ನಿಗಪ್ಪ ಕುಟುಂಬದವರ ಮೇಲೆ ಇಟ್ಟಿರುವ ಪ್ರೀತಿ ನಂಬಿಕೆಗೆ ಯಾವ ರೀತಿ ಸೇವೆ ಮಾಡಬೇಕೋ ಗೊತ್ತಿಲ್ಲ, ಕೊರಟಗೆರೆ ಜನತೆ ನನ್ನ ತಂದೆ ಚಿನ್ನಿಗಪ್ಪ ನವರಿಗೆ ರಾಜಕೀಯ ಜನ್ಮ ನೀಡಿ ಹ್ಯಾಟ್ರಿಕ್ ಗೆಲುವು ನೀಡಿ ಸಚಿವರನ್ನಾಗಿ ಮಾಡಿತ್ತು ಎಂದು ತಿಳಿಸಿದರು.ನನಗೂ ಸಹ ರಾಜಕೀಯ ಶಕ್ತಿಯನ್ನು ಕೊರಟಗೆರೆ ಕ್ಷೇತ್ರದ ಜನತೆ ನೀಡಿದ್ದಾರೆ. ಮಾವತ್ತೂರು ಗ್ರಾಮದ ಹಲವಾರು ಮುಖಂಡರು, ಯುವಕರು, ನನ್ನ ತಾಯಂದಿರು ಒತ್ತಾಯಿಸಿ ಗ್ರಾಮದ ವಿಘ್ನೇಶ್ವರನ ಪೂಜೆಗೆ ಬರುವಂತೆ ಪ್ರೀತಿಯಿಂದ ಒತ್ತಾಯಪೂರ್ವಕವಾಗಿ ಕರೆದಕ್ಕಾಗಿ ಬಂದೆ ತಾಲೂಕಿನ ಹಲವಾರು ಜನರು ನನ್ನನ್ನು ಕೊರಟಗೆರೆ ಕ್ಷೇತ್ರಕ್ಕೆ ಬರುವಂತೆ ಒತ್ತಾಯಿಸುತ್ತಿದ್ದಾರೆ. ಮುಂದೆ ನನ್ನ ಗ್ರಾಮಾಂತರ ಕ್ಷೇತ್ರ ಮೀಸಲು ಕೇತ್ರವಾಗಿ ಕೊರಟಗೆರೆ ಕ್ಷೇತ್ರ ಸಾಮಾನ್ಯ ಕ್ಷೇತ್ರವಾದರೆ ಈ ಕ್ಷೇತ್ರದಿಂದ ನೀವೆಲ್ಲ ಒಪ್ಪಿ ನಮ್ಮ ಪಕ್ಷ ಕೊರಟಗೆರೆಯಲ್ಲಿ ಸ್ಪರ್ಧಿಸುವಂತೆ ತಿಳಿಸಿದರೆ ಖಂಡಿತ ಸ್ವರ್ಧಿಸುತ್ತೇನೆ ಎಂದರು.ಈ ಸಂದರ್ಭದಲ್ಲಿ ಮುಖಂಡರಾದ ವೆಂಕಟಪ್ಪ, ಎಲ್.ವಿ.ಪ್ರಕಾಶ್, ಹನುಮಂತರಾಯಪ್ಪ, ಬೈರಸಂದ್ರ ರಮೇಶ್, ಕುಮಾರ್, ಮಂಜುನಾಥ್, ರಾಜರೆಡ್ಡಿ, ಅರಸಪ್ಪ, ಶ್ರೀಕಾಂತ, ರಾಜು ಸೇರಿದಂತೆ ಇತರರು ಇದ್ದರು.