ನಿರ್ಬಂಧ ಹಿಂಪಡೆಯದಿದ್ರೆ ನಾವೇ ಶ್ರೀಗಳ ಕರೆತರ್ತೆವೆ

| Published : Oct 18 2025, 02:02 AM IST

ನಿರ್ಬಂಧ ಹಿಂಪಡೆಯದಿದ್ರೆ ನಾವೇ ಶ್ರೀಗಳ ಕರೆತರ್ತೆವೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಕನ್ಹೇರಿ ಶ್ರೀಗಳಿಗೆ ಜಿಲ್ಲಾ ಪ್ರವೇಶ ನಿರ್ಬಂಧ ತೆರವುಗೊಳಿಸುವಂತೆ ಆಗ್ರಹಿಸಿ ವಿವಿಧ ಶ್ರೀಗಳು ಹಾಗೂ ಮಹಾರಾಷ್ಟ್ರದಿಂದ ಆಗಮಿಸಿದ್ದ ಭಕ್ತರು ಸೇರಿದಂತೆ ಹಲವರು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ನೇತೃತ್ವದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಕನ್ಹೇರಿ ಶ್ರೀಗಳಿಗೆ ಜಿಲ್ಲಾ ಪ್ರವೇಶ ನಿರ್ಬಂಧ ತೆರವುಗೊಳಿಸುವಂತೆ ಆಗ್ರಹಿಸಿ ವಿವಿಧ ಶ್ರೀಗಳು ಹಾಗೂ ಮಹಾರಾಷ್ಟ್ರದಿಂದ ಆಗಮಿಸಿದ್ದ ಭಕ್ತರು ಸೇರಿದಂತೆ ಹಲವರು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ನೇತೃತ್ವದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.

ಪಟ್ಟಣದ ಸಿದ್ದರಾಮೇಶ್ವರ ಮಹಾರಾಜ ಮಠದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ಬಸವೇಶ್ವರ ವೃತ್ತದಲ್ಲಿ ಸಮಾವೇಶಗೊಂಡಿತು.

ಈ ವೇಳೆ ಮಾತನಾಡಿದ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಕನ್ಹೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿಗೆ ಕೋಟಿ ಕೋಟಿ ಭಕ್ತರು ಇದ್ದಾರೆ ಎಂಬುದನ್ನು ಸಿಎಂ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವರು ಅರಿತುಕೊಳ್ಳಬೇಕು. ನಾವು ಶಾಂತಿ ಪ್ರಿಯರು, ಕಾನೂನು ಪಾಲಕರು. ಅದಕ್ಕೋಸ್ಕರ ಗೂಂಡಾವರ್ತನೆ, ದುರಾಡಳಿತದ ವಿರುದ್ಧ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದೇವೆ ಎಂದರು.ಮುಂದಿನ ದಿನಗಳಲ್ಲಿ ಸಿಎಂ, ಜಿಲ್ಲಾ ಉಸ್ತುವಾರಿ ಮಂತ್ರಿಗಳ ಕುಟುಂಬ ರಕ್ಷಣೆ ಮಾಡಲು ಹಿಂದು ಸಮಾಜ ಎಂಬುವುದನ್ನು ಮರೆಯಬಾರದು. ಧರ್ಮ ಒಡೆಯುವುದು ಹಾಗೂ ಸಂತರ ಮೇಲೆ ದೌರ್ಜನ್ಯ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಮುಂದೆಂದೂ ಅಧಿಕಾರಕ್ಕೆ ಬರುವುದಿಲ್ಲ. ಕಾಡಸಿದ್ದೇಶ್ವರ ಸ್ವಾಮಿಜಿ ಸಾರಾಯಿ ಕುಡಿಯಿರಿ, ಮಾಂಸ ತಿನ್ನಿರಿ ಎಂದರೆ ತಪ್ಪಿಲ್ಲ ಎಂದು ಹೇಳಿದ್ದಕ್ಕೆ ಬೈಯ್ದಿದ್ದಾರೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಧರ್ಮ ಒಡೆಯುವ ಕೆಲಸ ಮಾಡಿ ಪಶ್ಚಾತ್ತಾಪ ಪಟ್ಟಿರಿ. ಮತ್ತೆ ಅದೇ ಕೆಲಸ ಮಾಡುತ್ತಿದ್ದೀರಿ. ಕನ್ಹೇರಿ ಶ್ರೀಗಳ ನಿರ್ಬಂಧ ಹಿಂದೆ ಪಡೆಯಬೇಕು. ಹಿಂಪಡೆಯದಿದ್ದರೆ 1 ಲಕ್ಷ ಜನರು ಕನ್ಹೇರಿ ಮಠಕ್ಕೆ ಹೋಗಿ ಸ್ವಾಮೀಜಿ ಅವರನ್ನು ಇಲ್ಲಿಗೆ ಕರೆತರುವ ಕೆಲಸ ಮಾಡುತ್ತೇವೆ ಎಂದು ಕಿಡಿಕಾರಿದರು.

ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ನೀತಿಗೆ ನಮ್ಮ ವಿರೋಧವಿದೆ. ಕಾಯಕ ಜೀವಿಗಳಾಗಿರುವ ಕನ್ಹೇರಿ ಸ್ವಾಮೀಜಿಯವರ ಮೇಲೆ ಇಂತಹ ಕ್ರಮ ತೆಗೆದುಕೊಂಡಿರುವದು ಖಂಡನೀಯ. ಕೂಡಲೇ ಸರ್ಕಾರ ಈ ಕ್ರಮವನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದರು.

ಶಂಕರಾನಂದ ಶ್ರೀಗಳು ಮಾತನಾಡಿ, ಕಳೆದ 30 ವರ್ಷಗಳಿಂದ ಕನ್ಹೇರಿ ಶ್ರೀಗಳು ಸಾಮಾಜಿಕ ಕಾರ್ಯ ಮಾಡುತ್ತಿದ್ದಾರೆ. ಇಂತಹ ಶ್ರೀಗಳನ್ನು ಜಿಲ್ಲೆಗೆ ಪ್ರವೇಶ ಮಾಡದಂತೆ ನಿರ್ಬಂಧ ಹೇರಿರುವುದು ಸರಿಯಾದ ಕ್ರಮವಲ್ಲ. ಈ ಘಟನೆಗೆ ಕಾರಣರಾದವರು ಮುಂದಿನ ದಿನಗಳಲ್ಲಿ ತಕ್ಕ ಶಾಸ್ತಿ ಅನುಭವಿಸಲು ಸಿದ್ದರಾಗಬೇಕು. ಕೂಡಲೇ ಜಿಲ್ಲಾಧಿಕಾರಿಗಳು ತಮ್ಮ ಆದೇಶವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಶ್ರದ್ದಾನಂದ ಶ್ರೀಗಳು, ಯೋಗಾಪುರದ ಯೋಗೀಶ್ವರಿ ಮಾತಾಜಿ, ಬಂಜಾರ ಸಮಾಜದ ಗೋಪಾಲ ಮಹಾರಾಜರು, ಸುನೀಲ ಬೈರವಾಡಗಿ ಮಾತನಾಡಿದರು. ಬಿಜೆಪಿ ಮಂಡಳ ಅಧ್ಯಕ್ಷ ಸಿದ್ರಾಮ ಕಾಖಂಡಕಿ, ಮುಖಂಡರಾದ ಸಂತೋಷ ನಾಯಕ, ಪ್ರವೀಣ ಪವಾರ, ಬಸವರಾಜ ಗಚ್ಚಿನವರ, ಅರ್ಜುನ ಅಂಬಿಗೇರ, ಸುಭಾಸ ಕಟ್ಟಿಮನಿ, ದಯಾನಂದ ಸಾರವಾಡ, ಮಹೇಶ ಸಾಲವಾಡಗಿ, ಶಂಕರ ಶಿವಣಗಿ ಸೇರಿ ಭಕ್ತರು ಇದ್ದರು.